ದುಬೈ: ಐಪಿಎಲ್ 13ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.
ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಪಂದ್ಯ ನಡೆಯುತ್ತಿದ್ದು, ಸಮಬಲರ ನಡುವೆ ತೀವ್ರ ಪೈಪೋಟಿ ನಿರೀಕ್ಷೆ ಮಾಡಲಾಗಿದೆ.
ಎರಡು ತಂಡಗಳು 24 ಬಾರಿ ಮುಖಾಮುಖಿಯಾಗಿದ್ದು 14 ರಲ್ಲಿ ಪಂಜಾಬ್ ಗೆಲುವು ಸಾಧಿಸಿದರೆ, 10ರಲ್ಲಿ ಡೆಲ್ಲಿ ತಂಡ ಜಯಗಳಿಸಿದೆ.
ಕನ್ನಡಿಗರಿಂದಲೇ ಕಿಂಗ್ಸ್ ಇಲವೆನ್ ಪಂಜಾಬ್ ಕೂಡಿದೆ. ಕರ್ನಾಟಕದ ತಾರಾ ಆಟಗಾರ ಕೆ.ಎಲ್ ರಾಹುಲ್ ಇದೇ ಮೊದಲ ಬಾರಿಗೆ ಐಪಿಎಲ್ ತಂಡ ಮುನ್ನಡೆಸಲಿದ್ದು, ಇವರ ನಾಯಕತ್ವದಲ್ಲಿ ಪಂಜಾಬ್ ಚೊಚ್ಚಲ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ. ತಂಡಕ್ಕೆ ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಲೆ ಕೋಚ್ ಆಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಕೂಡ ಯುವ ಹಾಗೂ ಅನುಭವಿ ಆಟಗಾರರೊಂದಿಗೆ ಸಮತೋಲನದಿಂದ ಕೂಡಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಹಾಗೂ ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಟಿಂಗ್ ಮಾರ್ಗದರ್ಶನದಲ್ಲಿ ಅನುಭವಿಗಳ ದಂಡೇ ತಂಡಲ್ಲಿದೆ.
ಆಡುವ ಹನ್ನೊಂದರ ಬಳಗ
ಕಿಂಗ್ಸ್ ಇಲವೆನ್ ಪಂಜಾಬ್: ಕೆ.ಎಲ್ ರಾಹುಲ್(ನಾಯಕ), ಮಯಾಂಕ್, ಕರುಣ್ ನಾಯರ್, ಸರ್ಫರಾಜ್, ಮ್ಯಾಕ್ಸ್ ವೆಲ್, ಕೆ. ಗೌತಮ್, ಮೊಹಮ್ಮದ್ ಶಮಿ, ನಿಕಲೋಸ್ ಪೂರನ್, ಕ್ರಿಸ್ ಜೋರ್ಡನ್, ಬಿಶ್ನೋಯ್, ಶೆಲ್ಡನ್ ಕ್ವಾಟ್ರೇಲ್
ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್ (ನಾಯಕ), ಶಿಮ್ರೋನ್ ಹೆಟ್ಮೇಯರ್, ರಿಷಬ್ ಪಂತ್, ಮಾರ್ಕಸ್ ಸ್ಟೋಯ್ನಿಸ್, ಕಗಿಸೋ ರಬಾಡ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಅನ್ರಿಚ್ ನೋರ್ತ್ ಜೆ, ಮೋಹಿತ್ ಶರ್ಮಾ