ಬೆಂಗಳೂರು: ಕನ್ನಡದ ನಟ ಕಿಚ್ಚ ಸುದೀಪ್ ಅವರು ಪ್ರಸ್ತುತ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಗುರುತಿಸಿಕೊಂಡಿರುವ ಕಾರಣ ಅವರು ನಟಿಸಿರುವ ಯಾವುದೇ ಶೋ, ಭಾವಚಿತ್ರಗಳನ್ನು ಪ್ರಸಾರ ಮಾಡದಂತೆ ಜೆಡಿಎಸ್ ಚುನಾವಣೆ ಆಯೋಗಕ್ಕೆ ದೂರು ನೀಡಿದೆ.
ಸುದೀಪ್ ಅವರ ಸಿನೆಮಾ, ಜಾಹೀರಾತು, ಪೋಸ್ಟರ್ ಮುಂತಾದುವುಗಳು ಬಿತ್ತರಿಸುವ ಮೂಲಕ ಮತದ ಮೇಲೆ ಪ್ರಭಾವ ಬೀರುತ್ತದೆ ಎಂಬ ಹಿನ್ನೆಲೆಯಲ್ಲಿ ಚುನಾವಣೆ ಮುಗಿಯುವವರೆಗೆ ಸುದೀಪ್ ನಟನೆಯ ಯಾವುದೇ ಶೋ ಮತ್ತು ಅವರ ಭಾವಚಿತ್ರವಿರುವ ಜಾಹೀರಾತುಗಳ ಪ್ರಸಾರಕ್ಕೆ ತಡೆ ಹಿಡಿಯಬೇಕಾಗಿ ಜನತಾದಳ ಕಾನೂನು ವಿಭಾಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಇದನ್ನೂ ಓದಿ:Goa ಕಾಡ್ಗಿಚ್ಚಿನಿಂದ ಹಲವು ಕಡೆ ಅಪಾರ ಅರಣ್ಯ ನಾಶ; ರಾಜ್ಯಸಭೆಯಲ್ಲಿ ಮಾಹಿತಿ
ಕೆಲ ದಿನಗಳ ಹಿಂದೆ ನಟ ಸುದೀಪ್ ಅವರು ಪತ್ರಿಕಾಗೋಷ್ಠಿ ನಡೆಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ನೀಡಿ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ.