Advertisement

ಅಟ್ಲಾಜೆ-ಬದಿನಡೆಯಿಂದ ಪಡಂಗಡಿಗೆ ಸಂಪರ್ಕ ಬೆಸುಗೆ

09:18 AM Apr 18, 2022 | Team Udayavani |

ಬೆಳ್ತಂಗಡಿ: ಅಂತರ್ಜಲ ವೃದ್ಧಿಗಾಗಿ ಕೃಷಿಕರಿಗೆ ವರದಾನವಾಗಿ ಜತೆಗೆ ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ರಸ್ತೆಗೆ ಕೊಂಡಿಯಾಗಿ ಕಿಂಡಿ ಅಣೆಕಟ್ಟುಗಳು ಇಂದು ಮಹತ್ವ ಪಡೆದಿದ್ದು, ಕಳೆದ ಹತ್ತಾರು ವರ್ಷಗಳಿಂದ ಬೇಡಿಕೆಯಲ್ಲಿದ್ದ ಬಳಂಜ-ಬದಿನಡೆಯಾಗಿ ಪಡಂಗಡಿ ಸಂಪರ್ಕಿಸುವ ಎರಡು ಗ್ರಾಮಗಳ ಸಂಪರ್ಕ ರಸ್ತೆಗೆ ಕೊಂಡಿಯಾಗಿ 3 ಕೋ.ರೂ. ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಇದೀಗ ಬಳಕೆಗೆ ಸಿದ್ಧಗೊಂಡಿದೆ.

Advertisement

ಕೃಷಿ ಕುಟುಂಬಗಳೇ ಹೆಚ್ಚಾಗಿರುವ ಬಳಂಜ- ಪಡಂಗಡಿ ಗ್ರಾಮಗಳ ಮಧ್ಯೆ ಇರುವ ಈ ಪ್ರದೇಶದಲ್ಲಿ ಫಲ್ಗುಣಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿದೆ.

ಈ ಮೂಲಕ ಬಳಂಜ, ನಾಲ್ಕೂರು, ತೆಂಕಕಾರಂದೂರು, ಸುತ್ತಮುತ್ತಲಿನ ಭಾಗದ ಜನರಿಗೆ ಪಡಂಗಡಿ, ವೇಣೂರು, ಮಡಂತ್ಯಾರು ಮೂಲಕ ಮಂಗಳೂರು ಸಂಪರ್ಕಿಸಲು ಈ ಸೇತುವೆ ತೀರ ಹತ್ತಿರದ ಸಂಪರ್ಕ ರಸ್ತೆಯಾಗಿಯೂ ಉಪಯೋಗವಾಗಲಿದೆ.

ರಸ್ತೆಗಾಗಿ ಕೃಷಿ ಭೂಮಿ ದಾನ

ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರವೂ ಅತ್ಯವಶ್ಯ. ಈ ನೆಲೆಯಲ್ಲಿ ಕಿಂಡಿ ಅಣೆಕಟ್ಟು ಸಾಗುವ ರಸ್ತೆ ಅಭಿವೃದ್ಧಿ ದೃಷ್ಟಿಯಿಂದ ಇಲ್ಲಿನ ಕೃಷಿಕರು ಕೃಷಿ ಭೂಮಿ ದಾನ ಮಾಡುವ ಮೂಲಕ ಊರಿನ ಹಿತ ಕಾಪಾಡಿದ್ದಾರೆ. ಸಾರ್ವಜನಿಕರ ಅನುಕೂಲಕ್ಕೆ ಇಲ್ಲಿನ ಸತೀಶ್‌ ರೈ ಬಾರ್ದಡ್ಕ, ಹರೀಶ್‌ ರೈ ಪಡ್ಡಂಗೆ, ಅಬ್ಟಾಸ್‌ ಪಜಿಮಾರು, ಜಯಸಾಲ್ಯಾನ್‌ ಬದಿನಡೆ ಲಕ್ಷಾಂತರ ರೂ. ಬೆಳೆಬಾಳುವ ಕೃಷಿ ಭೂಮಿಯನ್ನು ದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

Advertisement

ಬೇಕಿದೆ ರಸ್ತೆ ಅಭಿವೃದ್ಧಿಗೆ ಅನುದಾನ

ಅಟ್ಲಾಜೆ- ಬದಿನಡೆ-ಪಡಂಗಡಿ ಸಂಪರ್ಕ ರಸ್ತೆ ಇದೀಗ ಅಭಿವೃದ್ಧಿಗೊಳ್ಳಬೇಕಾಗಿದ್ದು ಸುಮಾರು 3 ಕಿ.ಮೀ. ರಸ್ತೆ ಡಾಮರೀಕರಣಗೊಂಡರೆ ಪ್ರಯಣಕ್ಕೆ ಅನುಕೂಲವಾಗಿಲಿದೆ. ಈಗ ಮಣ್ಣಿನ ರಸ್ತೆಯಾಗಿದ್ದು ಮಳೆಗಾಲದಲ್ಲಿ ಈ ಭಾಗದ ರಸ್ತೆಯಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ರಸ್ತೆ ಡಾಮರೀಕರಣಗೊಂಡರೆ ಬದಿನಡೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಶಾಸ್ತಾರ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸಹಿತ ಎಲ್ಲರಿಗೂ ಅನುಕೂಲವಾಗಲಿದೆ ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.

ಅತೀ ಹೆಚ್ಚು ಕಿಂಡಿ ಅಣೆಕಟ್ಟು

ಅಂತರ್ಜಲ ಹೆಚ್ಚಿಸಲು ಹಾಗೂ ಕೃಷಿಗೆ ಅನುಕೂಲವಾಗುವ ಹಾಗೆ ಜಿಲ್ಲೆಯಲ್ಲೇ ಅತೀ ಹೆಚ್ಚು ಕಿಂಡಿ ಅಣೆಕಟ್ಟುಗಳನ್ನು ಕ್ಷೇತ್ರದಲ್ಲಿ ನಿರ್ಮಿಸಲಾಗಿದೆ. ಬಹುವರ್ಷಗಳ ಬೇಡಿಕೆಯಾದ ಬಳಂಜ-ಬದಿನಡೆಯಲ್ಲಿ ಕಿಂಡಿ ಅಣೆಕಟ್ಟನ್ನು 3 ಕೋ.ರೂ. ವೆಚ್ಚದ ನಿರ್ಮಿಸಲಾಗಿದೆ. ಇದಕ್ಕೆ ಪೂರಕವಾಗಿ ಬಳಂಜ ಇನ್ನಿತರ ಭಾಗಗಳಿಂದ ಪಡಂಗಡಿಗೆ ಸಂಪರ್ಕಿಸುವ ರಸ್ತೆ ನಿರ್ಮಿಸಲು ತಮ್ಮ ಪಟ್ಟಾ ಜಾಗವನ್ನು ಬಿಟ್ಟುಕೊಡುವ ಮೂಲಕ ಅಭಿವೃದ್ಧಿಗೆ ಸಹಕರಿಸಿದ್ದಾರೆ. -ಹರೀಶ್‌ ಪೂಂಜ, ಬೆಳ್ತಂಗಡಿ ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next