Advertisement

ಮಾತು ತಪ್ಪಿದ ಉ.ಕೊರಿಯಾ?

07:22 AM Nov 17, 2018 | Team Udayavani |

ಸಿಯೋಲ್‌: ಕೆಲವೇ ತಿಂಗಳುಗಳ ಹಿಂದೆ ಪರಮಾಣು ನಿಶ್ಶಸ್ತ್ರೀಕರಣ ಮಾಡುವ ಬಗ್ಗೆ ಅಮೆರಿಕದೊಂದಿಗೆ ಮಾತುಕತೆ ನಡೆಸಿದ್ದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಈಗ ಅತ್ಯಾಧುನಿಕ ಶಸ್ತ್ರಾಸ್ತ್ರವೊಂದನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಉ.ಕೊರಿಯಾದ ಅಧಿಕೃತ ಸುದ್ದಿ ಸಂಸ್ಥೆ ಕೊರಿಯನ್‌ ಸೆಂಟ್ರಲ್‌ ನ್ಯೂಸ್‌ ಏಜೆನ್ಸಿ (ಕೆಸಿಎನ್‌ಎ) ಈ ಬಗ್ಗೆ ವರದಿ ಮಾಡಿದ್ದು, ಕಿಮ್‌ ಜಾಂಗ್‌ ಉನ್‌ ಪರೀಕ್ಷಾ ಸ್ಥಳಕ್ಕೆ ಭೇಟಿ ನೀಡಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ವರದಿ ಮಾಡಿದೆ. ಈ ಮಧ್ಯೆಯೇ ಮಾತನಾಡಿದ ಅಮೆರಿಕದ ಅಧಿಕಾರಿಗಳು, ಉತ್ತರ ಕೊರಿಯಾದೊಂದಿ ಗಿನ ಅಣ್ವಸ್ತ್ರ ನಿಶ್ಶಸ್ತ್ರೀಕರಣ ಒಪ್ಪಂದದ ಬಗ್ಗೆ ಪ್ರಗತಿಯು ನಿರೀಕ್ಷೆಯಂತೆ ಸಾಗುತ್ತಿದೆ ಎಂದಿದ್ದಾರೆ.

Advertisement

ಅಮೆರಿಕನ್ನರಿಗೆ ಗಡಿಪಾರು ಭಾಗ್ಯ: ಕಳೆದ ತಿಂಗಳು ಉತ್ತರ ಕೊರಿಯಾಗೆ ಅಕ್ರಮವಾಗಿ ಪ್ರವೇಶಿಸಿದ ಲಾರೆನ್ಸ್‌ ಬ್ರೂಸ್‌ ಬೈರೋನ್‌ ಎಂಬ ವ್ಯಕ್ತಿಯನ್ನು ಗಡಿಪಾರು ಮಾಡಲು ಉ. ಕೊರಿಯಾ ಸರಕಾರ ನಿರ್ಧರಿಸಿದೆ. ಈ ವ್ಯಕ್ತಿ ಚೀನಾದಿಂದ ಉತ್ತರ ಕೊರಿಯಾಗೆ ಗಡಿ ದಾಟಿ ಆಗಮಿಸಿದ್ದ ಎನ್ನಲಾಗಿದೆ. ಅಮೆರಿಕದ ಗುಪ್ತಚರ ದಳದ ನಿರ್ದೇಶನದ ಮೇರೆಗೆ ದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದೆ ಎಂದು ಹೇಳಿಕೊಂಡಿದ್ದ. ಕಳೆದ ವರ್ಷದ ನವೆಂಬರ್‌ನಲ್ಲಿ ಈತನನ್ನು ಬಂಧಿಸಲಾಗಿತ್ತು. ಸಾಮಾನ್ಯ ವಾಗಿ ಅಮೆರಿಕದ ನಾಗರಿಕರನ್ನು, ಅದರಲ್ಲೂ ವಿಶೇಷವಾಗಿ ಗೂಢಚಾರಿಕೆ ಆರೋಪದ ಮೇಲೆ ಬಂಧಿತ ವ್ಯಕ್ತಿಗಳನ್ನು ಉತ್ತರ ಕೊರಿಯಾ ಇಷ್ಟು ಶೀಘ್ರವಾಗಿ ಬಿಡುಗಡೆ ಮಾಡಿರುವುದು ಅಪರೂಪದ ಪ್ರಕರಣ ವಾಗಿದೆ. ಇದಕ್ಕೆ ಇತ್ತೀಚೆಗೆ ನಡೆದ ಮಾತುಕತೆಯೇ ಕಾರಣ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next