Advertisement
ಕೊರೊನಾ ನಡುವೆ ಶಾಲಾ ರಂಭದ ಚರ್ಚೆ ಈಗಾಗಲೇ ಮುನ್ನೆಲೆಗೆ ಬಂದಿದೆ. ಕೇಂದ್ರ ಗೃಹ ಇಲಾಖೆಯು ಅ. 15ರ ಬಳಿಕ ಪರಿಸ್ಥಿತಿ ಆಧರಿಸಿ ಆಯಾ ರಾಜ್ಯ ಸರಕಾರಗಳು ಶಾಲಾರಂಭದ ನಿರ್ಧಾರ ತೆಗೆದು ಕೊಳ್ಳಲು ಅನುಮತಿ ನೀಡಿದೆ. ಹೀಗಾಗಿ ರಾಜ್ಯದಲ್ಲೂ ಸಿದ್ಧತೆ ಮಾಡಿಕೊಂಡಿರುವ ಶಿಕ್ಷಣ ಇಲಾಖೆಯು ಪ್ರಮಾಣಿತ ಕಾರ್ಯ ಸೂಚಿ ವಿಧಾನ (ಎಸ್‌ಒಪಿ)ವನ್ನು ರೂಪಿಸಿದೆ.
ರಾಜ್ಯದ ಸರಕಾರಿ ಶಾಲಾ ವ್ಯವಸ್ಥೆಯಲ್ಲಿ 50 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಪಠ್ಯಪುಸ್ತಕ, ಶೂ, ಸಾಕ್ಸ್, ಸಮವಸ್ತ್ರವನ್ನು ಉಚಿತವಾಗಿ ನೀಡುವ ಜತೆಗೆ ಮಾಸ್ಕ್ ಕೂಡ ನೀಡ ಬೇಕಾಗುವ ಸಾಧ್ಯತೆಯಿದೆ. ಹೀಗಾಗಿ ಸ್ಥಳೀಯವಾಗಿಯೇ ಮಾಸ್ಕ್ ವ್ಯವಸ್ಥೆ ಮಾಡಿಕೊಳ್ಳಲು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಗೆ ಜವಾಬ್ದಾರಿ ವಹಿಸುವ ಜತೆಗೆ ಸ್ಥಳೀಯಾಡಳಿತ ಗಳು, ಸ್ವಯಂಸೇವಾ ಸಂಸ್ಥೆಗಳು, ಸರಕಾರೇತರ ಸಂಸ್ಥೆಗಳ ಗಮನ ಸೆಳೆಯಲು ಸೂಚನೆ ನೀಡುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 56.9 ಲಕ್ಷ ವಿದ್ಯಾರ್ಥಿಗಳಿಗೆ ವಾರಕ್ಕೆ ಸರಾಸರಿ 1 ಕೋಟಿಗೂ ಅಧಿಕ ಮಾಸ್ಕ್ ಬೇಕಾಗುತ್ತದೆ.
Related Articles
ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಗಿಂ ದಾಗ್ಗೆ ಮಾಸ್ಕ್ ಪೂರೈಕೆ ಇಲಾಖೆ ಮಾಡಬೇಕು ಅಥವಾ ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಆದ್ದರಿಂದ ಇಲಾಖೆಯೇ ಮಾಸ್ಕ್ ಪೂರೈಕೆ ಮಾಡಬೇಕು ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.
Advertisement
ಶಾಲಾರಂಭ: ಕೇಂದ್ರದಿಂದ ಹೊಸ ನಿಯಮಹಾಜರಾತಿಯಲ್ಲಿ ಸಡಿಲಿಕೆ, ಶಾಲೆಯ ಆವರಣ ಮತ್ತು ತರಗತಿ ಗಳ ಸೋಂಕು ನಿವಾರಣೆ, ಮೂರು ವಾರಗಳ ವರೆಗೆ ಪರೀಕ್ಷೆಗೆ ತಡೆ, ಮನೆಯಲ್ಲಿ ಆನ್‌ಲೈನ್ ಮೂಲಕ ಪಾಠ ನಡೆಯುತ್ತಿದ್ದ ಕಾರಣ ಶಾಲೆ ಶುರುವಾದಾಗ ವಿದ್ಯಾರ್ಥಿಗಳಿಗೆ ಒತ್ತಡವಾಗದಂತೆ ನೋಡಿಕೊಳ್ಳಿ.
-ಇವು ಕೇಂದ್ರ ಶಿಕ್ಷಣ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಹೊಸ ನಿಯಮಗಳು. ಅ. 15ರಿಂದ ಶಾಲೆಗಳು, ಕಾಲೇಜು ಗಳು, ಕೋಚಿಂಗ್ ಸಂಸ್ಥೆಗಳನ್ನು ಪುನರಾರಂಭಿಸುವ ಬಗ್ಗೆ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲು ರಾಜ್ಯ ಸರಕಾರ ಗಳಿಗೆ ಅಧಿಕಾರ ನೀಡಿರುವ ಹಿನ್ನೆಲೆಯಲ್ಲಿ ಮತ್ತೂಮ್ಮೆ ನಿಯಮ ಬಿಡುಗಡೆ ಮಾಡಲಾಗಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ನಿಯಮ ರಚಿಸಲೂ ಅವಕಾಶ ನೀಡಲಾಗಿದೆ. ಶಾಲಾರಂಭದ ಅನಂತರ ಮಕ್ಕಳಿಗೆ ಮಾಸ್ಕ್ ವ್ಯವಸ್ಥೆ ಯನ್ನು ಸ್ಥಳೀಯಾಡ ಳಿತಗಳ ಮೂಲಕ ಮಾಡಲು ಚರ್ಚೆ ನಡೆಯುತ್ತಿದೆ. ಸರ ಕಾರ ದಿಂದ ಶಾಲಾ ರಂಭದ ದಿನಾಂಕ ನಿಗದಿ ಯಾದ ಅನಂತರ ಈ ಬಗ್ಗೆ ಸ್ಪಷ್ಟ ವಾದ ಸೂಚನೆ ಯನ್ನು ನೀಡಲಿದ್ದೇವೆ.
-ಉಮಾಶಂಕರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ 48,569
ಸರಕಾರಿ ಶಾಲೆಗಳು
40,000ಕ್ಕೂ ಅಧಿಕ ಗ್ರಾಮೀಣ ಶಾಲೆಗಳು
42,91,812
ಸರಕಾರಿ ಶಾಲಾ ಮಕ್ಕಳು
13,17,233
ಅನುದಾನಿತ ಶಾಲಾ ಮಕ್ಕಳು ರಾಜು ಖಾರ್ವಿ ಕೊಡೇರಿ