ಬೆಳ್ತಂಗಡಿ: ಪಶ್ಚಿಮ ವಾಹಿನಿ ಯೋಜನೆಯಡಿ ಬೆಳ್ತಂಗಡಿ ತಾಲೂಕಿಗೆ ಮಂಜೂರಾದ 23ಕ್ಕೂ ಅಧಿಕ ಕಿಂಡಿ ಅಣೆಕಟ್ಟುಗಳ ಶೇ. 90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮಾರ್ಚ್ ಒಳಗಾಗಿ ಎಲ್ಲ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಣ್ಣ ನೀರಾವರಿ, ಕಾನೂನು ಹಾಗೂ ಸಂಸದೀಯ ವ್ಯವಹಾರ ಮಂಡಳಿ ಸಚಿವ ಜೆ.ಸಿ. ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪಶ್ಚಿಮವಾಹಿನಿ ಯೋಜನೆಯಡಿ ತಾಲೂಕಿನ ಧರ್ಮಸ್ಥಳದ ಮುಳಿಕ್ಕಾರ ಬಂದಾರಿನ ಪೆರಡಾಲ, ಪಜಿರಡ್ಕ,
ಮುಂಡಾಜೆಯ ಕಡಂಬಳ್ಳಿ ಮೊದ ಲಾದ ಕಡೆ ನಿರ್ಮಾಣಗೊಳ್ಳುತ್ತಿರುವ ಕಿಂಡಿ ಅಣೆಕಟ್ಟುಗಳ ಕಾಮಗಾರಿಯನ್ನು ಸಚಿವರು ಶನಿವಾರ ವೀಕ್ಷಿಸಿದರು.
ಬೆಳ್ತಂಗಡಿ ತಾಲೂಕಿಗೆ ಇದೀಗ ಸಣ್ಣ ನೀರಾವರಿ ಇಲಾಖೆಯಡಿ 36 ಕೋ.ರೂ. ವೆಚ್ಚದಲ್ಲಿ 12 ಕಿಂಡಿ ಅಣೆಕಟ್ಟು ಗಳು ನಿರ್ಮಾಣವಾಗಲಿವೆ. ಈಹಿಂದಿನ ಅನುದಾನದಡಿ ನಿರ್ಮಾಣ ವಾಗುತ್ತಿರುವ ಮುಳಿಕ್ಕಾರ, ಮುಂಡಾಜೆಯ ಕಡಂಬಳ್ಳಿ ಕಿಂಡಿ ಅಣೆಕಟ್ಟುಗಳು ಉದ್ಘಾಟನೆಗೆ ಸಜ್ಜಾಗಿವೆ ಎಂದು ಹೇಳಿದ ಅವರು ಪೆರಡಾಲ, ಪಜಿರಡ್ಕದ ಕಾಮಗಾರಿ ಸಹಿತ ನೂತನ 12 ಕಿಂಡಿ ಅಣೆಕಟ್ಟನ್ನು ಮಾರ್ಚ್ ಒಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ:ರಾಜ್ಯಾದ್ಯಂತ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ಇಳಿಕೆ
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಸರಕಾರದ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಸಣ್ಣ ನೀರಾವರಿ ಇಲಾಖೆ ಮೈಸೂರು ವಿಭಾಗದ ಅಧೀಕ್ಷಕ ಎಂಜಿನಿಯರ್ ರಾಜಶೇಖರ್ ಯಡಹಳ್ಳಿ, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ಜಯಾ ಮೋನಪ್ಪ ಗೌಡ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್, ತಾ.ಪಂ.ಮಾಜಿ ಸದಸ್ಯೆ ಧನಲಕ್ಷ್ಮೀ ಜನಾರ್ದನ್, ಮಂಗಳೂರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಗೋಕುಲ್‌ದಾಸ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಷ್ಣು ಕಾಮತ್,ಸಹಾಯಕ ಎಂಜಿನಿಯರ್‌ಗಳಾದಶಿವಪ್ರಸನ್ನ, ರಾಜೇಶ್ ಇದ್ದರು.