Advertisement

ಒತ್ತೆಸೆರೆಯಲ್ಲಿದ್ದ ಕಾರ್ಮಿಕನ ರಕ್ಷಣೆ, ಗುತ್ತಿಗೆದಾರ ಅರೆಸ್ಟ್‌

06:50 AM Jan 16, 2019 | Team Udayavani |

ಜಾಲ್‌ನಾ, ಮಹಾರಾಷ್ಟ್ರ : ಹಣಕಾಸು ವಿವಾದವೊಂದರಲ್ಲಿ ಹದಿನೈದು ದಿನಗಳ ಕಾಲ ಗುತ್ತಿಗೆದಾರನೋರ್ವನ ಒತ್ತೆ ಸೆರೆಯಲ್ಲಿದ್ದ  ಕಾರ್ಮಿಕನೊಬ್ಬನನ್ನು ಮಹಾರಾಷ್ಟ್ರ ಪೊಲೀಸರು ರಕ್ಷಿಸಿದ್ದಾರೆ ಮತ್ತು ಆರೋಪಿ ಗುತ್ತಿಗೆದಾರ ಕುಂಡಲಿಕ್‌ ಚವಾಣ್‌ ಎಂಬಾತನನ್ನು ಬಂಧಿಸಿದ್ದಾರೆ.

Advertisement

ಪೊಲೀಸರಿಂದ ರಕ್ಷಿಸಲ್ಪಟ್ಟಿರುವ ಕಾರ್ಮಿಕನನ್ನು ನಾಮದೇವ ಜಾಧವ್‌ (45) ಎಂದು ಗುರುತಿಸಲಾಗಿದೆ. ಈತನು ನೆರೆಯ ಬುಲ್ಡಾನಾ ಜಿಲ್ಲೆಯ ನಿವಾಸಿ. ಈತನು ಕಳೆದ ಡಿ.28ರಂದು ಜಾಲಾ°ದಲ್ಲಿನ ತನ್ನ ಸಂಬಂಧಿಕರ ಮನೆಗೆ ಹೋಗುತ್ತಿದ್ದಾಗ ಆತನನ್ನು ಬಲವಂತದಿಂದ ವಾಹನದಲ್ಲಿ ತುರುಕಿ ಅಪಹರಿಸಲಾಗಿತ್ತು. ಈತ ತನ್ನ ಗುತ್ತಿಗೆದಾರನಿಂದ 5 ಲಕ್ಷ ರೂ. ಸಾಲ ತೆಗೆದುಕೊಂಡು ಹಿಂದಿರುಗಿಸಿರಲಿಲ್ಲ ಎನ್ನಲಾಗಿದೆ. 

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಚಂದನ್‌ಜಿàರಾ ಪೊಲೀಸ್‌ ಠಾಣಾಧಿಕಾರಿ ಬಾಳಾಸಾಹೇಬ್‌ ಪವಾರ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next