Advertisement

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಿಮ್ಸ್‌ ಕಿರಿಯ ವೈದ್ಯರ ಪ್ರತಿಭಟನೆ

05:50 PM Dec 01, 2021 | Team Udayavani |

ಹುಬ್ಬಳ್ಳಿ: ಕೋವಿಡ್‌-19ರ ವೇಳೆ ಕಾರ್ಯನಿರ್ವಹಿಸಿದ ವೈದ್ಯರಿಗೆ ಆರು ತಿಂಗಳ ಕೋವಿಡ್‌ ರಿಸ್ಕ್ ಭತ್ಯೆ ನೀಡಬೇಕು. ಕೂಡಲೇ ನೀಟ್‌ ಪಿಜಿ ಕೌನ್ಸೆಲಿಂಗ್‌ ನಡೆಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಿಮ್ಸ್‌ನ ಕಿರಿಯ ವೈದ್ಯರ ಸಂಘದಿಂದ ಮಂಗಳವಾರ ಕಿಮ್ಸ್‌ ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಸಂಘದ ಅಧ್ಯಕ್ಷ ಡಾ| ಕೃಷ್ಣ ವಂಶಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಿರಿಯ ವೈದ್ಯರು, ಕೋವಿಡ್‌ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದರೂ ಕಳೆದ ಆರು ತಿಂಗಳಿನಿಂದ ಕೋವಿಡ್‌ ರಿಸ್ಕ್ ಭತ್ಯೆ ನೀಡಿಲ್ಲ. ಈಗ ಮತ್ತೆ 3ನೇ ಅಲೆ ನಿರ್ವಹಣೆ ಮಾಡಬೇಕಾಗಿದೆ. ಸಮಯಕ್ಕೆ ಸರಿಯಾಗಿ ಸಂಬಳ, ಭತ್ಯೆ ಕೊಡಲ್ಲ. ಪದವಿ ಪೂರ್ವ ವಿದ್ಯಾರ್ಥಿಗಳು ಮತ್ತು ಹೌಸ್‌ ಸರ್ಜನ್ಸ್‌ಗೆ ವೇಳೆಗನುಗುಣವಾಗಿ ಸ್ಟೆ ಫಂಡ್‌ ನೀಡಬೇಕು. ಕೋವಿಡ್‌ ವೇಳೆ ನೀಟ್‌ ಪಿಜಿ ಪರೀಕ್ಷೆ ಮುಂದೂಡುವ ಅವಶ್ಯಕತೆ ಏನಿತ್ತು. ಪರೀಕ್ಷೆ ನಡೆಸಿದರೆ ಫಲಿತಾಂಶ ಬರುತ್ತದೆ.

ಆಗ ಕೌನ್ಸೆಲಿಂಗ್‌ ನಡೆಸಿ ವೈದ್ಯರಿಗೆ ಪೋಸ್ಟ್‌ ಮಾಡಿದರೆ ಅವರು ಕೋವಿಡ್‌ ಕಾರ್ಯ ನಿರ್ವಹಿಸುತ್ತಾರೆ. ಕಾರಣ ಕೂಡಲೇ ನೀಟ್‌ ಪಿಜಿ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭಿಸಬೇಕು. ಆಗ ನಮ್ಮ ಮೇಲಿನ ಒತ್ತಡದ ಭಾರ ಕಡಿಮೆಯಾಗುತ್ತದೆ. ಕೋವಿಡ್‌ ಸಂದರ್ಭದಲ್ಲಿ ಶೈಕ್ಷಣಿಕ ಶುಲ್ಕ ಶೇ. 400 ಹೆಚ್ಚಿಸಿದ್ದನ್ನು ಕೈಬಿಟ್ಟು 2018-19ರ ಶೈಕ್ಷಣಿಕ ವರ್ಷದಲ್ಲಿನ ಶುಲ್ಕ ಮುಂದುವರಿಸಬೇಕು. ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಡಾ| ಹೇಮಂತ ಗೌಡ, ಡಾ| ಎಂ. ಗೌತಮ, ಡಾ| ವಿವೇಕ ವಿ.ಎಂ., ಡಾ| ವಂಶಕೃಷ್ಣ ಕೆ.ಎಸ್‌., ಡಾ| ಸುಜಿತ ಗೌಡ, ಡಾ| ಶರಣಬಸು ಅಂಡೇಲಿ, ಡಾ| ಶ್ರೀಧರ ಶೆಲ್ಲಿಕೇರಿ, ಡಾ| ಋತುರಾಜ, ಡಾ| ಅಜರುದ್ದೀನ, ಡಾ| ಶಾಲಿನಿ ಗೌಡ, ಡಾ| ವರ್ಷಿಕಾ ಇನ್ನಿತರರಿದ್ದರು. ವೈದ್ಯರು ಮಂಗಳವಾರ ತುರ್ತು ವಿಭಾಗ, ಐಸಿಯು, ಒಳ ರೋಗಿ ವಿಭಾಗ ಹೊರತುಪಡಿಸಿ ಒಪಿಡಿ, ಒಟಿ ವಿಭಾಗಗಳ ಸೇವೆ ಬಹಿಷ್ಕರಿಸಿ ಪ್ರತಿಭಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next