Advertisement

ಸಿರಿಧಾನ್ಯ ಮೇಳದಲ್ಲಿ ಖಾನಾವಳಿ ಆಕರ್ಷಣೆ

12:06 PM Jan 17, 2018 | Team Udayavani |

ಬೆಂಗಳೂರು: ಪಾರಂಪರಿಕ ಹಾಗೂ ಹೆಚ್ಚು ಪೌಷ್ಠಿಕಾಂಶ ಹೊಂದಿರುವ ಸಾವಯವ ಮತ್ತು ಸಿರಿಧಾನ್ಯಗಳತ್ತ ಜನರನ್ನು ಆಕರ್ಷಿಸುವ ಉದ್ದೇಶದಿಂದ ಖ್ಯಾತನಾಮ ಬಾಣಸಿಗರು “ಖಾನಾವಳಿ’ ಹೆಸರಲ್ಲಿ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದ್ದಾರೆ. 

Advertisement

ಇದೇ ಜ.19ರಿಂದ 21ರವರೆಗೆ ಅರಮನೆ ಮೈದಾನದಲ್ಲಿ ನಡೆಯುವ “ಸಾವಯವ ಹಾಗೂ ಸಿರಿಧಾನ್ಯ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ’ ನಡೆಯಲಿದ್ದು, ಇಲ್ಲಿ ಆಯೋಜಿಸುವ ವಿವಿಧ ಕಾರ್ಯಕ್ರಮಗಳ ಮೂಲಕ ಸಿರಿಧಾನ್ಯಗಳ ಮಹತ್ವದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವುದು ಮತ್ತು ಸಿರಿಧಾನ್ಯಗಳ ಬಳಕೆಗೆ ಅವರನ್ನು ಪ್ರೇರೇಪಿಸುವ ಉದ್ದೇಶದಿಂದ ವಿವಿಧ ಸಂವಾದ, ಚರ್ಚೆ, ಗೋಷ್ಠಿಗಳು ನಡೆಯಲಿದ್ದು,

ಈ ಎಲ್ಲ ಕಾರ್ಯಕ್ರಮಗಳನ್ನು ಒಟ್ಟಾಗಿಸಿ, ಜನರನ್ನು ಆಕರ್ಷಿಸುವ ಉದ್ದೇಶದಿಂದ “ಖಾನಾವಳಿ’ ಎಂದು ಹೆಸರಿಡಲಾಗಿದೆ. ದಕ್ಷಿಣ ಭಾರತದ ಬಾಣಸಿಗರ ಸಂಘ (ಎಸ್‌ಐಸಿಎ), ರಾಮಯ್ಯ ವಿವಿಯ ನ್ಯೂಟ್ರಿಷನ್‌ ಆ್ಯಂಡ್‌ ನ್ಯೂಟ್ರಾಸಿಟಿಕಲ್‌ ರಿಸರ್ಚ್‌ ಸೆಂಟರ್‌ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಈ ಸಂಬಂಧ ಕೃಷಿ ಇಲಾಖೆಯ ಸಮೃದ್ಧಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸವಾಂದದಲ್ಲಿ ಖ್ಯಾತ ಬಾಣಸಿಗರಾದ ಶಾಜಿಯಾ ಖಾನ್‌, ರಾಮಸ್ವಾಮಿ ಸೆಲ್ವರಾಜು, ಇಂಡಿಯನ್‌ ಡಯಟರಿ ಅಸೋಸಿಯೇಷನ್‌ ಅಧ್ಯಕ್ಷೆ ಹಾಗು ಪೌಷ್ಠಿಕಾಂಶ ತಜ್ಞೆ ಶೀಲಾ ಕೃಷ್ಣಸ್ವಾಮಿ ಮತ್ತಿತರರು ಪಾಲ್ಗೊಂಡು ಸಾವಯವ ಮತ್ತು ಸಿರಿಧಾನ್ಯಗಳ ಬಗ್ಗೆ ಅಭಿಪ್ರಾಯ ಮಂಡಿಸಿದರು.

ಮೂರು ದಿನ ನಡೆಯುವ ಸಾವಯವ ಹಾಗೂ ಸಿರಿಧಾನ್ಯ ವಾಣಿಜ್ಯ ಮೇಳದಲ್ಲಿ ಸಿರಿಧಾನ್ಯಗಳು, ಆಹಾರ ಮತ್ತು ಮಕ್ಕಳ ಪೋಷಣೆಯಲ್ಲಿ ಪೌಷ್ಠಿಕಾಂಶದ ಆಯಾಮಗಳು, ಸಾವಯವ ಆಹಾರ ಪದಾರ್ಥಗಳ ಅಭಿಯಾನ, ಇತಿಹಾಸ, ವರ್ತಮಾನ ಹಾಗೂ ಭವಿಷ್ಯ ಮುಂತಾದ ವಿಷಯಗಳ ಬಗ್ಗೆ ವಿಚಾರಗೋಷ್ಠಿಗಳು ನಡೆಯಲಿವೆ. 200ಕ್ಕೂ ಹೆಚ್ಚು ಸಿದ್ಧ ಸಾವಯವ ಮತ್ತು ಸಿರಿಧಾನ್ಯ ಆಹಾರ ಪದಾರ್ಥಗಳ ಪ್ರದರ್ಶನ ನಡೆಯಲಿದೆ ಎಂದು ಬಾಣಸಿಗರು ಈ ವೇಳೆ ಮಾಹಿತಿ ನೀಡಿದರು. 

Advertisement

ಕೃಷಿ ಇಲಾಖೆ ಬೆಂಗಳೂರು ನಗರ ಜಿಲ್ಲೆಯ ಜಂಟಿ ನಿರ್ದೇಶಕ ಜಯಸ್ವಾಮಿ ಮಾತನಾಡಿ, ಸಾವಯವ-ಸಿರಿಧಾನ್ಯ ಮೇಳಗಳಿಗೆ ನಗರದಲ್ಲಿ ವ್ಯಾಪಕ ಪ್ರಚಾರ ಮತ್ತು ಬೆಂಬಲ ಸಿಗುತ್ತಿದೆ. ಕಳೆದ ವರ್ಷ ಬಿಬಿಎಂಪಿ ವ್ಯಾಪ್ತಿಯಲ್ಲಿ 11 ಮೇಳಗಳನ್ನು ಆಯೋಜಿಸಲಾಗಿತ್ತು. 62 ಮಳಿಗೆಗಳು, 8 ಫ‌ುಡ್‌ ಕೋರ್ಟ್‌ಗಳನ್ನು ಸ್ಥಾಪಿಸಲಾಗಿತ್ತು. ಬಳಕೆ ಹೆಚ್ಚಾದರೆ ಬೆಳೆಯುವುದು ಹೆಚ್ಚಾಗುತ್ತದೆ ಎಂಬ ಆಶಯದೊಂದಿಗೆ ಕೆಲಸ ಮಾಡುತ್ತಿದ್ದೇವೆ.

ಇದರಲ್ಲಿ ಸಾರ್ವಜನಿಕರು ಮತ್ತು ರೈತರು ಇಬ್ಬರಿಗೂ ಅನುಕೂಲವಾಗಲಿದೆ. ಕಳೆದ ಬಾರಿ ಏರ್ಪಡಿಸಿದ್ದ ಮೇಳದಲ್ಲಿ 60 ಸಾವಿರ ಜನ ಸೇರಿದ್ದರು. ಈ ಬಾರಿ 1 ಲಕ್ಷ ಜನ ಸೇರುವ ನಿರೀಕ್ಷೆಯಿದೆ ಎಂದರು. ಸಂವಾದದಲ್ಲಿ ಬಾಣಸಿಗರಾದ ಕಾಶಿ ವಿಶ್ವನಾಥ್‌, ವಿಕಾಸ್‌, ರಾಮಯ್ಯ ವಿವಿಯ ಆಹಾರ ಮತ್ತು ಪಾನೀಯ ವಿಭಾಗದ ಮುಖ್ಯಸ್ಥೆ ಪ್ರಿಯಾ ಅರ್ಜುನ್‌, ಬೆಂಗಳೂರು ಕೃಷಿ ವಿವಿ ಪ್ರಾಧ್ಯಾಪಕ ಸುರೇಶ್‌ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next