Advertisement
ಇಂತಿಪ್ಪ ಪರಿಸರದಲ್ಲಿ ಈಗಲೂ ವಾಸಿಸುತ್ತಿರುವುದು ಕೊರಗ, ಮಲೆಕುಡಿಯ, ಮೊಗೇರ ಜನಾಂಗದವರ ಮನೆಗಳು.ಉಜಿರೆ ಧರ್ಮಸ್ಥಳ ರಸ್ತೆ ಅಥವಾ ಉಜಿರೆ ಚಾರ್ಮಾಡಿ ರಸ್ತೆಯಿಂದ ಸಮದಂಡಿಯಾಗಿ 3 ಕಿ.ಮೀ. ದೂರದಲ್ಲಿ ಕಲ್ಮಂಜ ಗ್ರಾಮ ಪಂಚಾಯತ್ ಸರಹದ್ದಿನ ಪಜಿರಡ್ಕದ ಸರಕಾರಿ ಕಾಡಿನಲ್ಲಿ ಸೂರಿನ ಆಸರೆಯ ನಿರೀಕ್ಷೆಯಲ್ಲಿ ಕೊರಗುತ್ತಿವೆ ಈ ಕುಟುಂಬಗಳು. ಇವರಿಗೆ ಸರಕಾರದ ಮನೆ, ನಿವೇಶನ, ಶೌಚಾಲಯ, ಪಡಿತರ ಚೀಟಿ, ಚುನಾವಣಾ ಗುರುತುಪತ್ರ ಸಿಕ್ಕಿಲ್ಲ. ಆಧಾರ್ ಕಾರ್ಡು ಬಿಟ್ಟರೆ ಬೇರೇನೂ ಇಲ್ಲ.
ಸುಶೀಲಾ, ದೇವಕಿ, ಥಾಮಸ್, ಲಕ್ಷ್ಮೀ ಮಲೆಕುಡಿಯ, ಕಮಲ ಮೊಗೇರ ಅವರ ಮನೆ ಗಳಿವೆ. ಸುಶೀಲಾ ಮನೆಯಲ್ಲಿ ವೃದ್ಧ ತಾಯಿ ಲಕ್ಷ್ಮೀ ಹಾಗೂ ಮಕ್ಕಳಿದ್ದಾರೆ. ಲಕ್ಷ್ಮೀಗೆ ವಿಟ್ಲದ ಮಿತ್ತನಡ್ಕ ಕರಿಯಪ್ಪರ ಜತೆಗೆ ವಿವಾಹವಾಗಿತ್ತು. ಕೂಲಿ ನಾಲಿ ಮಾಡಿ ಸಂಸಾರ ಸಾಗಿಸುತ್ತಿದ್ದ ಅವರು ಸರಕಾರದ ಮಾಸಾಶನಕ್ಕೆ ಪೇಟೆಗೆ ಹೋದವರು ಬಸ್ ನಿಲ್ದಾಣದಲ್ಲಿ ಅನಾಥವಾಗಿ ಮೃತಪಟ್ಟಿದ್ದರು. ಪತಿಗಿದ್ದ ಕುಟುಂಬದ ಸಣ್ಣ ಆಸ್ತಿ ಸಹೋ ದರ ರೊಳಗಿನ ಕಲಹದಿಂದಾಗಿ ಲಕ್ಷ್ಮೀ ಪಾಲಿ ಗೇನೂ ಗಿಟ್ಟಿಲ್ಲ. ಅಲ್ಲಿಂದ ಹೊರಬಿದ್ದು ತಮ್ಮ ಮೂವರು ಹೆಣ್ಣುಮಕ್ಕಳ ಪೈಕಿ ಒಬ್ಬರಾದ ಅನಿತಾ ಅವರ ಕಾಶಿಬೆಟ್ಟಿನ ಮನೆಯಲ್ಲಿದ್ದರು. ಅನಾರೋಗ್ಯದಿಂದಾಗಿ ನಡೆದಾಡಲೂ ಕಷ್ಟ ಪಡು ವಂತಾಗಿ ಮಗಳು ಸುಶೀಲಾರ ಮನೆಯಲ್ಲಿದ್ದಾರೆ. ಸುಶೀಲಾರ ಸಹೋದರಿ ಅವಿವಾಹಿತೆ ಹರ್ಷಿತಾ ಕೂಡ ತಾಯಿಯ ಉಪಚಾರಕ್ಕಾಗಿ ಇದೇ ಗೂಡಿನಂತಹ ಪುಟ್ಟ ಮನೆಯಲ್ಲಿದ್ದಾರೆ. ಸುಶೀಲಾ ಅವರ ಪುತ್ರ ಕಾರ್ತಿಕ್ ಧರ್ಮಸ್ಥಳದ ಆಶ್ರಮ ಶಾಲೆಯಲ್ಲಿ, ಮಗಳು ಶ್ವೇತಾ ಕನ್ಯಾಡಿ ಸರಕಾರಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ನಿತ್ಯ ಈ ಪುಟ್ಟ ಮನೆಗೆ ಬಂದು ಸೇರುತ್ತಾಳೆ. ಮತ್ತೂಬ್ಬ ಕೌಶಿಕ್ (2 ವರ್ಷ). ಇಷ್ಟು ಜನರನ್ನು ನೋಡಿ ಕೊಳ್ಳ ಬೇಕಾದ್ದು; ಅನಿ ವಾರ್ಯ ವಾಗಿ 5ನೇ ಕ್ಲಾಸಿಗೆ ಶಾಲೆಗೆ ಬೆನ್ನು ಹಾಕಿದ ಸುಶೀಲಾ ಅವರ ಅನಾನಸು ಪ್ಲಾಂಟೇಶನ್‌ನ ಕೂಲಿ ಕೆಲಸದ ಸಂಬಳ. ಕುಟುಂಬಕ್ಕೆ ಪಡಿತರವೂ ಇಲ್ಲ. ಮಾಸಾ ಶನವೂ ಇಲ್ಲ. ಇತರ ಆದಾಯವೂ ಇಲ್ಲ. ಉಜಿರೆಯಿಂದ ಬಂದರು
ಸುಶೀಲಾ ಮೊದಲು ಉಜಿರೆ ಬಾಡಿಗೆ ಮನೆಯಲ್ಲಿದ್ದರು. ಪತಿ ರವಿ ಜೆಸಿಬಿ ಯಲ್ಲಿ ಕೆಲಸ ಮಾಡುತ್ತಿದ್ದು ಈಗ ಸಂಪರ್ಕ ದಲ್ಲಿಲ್ಲ. ಹಾಗಾಗಿ ಈ ಕುಟುಂಬ 3 ವರ್ಷಗಳಿಂದ ಕಾಡಿನಲ್ಲಿದೆ.
Related Articles
Advertisement
ಏನೂ ಸಿಕ್ಕಿಲ್ಲಇವರ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಮಾಹಿತಿಯಿದೆ. ತಹಶೀಲ್ದಾರ್ ಅಧ್ಯಕ್ಷತೆಯ ಸಭೆಯಲ್ಲಿ ಈ ಬಗ್ಗೆ ಅನೇಕ ಬಾರಿ ವಿವರಿಸಲಾಗಿದೆ. ಹಾಗಿದ್ದರೂ ಸ್ಥಳೀಯಾಡಳಿತ ವಾಗಲೀ, ತಾಲೂಕು ಆಡಳಿತವಾಗಲೀ, ಜಿಲ್ಲಾ ಇಲಾಖೆಗಳಾಗಲೀ ಸ್ಪಂದಿಸಿಲ್ಲ. ಎಲ್ಲಿ ಕಲ್ಮಂಜ ಗ್ರಾಮದ ಪಜಿರಡ್ಕ ದಟ್ಟ ಕಾಡಲ್ಲಿ
ಯಾರೆಲ್ಲ 3 ಕೊರಗ, 1 ಮಲೆಕುಡಿಯ,1 ಮೊಗೇರ ಕುಟುಂಬ
ಹೇಗೆ 3 ವರ್ಷಗಳಿಂದ ಕಚ್ಚಾ ಟೆಂಟ್‌ನಲ್ಲಿ ವಾಸ
ಏನಿಲ್ಲ ನಿವೇಶನ, ಮನೆ, ಶೌಚಾಲಯ, ನೀರು ತತ್‌ಕ್ಷಣ ಈ ಕುಟುಂಬಗಳಿಗೆ ಮನೆ ಹಾಗೂ ಇತರ ಸೌಲಭ್ಯ ಕೊಡಬೇಕು. ಐಟಿಡಿಪಿ ಇಲಾಖೆಯವರು ಸ್ಪಂದಿಸಬೇಕು. ಸರಕಾರದ ಯೋಜನೆಗಳು ತಳಮಟ್ಟದಲ್ಲಿ ಪಾಲನೆಯಾಗುತ್ತಿಲ್ಲ. ಸ್ವತ್ಛ ಭಾರತ್ ಹೆಸರಿನಲ್ಲಿ ಕರ ಸಂಗ್ರಹಿಸಿದರೂ ಅರ್ಹರಿಗೆ ದೊರೆಯುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ವಹಿಸಬೇಕು.
– ಶೇಖರ್ ಎಲ್., ದಲಿತ ಹಕ್ಕುಗಳ ಹೋರಾಟಗಾರರು – ಲಕ್ಷ್ಮೀ ಮಚ್ಚಿನ