Advertisement

ಕಿಂಗ್ಸ್‌ ಇಲೆವೆನ್‌ಗೆ ಎರಡು ತವರು

06:55 AM Jan 07, 2018 | |

ಮೊಹಾಲಿ: ಪ್ರೀತಿ ಜಿಂಟಾ ಸಹ ಮಾಲಕತ್ವದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ಗ ತವರಿನ ಮೊಹಾಲಿ ಅಂಗಳದ ಮೇಲೆ ನಿರಾಸೆ ಮೂಡಿದೆಯೇ? ಹೌದು ಎನ್ನುತ್ತದೆ ಇತ್ತೀಚಿನ ವಿದ್ಯಮಾನ. 2018ರ ಐಪಿಎಲ್‌ನಲ್ಲೂ 2 ತವರಿನ ಅಂಗಳಗಳನ್ನು ಬಳಸಿಕೊಳ್ಳುವುದು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಯೋಜನೆ. ಮೊಹಾಲಿ ಜತೆಗೆ ಇಂದೋರ್‌ ಕೂಡ ಮತ್ತೂಮ್ಮೆ “ಹೋಮ್‌ ಗ್ರೌಂಡ್‌’ ಆಗಿರಲಿದೆ ಎಂಬುದು ಖಾತ್ರಿಯಾಗಿದೆ.

Advertisement

ಪಂಜಾಬ್‌ ಕ್ರಿಕೆಟ್‌ ಅಸೋಸಿಯೇಶನ್‌ನಿಂದ (ಪಿಸಿಎ) ಐಪಿಎಲ್‌ ತಂಡಕ್ಕೆ ಸೂಕ್ತ ಪ್ರೋತ್ಸಾಹ ಲಭಿಸದ ಕಾರಣ ಮೊಹಾಲಿಯಿಂದ ಬಿಡುಗಡೆಗೊಳಿಸುವಂತೆ ಕಳೆದ ಆಗಸ್ಟ್‌ನಲ್ಲೇ ಕಿಂಗ್ಸ್‌ ಇಲೆವೆನ್‌ ಮಾಲಕರು ಬಿಸಿಸಿಐಗೆ ಮನವಿ ಸಲ್ಲಿಸಿದ್ದರು. ಪಂಜಾಬ್‌ ಸರಕಾರ ಮತ್ತು ಪಿಸಿಎ ನಡುವೆ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದಂತೆ ಕೆಲವು ಸಂಗತಿಗಳು ಇತ್ಯರ್ಥವಾಗದಿದ್ದುದೇ ಇದಕ್ಕೆ ಕಾರಣ.

ಈ ಕುರಿತು ಪ್ರತಿಕ್ರಿಯಿಸಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಸಿಇಒ ಸತೀಶ್‌ ಮೆನನ್‌, “ಸರಾಕರ ಮತ್ತು ಪಂಜಾಬ್‌ ಕ್ರಿಕೆಟ್‌ ಮಂಡಳಿ ನಡುವಿನ ಭದ್ರತಾ ವಿಚಾರಗಳು ತಾರ್ಕಿಕ ಅಂತ್ಯ ಕಂಡಿವೆ. ಮೊಹಾಲಿಯಲ್ಲಿ ಆಡುವುದು ನಮ್ಮ ಪಾಲಿನ ಸಂತೋಷದ ವಿಷಯ. ಆದರೆ ಇಲ್ಲಿ ನಾವು 4 ತವರಿನ ಪಂದ್ಯಗಳನ್ನಷ್ಟೇ ಆಡಲಿದ್ದು, ಉಳಿದ ಮೂರನ್ನು ಇಂದೋರ್‌ನಲ್ಲಿ ಆಡಲು ನಿರ್ಧರಿಸಿದ್ದೇವೆ. ಕಳೆದ ವರ್ಷ ಇಂದೋರ್‌ ಪಂದ್ಯದ ವೇಳೆ ಕ್ರಿಕೆಟ್‌ ಅಭಿಮಾನಿಗಳಿಂದ ಭಾರೀ ಪ್ರೋತ್ಸಾಹ ಲಭಿಸಿತ್ತು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next