ಉಡುಪಿ: ಉಡುಪಿಯ ಕಿದಿಯೂರು ಹೊಟೇಲ್ಸ್‌ನ ಕಾರಣಿಕ ಶ್ರೀ ನಾಗ ಸನ್ನಿಧಿಯಲ್ಲಿ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತವಾಗಿ ಜ. 30ರಂದು ಬೆಳಗ್ಗೆ ಕಬಿಯಾಡಿ ಜಯರಾಮ ಆಚಾರ್ಯ ನೇತೃತ್ವದಲ್ಲಿ ಬೆಳಗ್ಗೆ ಶ್ರೀ ನಾಗಸನ್ನಿಧಿಯಲ್ಲಿ ಸರ್ಪ ಸೂಕ್ತ ಹವನ, ತತ್ವ ಕಲಶಾರಾಧನೆ, ತತ್ವ ಹೋಮ, ಶ್ರೀ ನಾಗದೇವರಿಗೆ ಹಾಲು ಹಾಗೂ ಸೀಯಾಳಗಳಿಂದ ವಿಶೇಷ ಕ್ಷೀರ, ನಾರಿಕೇಳ ಅಭಿಷೇಕ, ತತ್ವ ಕಲಶಾಭಿಷೇಕ, ಮಹಾಪೂಜೆ ಮತ್ತು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಇದನ್ನೂ ಓದಿ:Budget ಅಧಿವೇಶನ ಆರಂಭ: ಸುಗಮ ಕಲಾಪಕ್ಕೆ ವಿಪಕ್ಷ ಸಂಸದರು ಸಹಕಾರ ನೀಡಬೇಕು: PM ಮೋದಿ
ಸಂಜೆ ಬ್ರಹ್ಮ ಕಲಶ ಮಂಡಲ ಲೇಖನ, ಅಷ್ಟೋತ್ತರ ಶತಕಲಶ ಸಹಿತ ಬ್ರಹ್ಮಕುಂಭ ಸ್ಥಾಪನೆ, ಶ್ರೀ ನಾಗದೇವರಿಗೆ ರಾತ್ರಿ ಪೂಜೆ, ಸಂಜೆ 5.30ರಿಂದ ನಾಗಮಂಡಲ ಜರಗುವ ವೇದಿಕೆಯ ಮಂಟಪ ಸಂಸ್ಕಾರ, ವಾಸ್ತುಹೋಮ, ರಾಕ್ಷೋಘ್ನ ಹವನ, ದಿಕ್ಫಾಲಕ ಬಲಿ ನಡೆಯಿತು. ಪಲಿಮಾರು ಮಠ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ತುಲಾಭಾರ ಸೇವೆ ಜರಗಿತು.
ಸೇವಾಕರ್ತ ಭುವನೇಂದ್ರ ಕಿದಿಯೂರು, ಆಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಯುವರಾಜ್ ಮಸ್ಕತ್, ಭವ್ಯಶ್ರೀ ಕಿದಿಯೂರು, ಡಾ| ವಿಜಯೇಂದ್ರ ರಾವ್, ಗಣೇಶ್ ರಾವ್, ಹರಿಯಪ್ಪ ಕೋಟ್ಯಾನ್, ಹಿರಿಯಣ್ಣ ಕಿದಿಯೂರು, ಬೃಜೇಶ್ ಬಿ. ಕಿದಿಯೂರು,
ಹೀರಾ ಬಿ. ಕಿದಿಯೂರು, ಜಿತೇಶ್ ಬಿ. ಕಿದಿಯೂರು, ಪ್ರಿಯಾಂಕ ಬಿ. ಕಿದಿಯೂರು, ಹರಿಯಪ್ಪ ಕೋಟ್ಯಾನ್, ವನಜಾ ಹಿರಿಯಣ್ಣ, ಮಲ್ಲಿಕಾ ಯುವರಾಜ್, ಗಿರೀಶ್ ಕಾಂಚನ್, ಯೋಗಿಶ್‌ಚಂದ್ರಧರ್, ಸತೀಶ್ ಕುಂದರ್, ಸುಧಾಕರ ಮೆಂಡನ್, ಅಶೀಶ್ ಕುಮಾರ್ ,ಪಾಂಡುರಂಗ ಕರ್ಕೇರ.
ಭೋಜರಾಜ್ ಕಿದಿಯೂರು, ಧನಂಜಯ ಕಾಂಚನ್, ಮಧುಸೂದನ್ ಕೆಮ್ಮಣ್ಣು, ದಿನೇಶ್ ಎರ್ಮಾಳು, ವಿಲಾಸ್ ಜೈನ್, ದಿನಕರ, ಪ್ರಕಾಶ್ ಜತ್ತನ್, ರಮೇಶ್ ಕಿದಿಯೂರು, ಪ್ರಕಾಶ್ ಸುವರ್ಣ, ಚಂದ್ರೇಶ್ ಪಿತ್ರೋಡಿ, ಯತೀಶ್ ಕಿದಿಯೂರು, ವಿಜಯ ಕೊಡವೂರು ಮೊದಲಾದವರು ಪಾಲ್ಗೊಂಡಿದ್ದರು.
ಇಂದು ಅಷ್ಟಪವಿತ್ರ ನಾಗಮಂಡಲ
ಜ. 31ರಂದು ಬೆಳಗ್ಗೆ 9.45ರಿಂದ ಶ್ರೀ ನಾಗಸನ್ನಿಧಿಯಲ್ಲಿ ಅಷ್ಟೋತ್ತರ ಶತಕಲಶಾಭಿಷೇಕ, ಬ್ರಹ್ಮಕುಂಭಾಭಿಷೇಕ, ದರ್ಶನ ಸೇವೆ ಹಾಗೂ ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಇರಲಿದೆ. ಸಂಜೆ 4.30ಕ್ಕೆ ಹಾಲಿØಟ್ಟು ಸೇವೆ, 5.30ರಿಂದ ಮಂಟಪದಲ್ಲಿ ಗಂಗಾರತಿ, 6.30ಕ್ಕೆ ಅಷ್ಟಪವಿತ್ರ ನಾಗಮಂಡಲೋತ್ಸವ ಆರಂಭಗೊಂಡು ರಾತ್ರಿ 11.30ಕ್ಕೆ ಪ್ರಸಾದ ವಿತರಣೆಯಾಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಶ್ರೀ ವಿಶ್ವೇಶತೀರ್ಥ ಮಂಟಪದಲ್ಲಿ ಬೆಳಗ್ಗೆ 10.30ರಿಂದ ವಿದುಷಿ ಪವನಾ ಬಿ. ಆಚಾರ್, ಮಣಿಪಾಲ ನಿರ್ದೇಶನದಲ್ಲಿ ಏಕಕಾಲದಲ್ಲಿ 108 ವೀಣೆಗಳ ವಾದನ ಮಧ್ಯಾಹ್ನ 12.30ರಿಂದ ಶ್ರೀಮತಿ ಅಕ್ಷತಾ ದೇವಾಡಿಗ ಮತ್ತು ಬಳಗ ಅಲೆವೂರು ಅವರಿಂದ ಸ್ಯಾಕೊÕàಫೋನ್ ವಾದನ, ಮಧ್ಯಾಹ್ನ ಗಂಟೆ 3ರಿಂದ ಶ್ರೀ ಲಕ್ಷ್ಮೀನಾರಾಯಣ ಉಪಾಧ್ಯ ಪಾಡಿಗಾರು ಮತ್ತು ಬಳಗದವರಿಂದ ಭಕ್ತಿ ರಸಾಯನ, ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಹಾಕಲಾದ ಶ್ರೀ ವಾಸುಕೀ ಮಂಟಪದಲ್ಲಿ ಬೆಳಗ್ಗೆ 10.30ರಿಂದ ಶ್ರುತಿ ಮ್ಯೂಸಿಕ್ ಎರ್ಮಾಳು ಬಡಾ ಅವರಿಂದ ಭಕ್ತಿ-ಭಾವ-ಜಾನಪದ ಸಂಗೀತ ವೈಭವ, ಮಧ್ಯಾಹ್ನ 1ರಿಂದ 3.30ರ ವರೆಗೆ ಜಗದೀಶ್ ಪುತ್ತೂರು ಬಳಗದವರಿಂದ ಭಕ್ತಿ ಗಾನಾಮೃತ ನಡೆಯಲಿದೆ.