Advertisement
ಕೇರಳದ ವಿದ್ಯಾರ್ಥಿನಿ ಸೋಂಕಿನಿಂದ ಬಳಲುತ್ತಿರುವುದು ದೃಢಪಟ್ಟಿದೆ. ಆದರೆ, ನಮ್ಮ ರಾಜ್ಯದಲ್ಲಿ ಎಲ್ಲಿಯೂ ಕೊರೊನಾ ವೈರಸ್ ಪತ್ತೆಯಾಗಿಲ್ಲ. ಈ ಸಂಬಂಧ ಜಿಲ್ಲಾದ್ಯಂತ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Related Articles
Advertisement
ಎಲ್ಲಾ ಆಸ್ಪತ್ರೆಗೂ ಸೂಚನೆ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮಾತನಾಡಿ, ಕೊರೊನಾ ವೈರಸ್ ಬಗ್ಗೆ ಈಗಾಗಲೇ ಜಿಲ್ಲಾದ್ಯಂತ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಜತೆಗೆ ವೈರಸ್ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಎಲ್ಲಾ ಪ್ರಮುಖ ಪ್ರವಾಸಿ ತಾಣಗಳಲ್ಲಿಯೂ ಎಚ್ಚರಿಕೆವಹಿಸಲಾಗಿದೆ.
ಸಾರ್ವಜನಿಕರು ಸಹ ಕಾಯಿಲೆ ಬರುವ ಮುನ್ನವೇ ಎಚ್ಚರಿಕೆ ವಹಿಸುವುದು ಸೂಕ್ತವಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ಸುತ್ತಲಿನ ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳುವುದು. ವೈಯುಕ್ತಿಕ ಸ್ವತ್ಛತೆ ಕಾಪಾಡುವುದು. ಕೆಮ್ಮುವಾಗ ಸೀನುವಾಗ ಮಾಸ್ಕ್ ಅಥವಾ ಕೈ ವಸ್ತ್ರ ಬಳಸುವುದು. ಉಸಿರಾಟ ತೊಂದರೆಯಾದರಲ್ಲಿ ಕಡ್ಡಾಯವಾಗಿ ವೈದರ ತಪಾಸಣೆ ಮಾಡಿಸುವುದು. ಮಾಂಸ ಆಹಾರ ಸೇವಿಸುವಾಗ ಚೆನ್ನಾಗಿ ಬೇಯಿಸಿ ತಿನ್ನುವುದು ಮಾಡಬೇಕು ಎಂದು ಹೇಳಿದರು.
ಸಾಮಾನ್ಯ ಜ್ವರ, ನೆಗಡಿ, ಕೆಮ್ಮು ಸಂಬಂಧ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಕೊರೊನಾ ವೈರಸ್ ಭಯ ಹುಟ್ಟಿಸುವ ವೈದ್ಯರ ಹಾಗೂ ಆಸ್ಪತ್ರೆಯ ವಿರುದ್ಧ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಲಿದೆ. ಒಂದು ವೇಳೆ ಯಾವುದೇ ರೋಗಿಯಲ್ಲಿ ಕರೊನಾ ವೈರಸ್ ಲಕ್ಷಣ ಕಂಡು ಬಂದರೆ ನಮಗೆ ತಿಳಿಸಬೇಕು. ನಾವು ಖಚಿತ ಪಡಿಸಿದ ಬಳಿಕವಷ್ಟೇ ಈ ವಿಷಯವನ್ನು ಬಹಿರಂಗಗೊಳಿಸಬೇಕು.
ಖಾಸಗಿ ವೈದ್ಯರು ಅಥವಾ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆಶ್ರಿತ ರೋಗನಿರ್ವಾಹಕ ಅಧಿಕಾರಿ ಡಾ.ಪಿ.ಚಿದಂಬರಂ, ಜಿಲ್ಲಾ ಆರೋಗ್ಯ ಸವೇಕ್ಷಣಾಧಿಕಾರಿ ಟಿ.ಶಿವಪ್ರಸಾದ್, ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಡಾ.ಮಂಜುನಾಥ್ ಇದ್ದರು.
ಕೊರೊನಾ ಸೋಂಕು ಲಕ್ಷಣಗಳು: ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟ ತೊಂದರೆ, ಭೇದಿ ಒಂದು ತಿಂಗಳಿಗೂ ಹೆಚ್ಚಿನ ಕಾಲ ಇದ್ದರೆ ಕೊರೊನಾ ಸೋಂಕು ಲಕ್ಷಣವಾಗಿದೆ. ಇಂತಹ ಲಕ್ಷಣಗಳಿರುವ ರೋಗಿಗಳನ್ನು ರಕ್ತ ಪರೀಕ್ಷೆಗೆ ಒಳ ಪಡಿಸಿದ ಬಳಿಕವಷ್ಟೇ ವೈರಸ್ ಇರುವ ಬಗ್ಗೆ ಖಚಿತವಾಗಿ ಹೇಳಬಹುದು. ಚಿಕೂನ್‌ಗುನ್ಯಾ, ನಿಫಾ ಮಾದರಿಯ ಸೋಂಕಿನ ಕಾಯಿಲೆ ಇದಾಗಿರುವುದರಿಂದ ಅವುಗಳಿಗೆ ಅನುಸರಿಸಿದ ಮುಂಜಾಗ್ರತಾ ಕ್ರಮಗಳ ಮೂಲಕವೇ ರೋಗವನ್ನು ಬಾರದಂತೆ ನಿಯಂತ್ರಿಸಬಹುದಾಗಿದೆ ಎಂದು ಡಾ.ವೆಂಕಟೇಶ್ ತಿಳಿಸಿದರು. ಸಾರ್ವಜನಿಕರು ಸಹಾಯವಾಣಿ 104 ಅಥವಾ ದೂ.080-2228541,22374658 ಸಂಪರ್ಕಿಸಬಹುದಾಗಿದೆ.
ಸಾರ್ವಜನಿಕರು ಹೀಗೆ ಮಾಡಿ1.ಶಂಕಿತ ರೋಗಿಯ ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು ಮತ್ತು ಟ್ರಿಪಲ್ ಲೇಯರ್ ಮಾಸ್ಕ್ ಬಳಸುವುದು
2.ಸೋಂಕು ಪೀಡಿತರ ಸಂಪರ್ಕದಿಂದ ದೂರವಿರಬೇಕು
3.ಆಗ್ಗಾಗೆ ಕೈಗಳನ್ನು ಚೆನ್ನಾಗಿ ತೊಳೆದುಕೊಂಡು ನೈರ್ಮಲ್ಯವನ್ನು ಅಭ್ಯಾಸ ಮಾಡಿಕೊಳ್ಳಬೇಕು
4.ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು
5.ಕೆಮ್ಮು ಮತ್ತು ಸೀನುವಾಗ ಬಾಯಿಗೆ ಕರವಸ್ತ್ರ ಅಡ್ಡ ಹಿಡಿದುಕೊಳ್ಳಬೇಕು
6.ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯುವುದು
7.ಕೆಮ್ಮುವಾಗ ಮತ್ತು ಸೀನುವಾಗ ಬಾಯಿಯನ್ನು ಮುಚ್ಚಿಕೊಳ್ಳಬೇಕು
8.ಅನಾರೋಗ್ಯದಿಂದಿರುವ ಅಥವಾ ಕೆಮ್ಮು ಮತ್ತು ನೆಗಡಿ ಇತ್ಯಾದಿ ಅನಾರೋಗ್ಯದ ಲಕ್ಷಣಗಳನ್ನು ಹೊಂದಿರುವ ಜನರೊಂದಿಗೆ ನಿಕಟ ಸಂಪರ್ಕ ಹೊಂದ ಬಾರದು
9.ಅಸುರಕ್ಷಿತವಲ್ಲದ ಕಾಡುಪ್ರಾಣಿ ಅಥವಾ ಸಾಕು ಪ್ರಾಣಿಗಳನ್ನು ಮುಟ್ಟಬೇಡಿ
10.ಮಾಂಸ, ಮೊಟ್ಟೆ ಇತ್ಯಾದಿಗಳನ್ನು ಚೆನ್ನಾಗಿ ಬೇಯಿಸಿ ಸೇವನೆ ಮಾಡಬೇಕು
11.ಮಾಸ್ಕ್ ಧರಿಸುವ ಅಭ್ಯಾಸ ಮಾಡಿಕೊಳ್ಳಬೇಕು ಕೊರೊನಾ ಹರಡುವ ರೀತಿ
1.ಸೋಂಕಿತ ವ್ಯಕ್ತಿಯು ಸೀನಿದಾಗ ಮತ್ತು ಕೆಮ್ಮಿದಾಗ
2.ಸೋಂಕಿತ ವ್ಯಕ್ತಿ ಜತೆ ನಿಕಟ ಸಂಪರ್ಕದಲ್ಲಿರುವಾಗ
3.ಸೋಂಕಿತ ವ್ಯಕ್ತಿಯ ಮುಟ್ಟಿದಾಗ
4.ಸೋಂಕಿತ ವ್ಯಕ್ತಿಯ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಒಳಸಿದಾಗ