ಭಾಲ್ಕಿ: ಮಳೆಗೆ ಜಿಲ್ಲೆ ಸೇರಿದಂತೆ ಇಡೀ ಕಲ್ಯಾಣ ಕರ್ನಾಟಕ ಭಾಗ ತತ್ತರಿಸಿದ್ದು, ಬಹುತೇಕ ಬೆಳೆಗಳು ಕೊಚ್ಚಿ ಹೋಗಿವೆ. ಅಲ್ಲಲ್ಲಿ ರಸ್ತೆ, ಸೇತುವೆ ಹಾಳಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈಭಾಗದಲ್ಲಿ ಸುಮಾರು 2 ಸಾವಿರ ಕೋಟಿರೂ. ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ತಾಲೂಕಿನ ಗಡಿ ಭಾಗದ ಮೇಥಿ ಮೇಳಕುಂದಾ, ಲಂಜವಾಡ್, ಕಾಕನಾಳ ಹಾಗೂ ಲಖಣಗಾಂವ ಸೇರಿ ಮುಂತಾದ ಕಡೆಗಳಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ಈಶ್ವರ ಖಂಡ್ರೆ ರೈತರಹೊಲಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಗೀಡಾದ ಬೆಳೆ, ರಸ್ತೆ, ಸೇತುವೆ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಮೂರನೇ ಬಾರಿಗೆಪ್ರವಾಹ ಸಂಭವಿಸಿದೆ. ಆದರೆ ಸರ್ಕಾರ ಇದುವರೆಗೂ ಪರಿಹಾರ ಬಿಡುಗಡೆಗೆಕ್ರಮ ಕೈಗೊಂಡಿಲ್ಲ. ಗಡಿ ಭಾಗದಲ್ಲಿ ಅತಿವೃಷ್ಟಿ ಜತೆಗೆ ಮಹಾರಾಷ್ಟ್ರಭಾಗದಿಂದ ಹೆಚ್ಚುವರಿ ನೀರಿನಿಂದ ಕಟಾವು ಮಾಡಿಟ್ಟ ಸೋಯಾಬಿನ್‌ಬಣವೆ ಸಮೇತ ಸೇತುವೆಯಲ್ಲಿ ಹರಿದು ಕೊಂಡು ಹೋಗಿವೆ. ಒತ್ತಾಯದ ಮೇರೆಗೆ ಜಿಲ್ಲೆಗೆ ವೈಮಾನಿಕ ಸಮೀಕ್ಷೆ ನಡೆಸಲು ಬಂದಿದ್ದ ಸಿಎಂ ಬಿಎಸ್‌ವೈ ಜಿಲ್ಲೆಯ ಶಾಸಕರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಸಮೀಕ್ಷೆ ವೇಳೆ ಶಾಸಕರನ್ನು ಭೇಟಿಯಾಗಿ ಹಾನಿಗೀಡಾಗಿರುವ ಬಗ್ಗೆ ಮಾಹಿತಿ ಪಡೆಯಬೇಕಿತ್ತು. ಅಲ್ಲದೆ ಕನಿಷ್ಠ ಎಲ್ಲ ಕಡೆ ಹಾನೀಗಿಡಾದಪ್ರದೇಶವನ್ನಾದರೂ ವೀಕ್ಷಿಸಿ, ಸ್ಥಳದಲ್ಲೇ ಪರಿಹಾರ ಘೋಷಣೆ ಮಾಡಬೇಕಿತ್ತು. ಇದೊಂದು ಕಾಟಾಚಾರದ ಸಮೀಕ್ಷೆಯಾಗಿದೆ. ಪ್ರಕೃತಿ ವಿಕೋಪದಡಿನೀಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಸರ್ಕಾರ ತಕ್ಷಣ ಹೆಚ್ಚುವರಿ ಪರಿಹಾರ ಬಿಡುಗಡೆ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ ಸೇರಿದಂತೆ ಇತರೆ ಮುಖಂಡರು ಇದ್ದರು.