Advertisement

ಸದನ ಸುಗಮವಾಗಿ ನಡೆಯದಂತೆ ಖರ್ಗೆ ಮೇಲೆ ಒಂದು ಕುಟುಂಬದ ಒತ್ತಡ: ಜೋಶಿ

08:36 PM Dec 23, 2021 | Team Udayavani |

ನವದೆಹಲಿ : ಬುಧವಾರ ಅವಧಿಗೂ ಮುನ್ನವೇ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನದಲ್ಲಿ ಸದನ ಸುಗಮವಾಗಿ ನಡೆಯಲು ಬಿಡದಂತೆ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ‘ಒಂದು ಕುಟುಂಬದ ಒತ್ತಡಕ್ಕೆ ಒಳಗಾಗಿದ್ದಾರೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಗುರುವಾರ ಆರೋಪಿಸಿದ್ದಾರೆ.

Advertisement

ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಸರಕಾರ ಮತ್ತು ಪ್ರತಿಪಕ್ಷಗಳ ನಡುವಿನ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸಿದರು, ಆದರೆ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಸದನವನ್ನು ಸುಗಮವಾಗಿ ನಡೆಸಲು ಬಿಡಲಿಲ್ಲ ಎಂದು ಜೋಶಿ ಹೇಳಿದರು.

ಸರ್ಕಾರದ ಒತ್ತಡದಲ್ಲಿ ಉಭಯ ಪಕ್ಷಗಳ ನಡುವಿನ ಬಿಕ್ಕಟ್ಟನ್ನು ಪರಿಹರಿಸಲು ನಾಯ್ಡು ಪ್ರಯತ್ನಿಸಲಿಲ್ಲ ಎಂಬ ವರದಿಗಳನ್ನು ತಳ್ಳಿಹಾಕಿದ ಜೋಶಿ, ಸದನವನ್ನು ಸುಗಮವಾಗಿ ನಡೆಸಲು ಬಿಡದಿರಲು ಒಂದು ಕುಟುಂಬದ ಒತ್ತಡದಲ್ಲಿ ಖರ್ಗೆ ಇದ್ದಾರೆ ಎಂದು ಹೇಳಿದರು.

ಕೆಲವು ವರದಿಗಳ ಪ್ರಕಾರ, 12 ರಾಜ್ಯಸಭಾ ಸಂಸದರ ಅಮಾನತು ವಿಚಾರದಲ್ಲಿ ಸರಕಾರ ಮತ್ತು ಪ್ರತಿಪಕ್ಷಗಳ ನಡುವಿನ ಬಿಕ್ಕಟ್ಟನ್ನು ಪರಿಹರಿಸಸದಂತೆ ನಾಯ್ಡು ಅವರು ಸರಾಕಾರದ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಖರ್ಗೆ ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next