ಕೆ. ಶ್ರೀಕಾಂತ್ 3ನೇ ಸ್ಥಾನ ಅಲಂಕರಿಸಿದ್ದಾರೆ. ಭಾರತದ ಮತ್ತೂಬ್ಬ ಶಟ್ಲರ್ ಎಚ್.ಎಸ್. ಪ್ರಣಯ್ ಕೂಡ ಬಡ್ತಿ ಪಡೆದಿದ್ದು, 2 ಸ್ಥಾನಗಳ ಪ್ರಗತಿ ಯೊಂದಿಗೆ 8ನೇ ಕ್ರಮಾಂಕದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್ ಆಗಿದೆ.
Advertisement
ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ಅಗ್ರ ರ್‍ಯಾಂಕಿಂಗ್‌ನಲ್ಲಿ ಮುಂದುವರಿದಿದ್ದು, ದಕ್ಷಿಣ ಕೊರಿಯಾದ ಸನ್ ವಾನ್ ಹೊ ದ್ವಿತೀಯ ಸ್ಥಾನದಲ್ಲಿದ್ದಾರೆ. ಶ್ರೀಕಾಂತ್ 74,135 ಅಂಕ ಹಾಗೂ ದ್ವಿತೀಯ ಸ್ಥಾನಿ ವಾನ್ ಹೊ 74,670 ಅಂಕ ಹೊಂದಿದ್ದಾರೆ.
ವನಿತಾ ಸಿಂಗಲ್ಸ್ ವಿಭಾಗದಲ್ಲಿ ಪಿ.ವಿ. ಸಿಂಧು 3ನೇ ರ್‍ಯಾಂಕಿಂಗ್ ಕಾಯ್ದು ಕೊಂಡಿದ್ದಾರೆ. ಸೈನಾ ನೆಹ್ವಾಲ್ 2 ಸ್ಥಾನ ಮೇಲೇರಿ 10ನೇ ಸ್ಥಾನಕ್ಕೆ ಬಂದಿದ್ದಾರೆ. ಗೇಮ್ಸ್ ಫೈನಲ್‌ನಲ್ಲಿ ಸಿಂಧುಗೆ ಸೋಲುಣಿಸಿ ಚಿನ್ನ ಜಯಿಸಿದ್ದ ಸೈನಾ ಒಟ್ಟು 55,890 ಅಂಕ ಗಳಿಸಿದ್ದಾರೆ. ಚೈನೀಸ್ ತೈಪೆಯ ತೈ ಜು ಯಿಂಗ್ ನಂಬರ್ ವನ್ ಆಟಗಾರ್ತಿಯಾಗಿದ್ದು, ಜಪಾನಿನ ಅಕಾನೆ ಯಮಾಗುಚಿ 2ನೇ ಸ್ಥಾನದಲ್ಲಿದ್ದಾರೆ.