Advertisement
ಸೋಮವಾರ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಖರ್ಗೆ, ಎಲ್ಲರನ್ನೂ ಒಮ್ಮೆ ಮೂರ್ಖರ ನ್ನಾಗಿಸಬಹುದು. ಕೆಲವರನ್ನು ಎಲ್ಲ ಕಾಲ ದಲ್ಲಿಯೂ ಮೂರ್ಖರನ್ನಾಗಿಸಬಹುದು. ಆದರೆ ಎಲ್ಲರನ್ನೂ, ಎಲ್ಲ ಕಾಲದಲ್ಲಿ ಮೂರ್ಖ ರನ್ನಾಗಿಸಲು ಸಾಧ್ಯವಿಲ್ಲ. ಕೇಂದ್ರ ಸರಕಾರ ಮತ್ತು ಪ್ರಧಾನ ಮಂತ್ರಿಗಳು ಸತ್ಯಕ್ಕೆ ದೂರವಾದ ಭರವಸೆ ನೀಡುತ್ತಿದ್ದಾರೆಂದು ಗುಡುಗಿದರು.
Related Articles
Advertisement
ಸಾಮಾಜಿಕ ಕಲ್ಯಾಣದ ಕಾರ್ಯಕ್ರಮಗಳಿಗೆ 1,500 ಕೋಟಿ ರೂ. ನೀಡಿದ್ದರೂ ಶೇ. 15ರಷ್ಟು ಮಾತ್ರ ಖರ್ಚಾಗಿದೆ. ಪ್ರತಿ ವರ್ಷ 1 ಕೋಟಿ ಮನೆ ಕಟ್ಟುತ್ತೇವೆ ಎಂದು ಭರವಸೆ ನೀಡಿ ಕೇವಲ 48,000 ಮನೆ ಮಾತ್ರ ಕಟ್ಟಲಾಗಿದೆ. ಸುಮಾರು 11 ಕೋಟಿ ಶೌಚಾಲಯ ಕಟ್ಟುವ ಗುರಿ ಇಟ್ಟುಕೊಂಡಿರುವ ಸರಕಾರ ಕಳೆದ ಎರಡೂವರೆ ವರ್ಷಗಳಲ್ಲಿ ಎರಡೂವರೆ ಕೋಟಿ ಶೌಚಾಲಯಗಳನ್ನು ಕಟ್ಟಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನದಲ್ಲಿ ಕಡಿತ ಮಾಡಲಾಗಿದೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸು ವುದಾಗಿ ಹೇಳಿದ್ದ ಸರಕಾರ ಕೇವಲ 1.50 ಲಕ್ಷದಷ್ಟು ಮಾತ್ರ ಉದ್ಯೋಗ ನೀಡಿದೆ ಎಂದು ಕೇಂದ್ರ ಸರಕಾರದ ವೈಫಲ್ಯವನ್ನು ಖರ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು.
ತಿರುಗೇಟು ನೀಡಿದ ಅನಂತ್: ಖರ್ಗೆ ಅವರ ಈ ಹೇಳಿಕೆಯನ್ನು ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಅಷ್ಟೇ ತೀವ್ರವಾಗಿ ಖಂಡಿಸಿದರು. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಖರ್ಗೆ ಅವರು ಸಂಸತ್ತಿನ ದಾರಿ ತಪ್ಪಿಸುತ್ತಿದ್ದಾರೆ ಎಂದು ಆಪಾದಿಸಿದರು.