Advertisement

ಆಫ್ ಸ್ಪಿನ್ನರ್‌ ಅಶ್ವಿ‌ನ್‌ ಈಗ ಲೆಗ್‌ ಸ್ಪಿನ್ನರ್‌!

07:25 AM Apr 20, 2018 | Team Udayavani |

ಮೊಹಾಲಿ: ಆಫ್ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿ‌ನ್‌ ಈಗ ಲೆಗ್‌ ಸ್ಪಿನ್ನರ್‌ ಆಗಿ ಬದಲಾಗಿದ್ದಾರೆ. ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ನಾಯಕನಾಗಿರುವ ಅಶ್ವಿ‌ನ್‌ ಲೆಗ್‌ ಸ್ಪಿನ್‌ ಮಾಡುತ್ತಿರುವುದು ವಿಶೇಷವಾಗಿದೆ.

Advertisement

ಈ ಹಿಂದೆಯೇ ತಾನು ಲೆಗ್‌ ಸ್ಪಿನ್‌ ಬೌಲಿಂಗ್‌ ಮಾಡುವುದಾಗಿ ಅಶ್ವಿ‌ನ್‌ ಹೇಳಿಕೊಂಡಿದ್ದರು. ಇದೀಗ ಅಧಿಕೃತವಾಗಿ ಆರಂಭ ಮಾಡಿಕೊಂಡಿದ್ದಾರೆ. ವಿದೇಶಿ ಬ್ಯಾಟ್ಸ್‌ಮನ್‌ಗಳು ಆಫ್ಸ್ಪಿನ್‌ಗೆ ಸಲೀಸಾಗಿ ಆಡುವುದನ್ನು ಕಲಿತಿದ್ದು ಅಶ್ವಿ‌ನ್‌ಗೆ ವಿಕೆಟ್‌ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಲೆಗ್‌ಸ್ಪಿನ್‌ ಕಲಿತು ಬೌಲಿಂಗ್‌ ಮಾಡುತ್ತಿದ್ದಾರೆ. ಆದರೆ ಅಶ್ವಿ‌ನ್‌ ಅವರ ಈ ಬೌಲಿಂಗ್‌ ಶೈಲಿಯ ಬದಲಾವಣೆ ಸಮಂಜಸವೆನಿಸದು ಮಾಜಿ ಕ್ರಿಕೆಟಿಗ ಕೆ. ಶ್ರೀಕಾಂತ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next