Advertisement

ಹಣಕ್ಕಾಗಿ ಅಪಹರಣ: ಮೂವರ ಬಂಧನ

12:00 PM Dec 13, 2018 | Team Udayavani |

ಬೆಂಗಳೂರು: ಚೈನ್‌ ಲಿಂಕ್‌ ಮಾರ್ಕೆಟಿಂಗ್‌ ಕಂಪನಿ ಯೊಂದರ ಉದ್ಯೋಗಿಯನ್ನು ಅಪಹರಿಸಿದ್ದ ಮೂವರು ಆರೋಪಿಗಳನ್ನು ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಮೂಲದ ಗೌಸ್‌ಫಿರ್‌, ಶೇಖ್‌ ಹಫಿಜ್‌, ಎಸ್‌.ಶೇಖ್‌ ಬಂಧಿತರು.

Advertisement

ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಡೈರೆಕ್ಟ್ಸೆ ಲ್ಲಿಂಗ್‌ ಕಂಪನಿಯ ಉದ್ಯೋಗಿ ಕಿರಣ್‌ ಎಂಬಾತನನ್ನು ಡಿ.9ರಂದು ರಾತ್ರಿ ಅಪಹರಿಸಿದ್ದ ಆರೋಪಿಗಳು, ಚಿತ್ತೂರಿನಲ್ಲಿ ಕೂಡಿ ಹಾಕಿದ್ದರು. ಬಳಿಕ ಕಂಪನಿಯ ಮತ್ತೂಬ್ಬ ಉದ್ಯೋಗಿ ಸಂಜೀವ್‌ ನಾಯ್ಕಗೆ ಕರೆ ಮಾಡಿ ಅಪಹರಣ ವಿಷಯ ತಿಳಿಸಿ ಹಣ ಕೊಡದೆ ಹೋದರೆ ಕಾರ್ತಿಕ್‌ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಈ ಕುರಿತು ಸಂಜೀವ್‌ ನಾಯ್ಕ ನೀಡಿದ ದೂರಿನ ಅನ್ವಯ ಶಿವಾಜಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಇನ್ಸ್‌ಪೆಕ್ಟರ್‌ ತಬ್ರೇಜ್‌ ಹಾಗೂ ಪಿಎಸ್‌ಐ ಆರ್‌.ಶೀಲಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಮುಳಬಾಗಿಲು ಪಟ್ಟಣದಲ್ಲಿ ಸ್ನೇಹಿತನ ಮನೆಯಲ್ಲಿ ಹಫಿಜ್‌
ಇರುವುದು ಸಿಡಿಆರ್‌ ಮಾಹಿತಿಯಿಂದ ಗೊತ್ತಾಯಿತು.

ಹೀಗಾಗಿ ದೂರುದಾರ ಸಂಜೀವ್‌ ನಾಯ್ಕನಿಂದ ಕರೆ ಮಾಡಿಸಿ ಹಣ ತರುತ್ತಿರುವುದಾಗಿ ತಿಳಿಸಿ ಮಫ್ತಿಯಲ್ಲಿ ಅಲ್ಲಿಗೆ ತೆರಳಿದ ತಂಡ, ಹಫಿಜ್‌ ಹಾಗೂ ಗೌಸ್‌ ಫಿರ್‌ನನ್ನು ಬಂಧಿಸಿದೆ. ಬಳಿಕ ಅವರು ನೀಡಿದ ಮಾಹಿತಿ ಮೇರೆಗೆ ಚಿತ್ತೂರಿನಲ್ಲಿ ಕಾರ್ತಿಕ್‌ ನನ್ನು ರಕ್ಷಿಸಿ ಮತ್ತೂಬ್ಬ ಆರೋಪಿ ಶೇಖ್‌ನನ್ನು ಕೂಡ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಹಣ ವಾಪಸ್‌ ನೀಡದ್ದಕ್ಕೆ ಸಂಚು: ಒಬ್ಬರನ್ನು ಕಂಪನಿಯ ಸದಸ್ಯನನ್ನಾಗಿ ಸೇರಿಸಿದರೆ ಕಮಿಷನ್‌ ನೀಡುವ ಚೈನ್‌ ಲಿಂಕ್‌ ಮಾದರಿಯ ಮಾರ್ಕೆಟಿಂಗ್‌ ವ್ಯವಹಾರ ನಡೆಸುತ್ತಿದ್ದ ವಿಹಾನ್‌ ಡೈರೆಕ್ಟ್ ಸೆಲ್ಲಿಂಗ್‌ ಕಂಪನಿಯಲ್ಲಿ ಹಸೀನಾ ಎಂಬಾಕೆ ಕೆಲಸ ಮಾಡುತ್ತಿದ್ದಳು. ಆಕೆಯ ಮಾತು ಕೇಳಿದ್ದ ಶೇಖ್‌ ಹಫಿಜ್‌, ಶೇಖ್‌ ಮುಜಾಹೀದ್‌, ಆದಂ ಬಾಷಾ, ಪಿ.ಫ‌ಯಾಜ್‌, ಅಬ್ದುಲ್‌ ಖಯಾಮ್‌, ಕಿರಣ್‌ ಕುಮಾರ್‌ ಆಚಾರ್ಯ, ಐದು ಕಂತುಗಳಲ್ಲಿ ತಲಾ 2.5 ಲಕ್ಷ ಹಣ ತೊಡಗಿಸಿದ್ದರು.

Advertisement

ಬಂಧಿತ ಆರೋಪಿಗಳು ಕೆಲವರನ್ನು ಕಂಪನಿಗೆ ಸೇರಿಸಿದ್ದಕ್ಕೆ ಎರಡು ವಾರ ಕಮಿಷನ್‌ ಕೂಡ ಬಂದಿತ್ತು. ಆದರೆ ಹೊಸ ಸದಸ್ಯರು ನೋಂದಣಿ ಮಾಡದ ಕಾರಣ ಕಂಪನಿ ಕಮಿಷನ್‌ ನಿಲ್ಲಿಸಿತ್ತು. ಹೀಗಾಗಿ ಆರೋಪಿಗಳು ಕಂಪನಿಗೆ ತೆರಳಿ ವಿಚಾರಿಸಿದಾಗ ಇದೊಂದು ಚೈನ್‌ ಲಿಂಕ್‌ ವ್ಯವಹಾರ ಹಾಗೂ ಹಸೀನಾ ಕೆಲಸ ಬಿಟ್ಟಿರುವುದು ಗೊತ್ತಾಗಿತ್ತು. ಈ ವೇಳೆ ಹಸೀನಾ ನಮಗೆ ಸುಳ್ಳು ಹೇಳಿ ಹಣ ಕಟ್ಟಿಸಿಕೊಂಡು ವಂಚಿಸಿದ್ದಾರೆ. ಚೈನ್‌ ಲಿಂಕ್‌ ವ್ಯವಹಾರ ಎಂದು ನಮಗೆ ಗೊತ್ತಿರಲಿಲ್ಲ. ಹೀಗಾಗಿ ನಾವು ಕಟ್ಟಿರುವ ಹಣ ವಾಪಸ್‌ ಕೊಡಿ ಎಂದು ಕಂಪನಿಯ ಅಧಿಕಾರಿಗಳ ಬಳಿ ಹಫಿಸ್‌ ಹಾಗೂ ಇತರರು ಹೇಳಿದ್ದಾರೆ. ಆದರೆ, ಅಧಿಕಾರಿಗಳು ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ, ಕಾರ್ತಿಕ್‌ನನ್ನು ಅಪಹರಿಸಿ ಹಣ ವಾಪಾಸ್‌ ಪಡೆದುಕೊಳ್ಳುವ ಸಂಚು ರೂಪಿಸಿದ್ದರು. ಅದರಂತೆ ಡಿ.9ರಂದು ಕ್ವೀನ್ಸ್‌ ರಸ್ತೆಯಲ್ಲಿ ನಡೆದ ಕಂಪನಿ ಗ್ರಾಹಕರ ಸಭೆಯಲ್ಲಿ ಪಾಲ್ಗೊಂಡು ಆ ಬಳಿಕ ಕಾರ್ತಿಕ್‌ನನ್ನು ಅಪಹರಿಸಿದ್ದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next