Advertisement

Kinnigoli ಗ್ರಾಹಕರ ಸೋಗಿನಲ್ಲಿ ವಂಚನೆ: ಸೆರೆ

11:33 PM Jul 17, 2024 | Team Udayavani |

ಕಿನ್ನಿಗೋಳಿ: ಕಿನ್ನಿಗೋಳಿ ಮೀನು ಮಾರುಕಟ್ಟೆಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ವ್ಯಾಪಾರಿಗಳನ್ನು ವಂಚಿಸುತ್ತಿದ್ದ ತಂಡವನ್ನು ಮೂಲ್ಕಿ ಪೋಲಿಸರು ಬಂಧಿಸಿದ್ದಾರೆ.

Advertisement

ಸ್ಕಾರ್ಪಿಯೋ ಕಾರಿನಲ್ಲಿ ಬಂದ ಮೂವರು ಯುವಕರು ಇಲ್ಲಿನ ಮಾರುಕಟ್ಟೆಯ ಅಂಗಡಿಯೊಂದಕ್ಕೆ ಬಂದು, ಸಾಮಗ್ರಿಗಳನ್ನು ತೆಗೆದುಕೊಂಡು, ಗೂಗಲ್‌ ಪೇ ಮಾಡುತ್ತೇನೆ ಎಂದು ಹೇಳಿದ್ದಾರೆ.

ಈ ವೇಳೆ ಅವರು ನನ್ನಲ್ಲಿ ಹಣವಿಲ್ಲ. ಹಾಗಾಗಿ 500 ರೂ. ಕೊಡಿ ಸಾಮನು ಮತ್ತು 500 ರೂ. ಒಟ್ಟಿಗೆ ಗೂಗಲ್‌ ಪೇ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಸಂದರ್ಭ ಪಕ್ಕದ ಅಂಗಡಿ ಮಾಲಕರಿಗೆ ಸಂಶಯ ಬಂದು ವಿಚಾರಿಸಿದಾಗ ಇದು ವಂಚನ ತಂಡ ಎಂದು ಖಾತ್ರಿಯಾಗಿದೆ. ಆ ಬಳಿಕ ಇವರು ಪರಾರಿಯಾಗಲು ಯತ್ನಿಸಿದಾಗ ಜನರು ಬೆನ್ನಟ್ಟಿ ಇಬ್ಬರನ್ನು ಹಿಡಿದು ಪೋಲಿಸರ ವಶಕ್ಕೆ ಒಪ್ಪಿಸಿದ್ದಾರೆ. ಓರ್ವ ಪರಾರಿಯಾಗಿದ್ದಾನೆ. ಅವರು ಬಂದ ಗಾಡಿ ಬಜಪೆ ಪರಿಸರದ್ದು ಎಂದು ತಿಳಿದು ಬಂದಿದೆ.

ಪಕ್ಷಿಕೆರೆಯಲ್ಲೂ ವಂಚನೆ
ಇದೇ ತಂಡ ಕಳೆದ ಶುಕ್ರವಾರ ಪಕ್ಷಿಕೆರೆಯಲ್ಲಿ ಕೋಳಿ ಮಾಂಸದ ಅಂಗಡಿಗೆ ಬಂದು 25 ಕಿಲೋ ಕೋಳಿ ಮಾಂಸ ತಯಾರು ಮಾಡಿ ಕೊಡಿ ಎಂದು ಹೇಳಿದ್ದು, ಅಂಗಡಿಯವನ ಬಳಿ 700 ರೂ. ಕೊಡುವಂತೆ ಕೇಳಿ ಗೂಗಲ್‌ ಪೇ ಮಾಡುತ್ತೇನೆಂದು ಹೇಳಿ ಪಡೆದು ಬಳಿಕ ಪರಾರಿಯಾಗಿದ್ದರು.

ಕಿನ್ನಿಗೋಳಿ: ದಾಂಧಲೆ ನಿರತ ಯುವಕನ ಸೆರೆ
ಕಿನ್ನಿಗೋಳಿ: ಮದ್ಯ ಸೇವಿಸಿ ಇಲ್ಲಿನ ಬಸ್‌ ನಿಲ್ದಾಣದಲ್ಲಿ ದಾಂಧಲೆ ನಡೆಸಿದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳ ವಾರ ಅಪರಾಹ್ನ ಮದ್ಯಪಾನ ಮಾಡಿದ್ದ ಕೆಲವು ಕೂಲಿ ಕಾರ್ಮಿಕರು ಜಗಳ ಆರಂಭಿಸಿದ್ದರು. ಬಳಿಕ ಅವರ ಪೈಕಿ ಯುವಕನೊಬ್ಬ ಕಟ್ಟಿಗೆಯನ್ನು ಹಿಡಿದುಕೊಂಡು ಬಂದು ದ್ವಿಚಕ್ರ ವಾಹನವನ್ನು ಪುಡಿಗೈದದ್ದಲ್ಲದೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದನು. ವಿಷಯ ತಿಳಿದ ಪೊಲೀಸರು ಧಾವಿಸಿ ಬಂದು ಯುವಕನನ್ನು ಬಂಧಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next