ಬೆಂಗಳೂರು: ನಾನು ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾನು ಯಾವ ಪಕ್ಷದಿಂದ ಟಿಕೆಟ್ ಕೊಡಿಸುವಷ್ಟು ದೊಡ್ಡವನಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳುವ ಮೂಲಕ ಬಿಜೆಪಿ ಸೇರ್ಪಡೆ ಬಗ್ಗೆ ಸ್ಪಷ್ಟನೆ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ ನನ್ನ ಪರವಾಗಿ ಕೆಲವರು ನಿಂತಿದ್ದರು. ನಮ್ಮವವರಿಗೆ ಕೆಲ ನಿಲುವುಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ನಾನು ಹೋಗುವ ಪ್ರತಿಕಾಗೋಷ್ಠಿಯಲ್ಲಿ ಎಲ್ಲವನ್ನೂ ಹೇಳುತ್ತೇನೆ ಇಲ್ಲೇನು ಹೇಳಲ್ಲ ಎಂದರು.
ಖಾಸಗಿ ವಿಡಿಯೋಗಳನ್ನು ಹಾಕುತ್ತೇನೆ ಎನ್ನುವ ಬೆದರಿಕೆ ಪತ್ರದ ಪ್ರತಿಕ್ರಿಯೆ ನೀಡಿದ ಅವರು, ಇಂಥ ಪತ್ರಗಳ ಬಗ್ಗೆ ನಾನು ಹೆದರುವುದಿಲ್ಲ. ನನಗೆ ಇದು ಯಾರು ಬರೆದಿದ್ದಾರೆ ಎನ್ನುವುದು ಗೊತ್ತಿದೆ. ಆದರೆ ಅವರ ಬಗ್ಗೆ ನಾನೇನು ಮಾತನಾಡಲ್ಲ.ಇಂಥದ್ದಕ್ಕೆಲ್ಲ ಉತ್ತರ ಕೊಡುತ್ತೇನೆ. ಚಿತ್ರರಂಗದಲ್ಲಿ ಬೆಂಬಲಿಸುವವರು ಇರುತ್ತಾರೆ, ಆಗದವರು ಕೂಡ ಇರುತ್ತಾರೆ. ಅವರವರ ಭಾಷೆಯಲ್ಲೇ ಅವರಿಗೆ ಉತ್ತರ ನೀಡಬೇಕು ಎಂದರು.
ಕಿಚ್ಚನ ರಾಜಕೀಯ ಎಂಟ್ರಿಯ ವಿಚಾರಕ್ಕೆ ಪರ- ವಿರೋಧ ಚರ್ಚೆಗಲು ಶುರುವಾಗಿದೆ. ಚುನಾವಣೆಯಲ್ಲಿ ಸೋಲುವ ಭಯದಲ್ಲಿ ಭ್ರಷ್ಟ ಬಿಜೆಪಿ ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ .. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ಎಂದು ನಟ ಪ್ರಕಾಶ್ ರಾಜ್ ಈ ಬಗ್ಗೆಟ್ವೀಟ್ ಮಾಡಿದ್ದಾರೆ.