Advertisement

ಕಿಲ್ಲಾರಹಟ್ಟಿ ಹಲ್ಲೆ ಪ್ರಕರಣ: ಠಾಣೆ ಎದುರು ಪ್ರತಿಭಟನೆ

02:28 PM Nov 22, 2021 | Team Udayavani |

ಮುದಗಲ್ಲ: ಕಿಲ್ಲಾರಹಟ್ಟಿ ಗ್ರಾಮದಲ್ಲಿ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಹೊಡೆದ ಘಟನೆ ಖಂಡಿಸಿ ಲಿಂಗಸುಗೂರು, ಸಿಂಧನೂರ ಮತ್ತು ಮಸ್ಕಿ ತಾಲೂಕಿನ ದಲಿತ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಜಂಟಿಯಾಗಿ ಮುದಗಲ್ಲ ಠಾಣೆ ಎದುರು ಪ್ರತಿಭಟನೆ ನಡೆಸಿದರು.

Advertisement

ದಲಿತ ಸಂಘಟನೆಗಳ ನೂರಾರು ಮುಖಂಡರು ಬೈಕ್‌ರ್ಯಾಲಿ ಮೂಲಕ ಕಿಲ್ಲಾರಹಟ್ಟಿ ಗ್ರಾಮಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿದರು. ನಂತರ ಮುದಗಲ್ಲ ಠಾಣೆಗೆ ಆಗಮಿಸಿದ ಪ್ರತಿಭಟನಾಕಾರರು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಠಾಣೆಗೆ ಆಗಮಿಸಿದ ಲಿಂಗಸುಗೂರು ಡಿವೈಎಸ್‌ಪಿ ಎಸ್‌.ಎಸ್‌. ಹೂಲ್ಲೂರ ಪ್ರತಿಭಟನಾಕಾರರ ಬೇಡಿಕೆಗಳನ್ನು ಹಿರಿಯ ಅ ಧಿಕಾರಿಗಳಿಗೆ ಸಲ್ಲಿಸುತ್ತೇನೆ. ಈಗಾಗಲೇ ಮೊದಲ ಪ್ರಕರಣದಲ್ಲಿನ 10 ಜನರನ್ನು ಬಂಧಿಸಲಾಗಿದೆ. ವ್ಯಕ್ತಿ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಲಾಗಿದೆ ಎಂದು ತಿಳಿಹೇಳಿದರು.

ಹನುಮಂತಪ್ಪ ಹಂಚನಾಳ, ಹನುಂತಪ್ಪ ವೆಂಕಟಾಪೂರ, ಮಲ್ಲಯ್ಯ ಬುಳ್ಳಾ, ಸುರೇಶ ಅಂತರಗಂಗಿ, ಬಿ.ಎನ್‌. ಯರದಿಹಾಳ, ಆರ್‌.ಎಚ್‌.ಕಲ್ಮಂಗಿ, ಹುಸೇನಪ್ಪ ದೀನಸಮುಂದ್ರ, ಮುದಗಲ್ಲ ದಲಿತ ಸಂಘಟನೆಗಳು, ಸಾವಿತ್ರಿಬಾಯಿ ಫುಲೆ ಸಂಘಟನೆ ಸೇರಿದಂತೆ ದಸಂಸ, ಭಾದಪ್ಯಾ ಸಂಘಟನೆ ಸೇರಿದಂತೆ 20ಕ್ಕೂ ಹೆಚ್ಚು ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next