Advertisement

ಸಲ್ಲುಗೆ ಸುದೀಪ್ ವಿಲನ್? ಟೈಗರ್ ಜಿಂದಾ ಹೈನಲ್ಲಿ ಕಿಚ್ಚ

03:52 PM Mar 20, 2017 | Sharanya Alva |

ಸುದೀಪ್‌ ಈಗಾಗಲೇ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಮತ್ತೂಮ್ಮೆ ಹಿಂದಿ ಸಿನಿಮಾ ವಿಷಯಕ್ಕಾಗಿ ಸುದೀಪ್‌ ಸುದ್ದಿಯಲ್ಲಿದ್ದಾರೆ. ಅದು ಸಲ್ಮಾನ್‌ ಖಾನ್‌ ಅವರ “ಟೈಗರ್‌ ಜಿಂದಾ ಹೈ’ ಸಿನಿಮಾದಿಂದ. 

Advertisement

ಸಲ್ಮಾನ್‌ ಖಾನ್‌ ನಾಯಕರಾಗಿರುವ ಈ ಸಿನಿಮಾದಲ್ಲಿ ಸುದೀಪ್‌ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆನ್ನಲಾಗಿದೆ. ಅದು ನೆಗೆಟಿವ್‌ ಶೇಡ್‌ನ‌ ಪಾತ್ರ. ಹೌದು, ಈ ಚಿತ್ರದಲ್ಲಿ ಸುದೀಪ್‌ ಜಾಹೀರ್‌ ಎನ್ನುವ ಪಾಕಿಸ್ತಾನದ ಐಎಸ್‌ಐ ಏಜೆಂಟ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಅಂದಹಾಗೆ, ಇದು
2012ರಲ್ಲಿ ತೆರೆಕಂಡ “ಏಕ್ತಾ ಟೈಗರ್‌’ ಚಿತ್ರದ ಮುಂದುವರಿದ ಭಾಗವಾಗಿದೆ.

ಈ ಚಿತ್ರವನ್ನು ಅಲಿ ಅಬ್ಟಾಸ್‌ ಜಾಫ‌ರ್‌ ನಿರ್ದೇಶನ ಮಾಡುತ್ತಿದ್ದು, ಆದಿತ್ಯ ಚೋಪ್ರಾ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸಲ್ಲುವಿಗೆ ಜೋಡಿಯಾಗಿ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ. ಉಳಿದಂತೆ ಗಿರೀಶ್‌ ಕಾರ್ನಾಡ್‌, ಪರೇಶ್‌ ರಾವಲ್‌ ನಟಿಸುತ್ತಿದ್ದು, ತೆಲುಗಿನ ಸ್ಟಾರ್‌ ನಟ ಮಹೇಶ್‌ ಬಾಬು ಕೂಡಾ ಈ ಚಿತ್ರದಲ್ಲಿ ಗೆಸ್ಟ್‌ ಅಪಿಯರೆನ್ಸ್‌  ಮಾಡುತ್ತಿದ್ದಾರಂತೆ. ಹೀಗೆ ದೊಡ್ಡ ತಾರಾಗಣವಿರುವ,
ಬಹುನಿರೀಕ್ಷಿತ ಹಿಂದಿ ಚಿತ್ರದಲ್ಲಿ ಸುದೀಪ್‌ ಕೂಡಾ ಪ್ರಮುಖ ಪಾತ್ರ ಮಾಡುತ್ತಿರೋದು ಅವರ ಅಭಿಮಾನಿಗಳಿಗೆ ಖುಷಿ ನೀಡಿರುವುದಂತೂ ಸುಳ್ಳಲ್ಲ. 

ಸುದೀಪ್‌ಗೆ ವಿಲನ್‌ ಪಾತ್ರ ಹೊಸತಲ್ಲ. ಈ ಹಿಂದೆ ರಾಜ್‌ಮೌಳಿ ನಿರ್ದೇಶನದ “ಈಗ’ ಚಿತ್ರದಲ್ಲಿ ಸುದೀಪ್‌ ವಿಲನ್‌ ಆಗಿ ನಟಿಸಿದ್ದು, ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುವ ಜೊತೆಗೆ ಆ ಪಾತ್ರಕ್ಕಾಗಿ ಸುದೀಪ್‌ಗೆ ಪ್ರತಿಷ್ಠಿತ ನಂದಿ ಪ್ರಶಸ್ತಿ ಕೂಡಾ ಬಂದಿತ್ತು.
 
ಈಗ ಬಾಲಿವುಡ್‌ ಚಿತ್ರದಲ್ಲಿ ನೆಗೆಟಿವ್‌ ಶೇಡ್‌ ಪಾತ್ರದ ಮೂಲಕ ಸಿನಿ ಪ್ರೇಮಿಗಳ ಮನಕ್ಕೆ ಮತ್ತಷ್ಟು 
ಹತ್ತಿರವಾಗಲಿದ್ದಾರೆ. ಅಂದಹಾಗೆ, ಈ ಪಾತ್ರದಲ್ಲಿ ಸುದೀಪ್‌ ಅವರ ಗೆಟಪ್‌ ಹೇಗಿರುತ್ತದೆ ಎಂಬ 
ಕುತೂಹಲವಿದ್ದರೆ ನೀವು ಡಿಸೆಂಬರ್‌ವರೆಗೆ ಕಾಯಲೇಬೇಕು.

Advertisement

Udayavani is now on Telegram. Click here to join our channel and stay updated with the latest news.

Next