Advertisement
ಅವುಗಳ ಮುಖ್ಯ ಕಾರ್ಯಚಟುವಟಿಕೆಗಳು ಹೀಗಿವೆ– ರಕ್ತದಿಂದ ತ್ಯಾಜ್ಯ ವಸ್ತುಗಳನ್ನು ಸೋಸಿ ತೆಗೆದು ಪರಿಶುದ್ಧಗೊಳಿಸುವುದು ಮತ್ತು ಮೂತ್ರವನ್ನು ಉತ್ಪತ್ತಿ ಮಾಡುವುದು.
– ದೇಹದಲ್ಲಿ ಇಲೆಕ್ಟ್ರೊಲೈಟ್ ಸಮತೋಲನವನ್ನು ಕಾಪಾಡುವುದು.
– ಆಮ್ಲ ಪ್ರಮಾಣವನ್ನು ಸಮತೋಲನದಲ್ಲಿ ಇರಿಸುವುದು.
– ರಕ್ತದೊತ್ತಡ ನಿಯಂತ್ರಣದಲ್ಲಿ ಸಹಕರಿಸುವುದು.
– ನೀರಿನಂಶವನ್ನು ಸಮತೋಲನದಲ್ಲಿ ಇರಿಸುವುದು.
– ರಕ್ತದಲ್ಲಿಯ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವುದು.
– ಎಲುಬುಗಳ ಆರೋಗ್ಯಕ್ಕೆ ಅಗತ್ಯವಾಗಿರುವ ವಿಟಮಿನ್ ಡಿ ಉತ್ಪಾದಿಸುವುದು.
ಕೆಲವು ಲಕ್ಷಣಗಳು
– ಮೂತ್ರ ಉತ್ಪಾದನೆಯಲ್ಲಿ ವ್ಯತ್ಯಾಸ – ಮೂತ್ರ ಪ್ರಮಾಣದಲ್ಲಿ ಹೆಚ್ಚಳ, ವಿಶೇಷವಾಗಿ ರಾತ್ರಿಯ ಹೊತ್ತಿನಲ್ಲಿ ಅಥವಾ ಮೂತ್ರ ಪ್ರಮಾಣ ಕಡಿಮೆಯಾಗುವುದು.
– ರಕ್ತದೊತ್ತಡ ಹೆಚ್ಚಳ.
– ದ್ರವಾಂಶ ದೇಹದಲ್ಲಿ ಉಳಿದುಕೊಳ್ಳುವುದು ಮತ್ತು ಪಾದ/ ಹೊಟ್ಟೆ/ ಮುಖ ಬಾತುಕೊಳ್ಳುವುದು (ಎಡೆಮಾ)
– ತೀವ್ರ ದಣಿವು
– ಕಡು ಬಣ್ಣದ ಮೂತ್ರ ಅಥವಾ ಮೂತ್ರ ನೊರೆಯಿಂದ ಕೂಡಿರುವುದು ಯಾ ರಕ್ತ ಸಹಿತವಾಗಿರುವುದು. ಮೂತ್ರಪಿಂಡಗಳ ಆರೋಗ್ಯ ಚೆನ್ನಾಗಿಲ್ಲ ಎಂಬುದನ್ನು ಖಚಿತಪಡಿಸುವ ತಪಾಸಣೆಗಳೆಂದರೆ:
– ರಕ್ತದೊತ್ತಡ ಪರೀಕ್ಷೆ
– ಪ್ರೊಟೀನ್, ರಕ್ತ ಮತ್ತು ಅಸಹಜ ಅಂಶಗಳು ಇವೆಯೇ ಎಂಬುದನ್ನು ತಿಳಿಸುವ ಮೂತ್ರ ಪರೀಕ್ಷೆ
– ರಕ್ತದಲ್ಲಿ ಕ್ರಿಯಾಟಿನಿನ್ ಅಂಶ ಹೆಚ್ಚಳ
– ಮೂತ್ರಪಿಂಡಗಳ ಅಲ್ಟ್ರಾಸೌಂಡ್ ಪರೀಕ್ಷೆ
Related Articles
– ಅನಿಯಂತ್ರಿತ ಮಧುಮೇಹ
– ಅನಿಯಂತ್ರಿತ ಅಧಿಕ ರಕ್ತದೊತ್ತಡ
– ಆನುವಂಶಿಕ ಕಾಯಿಲೆಗಳು
Advertisement
ಮೂತ್ರಪಿಂಡ ಕಾಯಿಲೆಗಳು ಉಂಟಾಗುವ ಅಪಾಯ ಯಾರಿಗೆ ಹೆಚ್ಚಿರುತ್ತದೆ?
– ಅಧಿಕ ರಕ್ತದೊತ್ತಡ, ಅನಿಯಂತ್ರಿತ ಮಧುಮೇಹಗಳನ್ನು ದೀರ್ಘಕಾಲದಿಂದ ಹೊಂದಿರುವವರು.
– ಧೂಮಪಾನಿಗಳು
-ಬೊಜ್ಜು ಹೊಂದಿರುವವರು
– ಮೂತ್ರಪಿಂಡ ಕಾಯಿಲೆಗಳ ಕೌಟುಂಬಿಕ ಇತಿಹಾಸ ಹೊಂದಿರುವವರು
– ನೋವು ನಿವಾರಕ ಔಷಧಗಳನ್ನು ಅಧಿಕ ಪ್ರಮಾಣದಲ್ಲಿ ತೆಗೆದುಕೊಳ್ಳುವವರು ಮೂತ್ರಪಿಂಡ ಕಾಯಿಲೆಗಳನ್ನು ತಡೆಗಟ್ಟಲು ಸಲಹೆಗಳು ಹೀಗಿವೆ:
– ನಿಯಮಿತವಾಗಿ ವ್ಯಾಯಾಮ ಮಾಡಬೇಕು.
– ಆಹಾರಾಭ್ಯಾಸ ಸಮರ್ಪಕವಾಗಿರಬೇಕು.
– ರಕ್ತದಲ್ಲಿ ಸಕ್ಕರೆಯ ಅಂಶ ಮತ್ತು ರಕ್ತದೊತ್ತಡಗಳನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುತ್ತಿರಬೇಕು.
– ಸರಿಯಾದ ಪ್ರಮಾಣದಲ್ಲಿ ದ್ರವಾಹಾರ/ ನೀರು ಸೇವಿಸಬೇಕು.
– ಧೂಮಪಾನವನ್ನು ತ್ಯಜಿಸಬೇಕು.
– ಅನಗತ್ಯವಾಗಿ ಔಷಧ, ಅದರಲ್ಲೂ ನೋವು ನಿವಾರಕಗಳ ಉಪಯೋಗ ನಿಲ್ಲಿಸಬೇಕು.
– ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ಮೂತ್ರಪಿಂಡ ರೋಗಗಳ ಕೌಟುಂಬಿಕ ಇತಿಹಾಸ ಇದ್ದರೆ ಆಗಾಗ ಮೂತ್ರಪಿಂಡ ತಪಾಸಣೆ ಮಾಡಿಸಿಕೊಳ್ಳಬೇಕು. ಅನೇಕರಲ್ಲಿ ಮೂತ್ರಪಿಂಡ ಕಾಯಿಲೆಗಳು ಸದ್ದಿಲ್ಲದೆ ಬೆಳವಣಿಗೆ ಹೊಂದುತ್ತಿರುತ್ತವೆ. ಅದು ಗಮನಕ್ಕೆ ಬರುವುದು ಮೂತ್ರಪಿಂಡಗಳ ಕಾರ್ಯಸಾಮರ್ಥ್ಯ ಸಹಜ ಸ್ಥಿತಿಗಿಂತ ಶೇ.30ರಷ್ಟು ಕುಸಿದ ಬಳಿಕವೇ. ಆದ್ದರಿಂದ ಮೂತ್ರಪಿಂಡ ಕಾಯಿಲೆಗಳು ಉಂಟಾಗುವ ಅಪಾಯ ಹೆಚ್ಚಿರುವವರು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು. ಜೀವನ ವಿಧಾನದಲ್ಲಿ ಕೆಲವು ಸರಳವಾದ ಪರಿವರ್ತನೆಗಳನ್ನು ಮಾಡಿಕೊಳ್ಳುವುದರ ಮೂಲಕ ಈ ಸಮಸ್ಯೆ ಉಂಟಾಗದಂತೆ ತಡೆಯಬಹುದು ಅಥವಾ ಮುಂದೂಡಬಹುದು. -ಡಾ| ರವೀಂದ್ರ ಪ್ರಭು
ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥರು, ನೆಫ್ರಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಣಿಪಾಲ