Advertisement

ಬೆಂಗಳೂರು: ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಸಂಖ್ಯೆ ಹೆಚ್ಚಾಗಿದ್ದು, ಇದೀಗ 30-60ವರ್ಷ ದೊಳಗಿನ 10ರಿಂದ 15ಲಕ್ಷ ಮಂದಿ ಮೂತ್ರಪಿಂಡ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

Advertisement

ಮನುಷ್ಯನ ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕುವುದರಿಂದ ಹಿಡಿದು, ದೇಹ ದಲ್ಲಿನ ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ನಿಯಂತ್ರಿಸುವುದು ಸೇರಿದಂತೆ ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಮೂತ್ರಪಿಂಡಗಳು ಪ್ರಮುಖ ಪಾತ್ರವಹಿಸುತ್ತವೆ. ಇವುಗಳ ಬಗ್ಗೆ ಎಚ್ಚರಿಕೆವಹಿಸದಿದ್ದರೆ ಜೀವಕ್ಕೆ ಕುತ್ತು ಬರಲಿದೆ.  ಇದು ವಿಶ್ವದ ಜನಸಂಖ್ಯೆಯ ಸರಿಸುಮಾರು ಶೇ.10 ವಯಸ್ಕರ ಮೇಲೆಪರಿಣಾಮ ಬೀರುತ್ತಿದೆ. ಭಾರತದಲ್ಲಿ ಪ್ರತಿ ವರ್ಷ 2,00,000 ಮಂದಿ ಮೂತ್ರಪಿಂಡ ವೈಫ‌ಲ್ಯದಿಂದ ಮರಣ ಹೊಂದುತ್ತಿರುವ ಆತಂಕ ಮೂಡಿಸಿದೆ.

ಅಧಿಕ ರಕ್ತದೊತ್ತಡ ಹಾಗೂ ನಿರಂತರವಾಗಿ ನೋವು ನಿವಾರಕ ಔಷಧ ಸೇವಿಸುತ್ತಿರುವಲ್ಲಿ ಮೂತ್ರಪಿಂಡದ ಸಮಸ್ಯೆಹೆಚ್ಚಾಗಿ ಕಂಡು ಬರುತ್ತಿದೆ. ರಾಜ್ಯದಲ್ಲಿಯುವಕರು ಮೂತ್ರ ಪಿಂಡ ಸಮಸ್ಯೆಯಿಂದ ಒಳಗಾಗುತ್ತಿದ್ದಾರೆ. ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲಿ ಸ್ಥಾಪಿಸಲಾದ ಡಯಾಲಿಸಿಸ್‌ ಕೇಂದ್ರದಲ್ಲಿ ಒಟ್ಟಾರೆ 4,250 ಮಂದಿ ಪ್ರತಿ ತಿಂಗಳು ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ. 2007ರಿಂದ 2022ರ ವರೆಗೆ ಒಟ್ಟು 920 ಮಂದಿಗೆ ಹೊಸ ಮೂತ್ರಪಿಂಡ ಕಸಿ ಮಾಡಲಾಗಿದೆ. ಪ್ರಸ್ತಕ ಸಾಲಿನಲ್ಲಿ 14ಮಂದಿಕಿಡ್ನಿ ಕಸಿ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆ ಹೊರತಾಗಿಯೂ ಲಕ್ಷಾಂತರ ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ.

ಮೂತ್ರಪಿಂಡಗಳನ್ನು ರಕ್ಷಣೆಗೆ ಪ್ರತಿಯೊಬ್ಬರೂ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡ ಬೇಕು. ನಿತ್ಯ ನಿಗದಿತ ಪ್ರಮಾಣದ ನೀರಿನ ಸೇವೆ ಪ್ರಮಾಣ ಹೆಚ್ಚಿಸಿಕೊಳ್ಳಬೇಕು. ಆರೋಗ್ಯಕರ ತೂಕ, ಅತಿಯಾದ ಮದ್ಯಪಾನ ಹಾಗೂ ಧೂಮಪಾನ ತ್ಯಜಿಸಬೇಕು. ರಕ್ತದೊತ್ತಡವನ್ನು ಪರೀಕ್ಷಿಸುವಿದರ ಜತೆಗೆಆರೋಗ್ಯಕರ ಆಹಾರವನ್ನು ಸೇವಿಸಬೇಕು. ನಿತ್ಯ ವ್ಯಾಯಾಮದ ಹಾಗೂ ನಿಯಮಿತ ದೇಹದ ತಪಾಸಣೆ ಮಾಡಿಸಬೇಕು.

ಲಕ್ಷಣಗಳು :

  • ಕಡಿಮೆಯಾದ ಮೂತ್ರದ ಉತ್ಪಾದನೆ
  • ದ್ರವದ ಧಾರಣದಿಂದಾಗಿಪಾದಗಳಲ್ಲಿ ಊತ
  • ಆಯಾಸ, ದೌರ್ಬಲ್ಯ
  • ಉಸಿರಾಟದ ತೊಂದರೆ
  • ವಾಕರಿಕೆ, ವಾಂತಿ
  • ಅನಾರೋಗ್ಯದಿಂದ ಬಳಲುತ್ತಿರುವುದು.
Advertisement

ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಅಥವಾ ಮೂತ್ರಪಿಂಡವೈಫ‌ಲ್ಯದ ಅನುವಂಶಿಕ ಹಿನ್ನೆಲೆಹೊಂದಿರುವವರಲ್ಲಿ ಮೂತ್ರಪಿಂಡ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿವೆ. ಈ ನಿಟ್ಟಿನಲ್ಲಿ ನಿತ್ಯಆರೋಗ್ಯದ ಬಗ್ಗೆ ಗಮನ ಹರಿಸುವುದರ ಜತೆಗೆ ವಾರ್ಷಿಕ ತಪಾಸಣೆಗೆ ಒಳಗಾಗಬೇಕು. ಡಾ. ವಿದ್ಯಾಶಂಕರ್‌ ಪಿ, ಆಸ್ಟರ್‌ ಸಿಎಂಐ ಆಸ್ಪತ್ರೆಯ ನೆಫ್ರಾಲಜಿ ತಜ್ಞ

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next