ಕಳೆದ 40 ವರ್ಷಗಳಿಂದಲೂ ಸೆರೆವಾಸದಲ್ಲಿದ್ದ “ಕಿಲ್ಲರ್ ತಿಮಿಂಗಿಲ’ ಕೆನಡಾದಲ್ಲಿ ಮೃತಪಟ್ಟಿದೆ.
Advertisement
ಇಷ್ಟು ವರ್ಷಗಳ ಕಾಲ ಐಸೋಲೇಷನ್‌ನಲ್ಲೇ ಇದ್ದ ಕಾರಣ “ಜಗತ್ತಿನ ಏಕಾಂಗಿ ತಿಮಿಂಗಿಲ’ ಎಂದೇ ಹೆಸರಾಗಿದ್ದ 47 ವರ್ಷದ “ಕಿಸ್‌ಕಾ’ಗೆ ಬ್ಯಾಕ್ಟೀರಿಯಾ ಸೋಂಕು ತಗುಲಿತ್ತು. ಇತ್ತೀಚೆಗೆ ನಯಾಗರಾ ಜಲಪಾತದ ಪ್ರಾಣಿಸಂಗ್ರಹಾಲಯ ಮೆರೈನ್‌ಲ್ಯಾಂಡ್ ನಲ್ಲಿ ಅದು ಅಸುನೀಗಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಸ್‌ಲ್ಯಾಂಡ್‌ನಲ್ಲಿದ್ದ ಈ ತಿಮಿಂಗಿಲವನ್ನು 1979ರಲ್ಲಿ ಸೆರೆಹಿಡಿದು, ಇಲ್ಲಿಗೆ ತರಲಾಗಿತ್ತು. “ಕಿಲ್ಲರ್’ ಎಂಬ ಹಣೆಪಟ್ಟಿ ಹೊತ್ತಿದ್ದ ಕಾರಣ ಅದನ್ನು ಏಕಾಂಗಿಯಾಗಿರುವ ಶಿಕ್ಷೆ ವಿಧಿಸಲಾಗಿತ್ತು.