ಕಲಬುರಗಿ: ಮಾಜಿ ಸಚಿವ, ಶಾಸಕ ಡಾ| ಖಮರುಲ್ ಇಸ್ಲಾಂ ಅವರ 68ನೇ ಜನ್ಮ ದಿನವನ್ನು ರಕ್ತದಾನ ಶಿಬಿರ, ಸದ್ಭಾವನಾ ಪ್ರಶಸ್ತಿ ವಿತರಣೆ ಸೇರಿದಂತೆ ಇತರ ಸಾಮಾಜಿಕ ಕಾರ್ಯಚಟುವಟಿಕೆಗಳೊಂದಿಗೆ ಶುಕ್ರವಾರ ನಗರದ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಚರಿಸಲಾಯಿತು.
ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹ್ವಾಸಾಮಿಗಳು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಶಾಸಕರ ಅಭಿಮಾನಿಗಳು, ಕಾರ್ಯಕರ್ತರು ರಕ್ತದಾನ ಮಾಡಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಶರಣಬಸವಪ್ಪ ಅಪ್ಪ ಕೈಪಿಡಿ ಬಿಡುಗಡೆಗೊಳಿಸಿದರು.
ಖಾಜಾ ಬಂದೇನವಾಜ್ ದರ್ಗಾದ ಡಾ| ಹಜರತ್ ಸೈಯದ್ ಶಾಹ ಗೇಸುದಾಸ್ ಖುಸ್ರೋ ಹುಸೇನಿ ಸಾಬ್ ಪ್ರತಿಭಾ ಪುರಸ್ಕಾರ ವಿತರಿಸಿದರು. 2017ರ ಸಾಲಿನ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು. ಶ್ರೀನಿವಾಸ ಸರಡಗಿಯ ರೇವಣಸಿದ್ದೇಶ್ವರ ಶಿವಾಚಾರ್ಯರು, ಸಂಘಾನಂದ್ ಭಂತೇಜಿ, ಬಿಶಪ್ ರಾಬರ್ಟ್ ಮೈಖೆಲ್ ಮಿರಾಂಡ್, ಸ್ಟಾನಿ ಗೋಯಿಜ್, ಬ್ರಹ್ಮಕುಮಾರಿ ಬಿ.ಕೆ. ವಿಜಯಾ, ಸರ್ದಾರ್ ದೀಪಸಿಂಗ್, ಅಮೃತಸಿಂಗ್ ಹಾಗೂ ವಿವಿಧ ಧರ್ಮಗಳ ಗುರುಗಳು ಸಾನ್ನಿಧ್ಯ ವಹಿಸಿದ್ದರು.
ಸಾಹಿತಿ ಡಾ| ಸ್ವಾಮಿರಾವ್ ಕುಲಕರ್ಣಿ, ದೇವೇಂದ್ರಪ್ಪ ಬಡಿಗೇರ, ಲಕ್ಷಣ ದಸ್ತಿ, ಪ್ರಮೀಳಾ ಪಾಟೀಲ, ಎನ್.ಎಸ್. ಹಿರೇಮಠ, ಎಲ್.ಬಿ.ಕೆ. ಅಲ್ದಾಳ್, ಡಾ| ವಿಠಲ್ ದೊಡ್ಡಮನಿ, ಬಾಬುರಾವ್ ಜಹಾಗೀರದಾರ್, ಪತ್ರಕರ್ತ ಶಿವರಾಮ ಅಸುಂಡಿ ಹಾಗೂ ವಿರೋನಿಕಾ ಸಂಸ್ಥೆ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರಿಗೆ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯರಾದ ಮಾರುತಿರಾವ್ ಡಿ. ಮಾಲೆ, ಅಲ್ಲಮಪ್ರಭು ಪಾಟೀಲ, ಮಹಾಪೌರ ಸೆ„ಯದ್ ಅಹ್ಮದ್, ಉಪ ಮಹಾಪೌರರಾದ ಶರಣಮ್ಮ ಬೆಣ್ಣೂರ್, ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನೀಲಕಂಠರಾವ್ ಮೂಲಗೆ, ಪಾಲಿಕೆ ಸದಸ್ಯ ಶರಣಕುಮಾರ ಮೋದಿ, ಮಲ್ಲಿಕಾರ್ಜುನ ಓಕಳಿ, ಪ್ರಮೋದ ತಿವಾರಿ, ರವಿ ರಾಠೊಡ್, ಜಗದೀಶ ವಳಕೇರಿ ಪಾಲ್ಗೊಂಡಿದ್ದರು.
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಮ್ಮದ ಅಸಗರ ಚುಲಬುಲ್ ಸ್ವಾಗತಿಸಿದರು. ಮಾಜಿಮಹಾಪೌರ ಭೀಮರೆಡ್ಡಿ ಪಾಟೀಲ ಕುರಕುಂದಾ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿದರು. ಜನ್ಮದಿನದ ನಿಮಿತ್ತ ಖಮರುಲ್ ಇಸ್ಲಾಂ ಅವರ ಅಭಿಮಾನಿಗಳು ದ್ವಿಚಕ್ರವಾಹನಗಳ ರ್ಯಾಲಿಯ ಮೂಲಕ ಎಸ್.ಎಂ. ಪಂಡಿತ್ ರಂಗಮಂದಿರಕ್ಕೆ ಆಗಮಿಸಿದರು.