Advertisement

ಮಾತಾಡೋ ತಾರೆಯ ಕಂಡ ಕಿಚ್ಚ: Watch

03:16 PM Oct 06, 2018 | |

ಸುದೀಪ್‌ ಅವರ ಬ್ಯಾನರ್‌ನಲ್ಲಿ ತಯಾರಾಗಿರುವ “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಮೂಲಕ ರೆಬಲ್ ಸ್ಟಾರ್ ಅಂಬರೀಶ್ ವಿಭಿನ್ನ ಪಾತ್ರದಲ್ಲಿ ಬೆಳ್ಳಿತೆರೆಯ ಮಿಂಚುತ್ತಿದ್ದಾರೆ. ಭರ್ಜರಿಯಾಗಿ ಒಂದು ವಾರ ದಾಟಿ, ಎರಡನೇ ವಾರಕ್ಕೆ ಕಾಲಿಟ್ಟಿರುವ ಈ ಚಿತ್ರದ ರೊಮ್ಯಾಂಟಿಕ್ ವಿಡಿಯೋ ಸಾಂಗ್ ಬಿಡುಗಡೆ ಆಗಿದೆ.

Advertisement

ಸುದೀಪ್ ಹಾಗೂ ಶೃತಿ ಹರಿಹರನ್ ಕಾಂಬಿನೇಷನ್‍ನ ರೊಮ್ಯಾಂಟಿಕ್ ಹಾಡು “ಮಾತಾಡೋ ತಾರೆಯ ಕಂಡ ಹಾಗೆ’ ಬಿಡುಗಡೆಯಾಗಿದ್ದು, ವಿ. ನಾಗೇಂದ್ರ ಪ್ರಸಾದ್ ರಚನೆಯ ಈ ಗೀತೆ ಜೆಮಿನಿ ವಿಜಯ್ ಬಾಬು ಅವರ ಧ್ವನಿಯಲ್ಲಿ ಸುಮಧುರವಾಗಿ ಮೂಡಿ ಬಂದಿದೆ. ಅಲ್ಲದೇ ಅರ್ಜುನ್ ಜನ್ಯ ಸಂಗೀತ ಕಂಪೋಸ್ ಮಾಡಿರುವ ಈ ಹಾಡು​, ಚಿತ್ರ ಬಿಡುಗಡೆಯ ಮುಂಚೆಯೇ ಸಿಕ್ಕಾಪಟ್ಟೆ ಫೇಮಸ್​ ಆಗಿತ್ತು. 

ಇನ್ನು ಚಿತ್ರವನ್ನು ಗುರುದತ್‌ ಗಾಣಿಗ ನಿರ್ದೇಶಿಸಿದ್ದು, ಸುದೀಪ್‌ ಜೊತೆ ಸಹಾಯಕರಾಗಿದ್ದ ಅವರಿಗೆ ಇದು ಮೊದಲ ಸಿನಿಮಾ. ಚಿತ್ರಕ್ಕೆ ಸುದೀಪ್‌ ಅವರ ಚಿತ್ರಕಥೆ ಇದೆ. ಜಾಕ್‌ ಮಂಜು ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಅಂಬರೀಶ್‌ ಜೋಡಿಯಾಗಿ ಸುಹಾಸಿನಿ ನಟಿಸಿದ್ದಾರೆ.

ಅಂದಹಾಗೆ, “ಅಂಬಿ ನಿಂಗೆ ವಯಸ್ಸಾಯ್ತೋ’ ತಮಿಳಿನ “ಪಾ ಪಾಂಡಿ’ ಚಿತ್ರದ ರೀಮೇಕ್‌. ಅಲ್ಲಿ ರಾಜ್‌ಕಿರಣ್‌ ಮಾಡಿದ ಪಾತ್ರವನ್ನು ಇಲ್ಲಿ ಅಂಬರೀಶ್‌ ಮಾಡಿದ್ದಾರೆ. ಚಿತ್ರದಲ್ಲಿ ಅಂಬರೀಶ್‌ ಅವರ ಯೌವ್ವನದ ದಿನಗಳ ಪಾತ್ರದಲ್ಲಿ ಸುದೀಪ್‌ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತವಿರುವ ಈ ಚಿತ್ರಕ್ಕೆ ಜೆಬಿನ್‌ ಜಾಕೋಬ್‌ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next