Advertisement

ಭಕ್ತರ ಸಲುಹಲು ಬಂದಳು ಮಹಾಲಕ್ಷ್ಮೀ 

11:16 AM Feb 20, 2019 | Team Udayavani |

ಖಾನಾಪುರ: ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣದ ಅರಣ್ಯ ಪ್ರದೇಶದಲ್ಲಿ ಭಕ್ತರನ್ನು ಸಲಹುತ್ತಿರುವ ಲಕ್ಷ್ಮೀ ದೇವಿಯ ಜಾತ್ರೆಯನ್ನು 12 ವರ್ಷಗಳ ನಂತರ ಫೆ.20 ರಿಂದ 28ರವರೆಗೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

Advertisement

ತಾಲೂಕು ಹಾಗೂ ಪಟ್ಟಣದ ಸಮಸ್ತ ಭಕ್ತವೃಂದ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಲು ಉತ್ಸಾಹಿತರಾಗಿದ್ದಾರೆ. ಈ ಹಿಂದೆ 2007ರಲ್ಲಿ ಜಾತ್ರೆಯನ್ನು ಆಚರಿಸಲಾಗಿತ್ತು. ಪಟ್ಟಣದ ಮಹಾಲಕ್ಷ್ಮೀ ಮಂದಿರದಲ್ಲಿ ಜಾತ್ರೆಯ ನಿಮಿತ್ತ ಹೊಸ ಮಹಾಲಕ್ಷ್ಮೀ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈಗಾಗಲೆ ಮಂದಿರಕ್ಕೆ ಸುಣ್ಣ-ಬಣ್ಣ ಹಚ್ಚಿ ದೀಪಗಳಿಂದ ಅಲಂಕೃತಗೊಳಿಸಲಾಗಿದೆ.

ಜಾತ್ರೆ ಫೆ. 20 ರಿಂದ ಪಾರಂಭವಾಗಿ 9 ದಿನಗಳ ಕಾಲ ನಿರಂತರವಾಗಿ ನಡೆಯಲಿದೆ. ಮಂಗಳವಾರ ಬೆಳಗ್ಗೆ ಮಣ್ಣಿನಿಂದ ತಯಾರಿಸಿದ ಗ್ರಾಮದೇವಿಯ ಮೂರ್ತಿಯನ್ನು ವಿಧಿ ವಿಧಾನಗಳ ಮೂಲಕ ಪೂಜಿಸಿ ವಿವಾಹ ನೆರವೇರಿಸಿದ ನಂತರ ಲಕ್ಷ್ಮೀದೇವಿಯ ಮೂರ್ತಿಗೆ ಉಡಿ ತುಂಬುವ ಕಾರ್ಯ ನೆರವೇರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೂರ್ತಿ ಮೆರವಣಿಗೆಯನ್ನು ಹೊನ್ನಾಟದ ಮೂಲಕ ಕೈಗೊಳ್ಳಲಾಗುವುದು. ಅನಂತರ ದೇವಿಯ ಮೂರ್ತಿಯನ್ನು ಬಾಜಾರಪೇಟೆಯಲ್ಲಿ ಪ್ರತಿಷ್ಠಾನಗೊಳಿಸಲಾಗುವುದು. 9ದಿನಗಳ ಕಾಲ ದೇವಿ ಅದೇ ಸ್ಥಳದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾಳೆ.

ಪಟ್ಟಣದ ಜಾತ್ರೆಗೆ ತನ್ನದೇ ಆದ ಇತಿಹಾಸವಿದೆ. ಎಲ್ಲ ಪಂಗಡದ ಸಮಸ್ತ ಭಕ್ತರು ಭಕ್ತಿ ಪೂರ್ವಕವಾಗಿ ಜಾತ್ರೆಯನ್ನು ಆಚರಿಸುತ್ತಾರೆ. ತಾಲೂಕಿನಿಂದ ಮಹಾರಾಷ್ಟ್ರ, ಗೋವಾ, ಇತರ ರಾಜ್ಯಗಳಿಗೆ ಉದ್ಯೋಗ ಅರಿಸಿ ಹೋದ ಜನರು ತಂಡೋಪ ತಂಡವಾಗಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ. ಪಟ್ಟಣದಲ್ಲಿರುವ ಎಲ್ಲ ಜನರು ತಮ್ಮ ಮನೆಗಳಿಗೆ ಸುಣ್ಣ ಬಣ್ಣದಿಂದ ಅಲಂಕರಿಸಿ ದೀಪಗಳಿಂದ ಅಲಂಕಾರಗೊಳಿಸಿದ್ದಾರೆ. ಪಟ್ಟಣವು ಜಾತ್ರೆಯ ಸಲುವಾಗಿ ನವ ವಧುವಿನಂತೆ ಶೃಂಗಾರಗೊಂಡಿದೆ. ಪಟ್ಟಣದಲ್ಲಿ ಹೂಸ ಉಡುಗೆ ತೊಡುಗೆಗಳ ಖರೀದಿ ಕೂಡ ಜೋರಾಗಿ ನಡೆದಿದೆ.

ಸಮಸ್ತ ಭಕ್ತ ಮಂಡಳಿ ಈಗಾಗಲೆ ತಮ್ಮ ಸಂಬಂಧಿಕರಿಗೆ ಆಮಂತ್ರಣ ಪತ್ರ ನೀಡಿ ಜಾತ್ರೆಗೆ ಆಮಂತ್ರಿಸಿದ್ದಾರೆ. ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಸಂಬಂಧಿಕರು ಕೂಡ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಜಾತ್ರಾ ಕಮಿಟಿ ಕೂಡ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಫೆ. 28
ರಂದು ಜಾತ್ರೆ ಮುಕ್ತಾಯಗೊಳ್ಳಲಿದೆ. 

Advertisement

12 ವರ್ಷಗಳ ನಂತರ ಖಾನಾಪುರ ಪಟ್ಟಣದ ಮಹಾಲಕ್ಷ್ಮೀ ಜಾತ್ರೆಯನ್ನು ಆಚರಿಸಲಾಗುತ್ತಿದೆ. ಜಾತ್ರೆ ಆಚರಣೆಯಿಂದ ನಮ್ಮ ಸಾಂಸ್ಕೃತಿಯ ಪರಂಪರೆ ಸಂರಕ್ಷಣೆಯಾಗುತ್ತದೆ. 
ವಿಠ್ಠಲ್‌ ಹಲಗೆಕರ ಸಂಸ್ಥಾಪಕರು
ಮಹಾಲಕ್ಷ್ಮೀ ಗ್ರೂಪ್‌ ತೋಪಿನಕಟ್ಟಿ ಬಿಜೆಪಿ ಮುಂಖಡರು.

ಮಹಾಲಕ್ಷ್ಮೀ ದೇವಿಯು ಎಲ್ಲ ಸದ್ಭಕ್ತರ ಇಚ್ಛೆಗಳನ್ನು ಪೂರೈಸಲಿ.
ಶರದ್‌ ಕೇಶ ಕಾಮತ ಸಂಸ್ಥಾಪಕರು,
ಕೇಶ ಕಾಮತ ಫೌಂಡೇಶನ್‌ ನರೇಂದ್ರ ಮೋದಿ ವಿಚಾರ ವೇದಿಕೆ.

ತಿಮ್ಮಪ್ಪ ಗಿರಿಯಪ್ಪನವರ

Advertisement

Udayavani is now on Telegram. Click here to join our channel and stay updated with the latest news.

Next