Advertisement
ನಗರಕ್ಕೆ ಭೇಟಿ ನೀಡಿದ ಅವರು, ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಹಲವು ರೋಗಿಗಳನ್ನು ಭೇಟಿ ಮಾಡಿ ಮಾತನಾಡಿದರು. ಸರ್ಕಾರಿ ಆಸ್ಪತ್ರೆಗಳು ಎಲ್ಲಾ ವರ್ಗದ ಜನರಿಗೂ ಮೀಸಲಾಗಿದೆ. ಕೆಲಸ ನಿರ್ವಹಿಸುವ ಸಿಬ್ಬಂದಿ ಸೇವಾ ಮನೋಭಾವ ತೋರಬೇಕು. ಸಂಬಳ ಬರುತ್ತೆ ಎಂಬ ಉದಾಸೀನ ಮಾಡಬಾರದು. ವೈದ್ಯೋ ನಾರಾಯಣ ಹರಿ ಎಂಬಂತೆ ಕೆಲಸ ನಿರ್ವಹಿಸಬೇಕು. ವಿಡಿಯೋ ನೋಡಿ ಮನ ಕಲಕಿತು. ಸರ್ಕಾರಿ ಆಸ್ಪತ್ರೆ ಎಂದರೆ ಜನರ ವಿಶ್ವಾಸ ಇಲ್ಲ. ಜೊತೆಗೆ ವೈದ್ಯರ ಕೊರತೆ ಇದೆ. 2016ರಿಂದ ಫಿಸಿಶಿಯನ್ ಇಲ್ಲ ಎಂಬ ವರದಿ ನಿಜಕ್ಕೂ ಆತಂಕಕಾರಿ ಎಂದು ನಾಗಲಕ್ಷ್ಮೀಬಾಯಿ ಹೇಳಿದರು.
ಸಮೀನಾಗೆ ಸಾಧ್ಯವಿರುವ ಎಲ್ಲಾ ಚಿಕಿತ್ಸೆಗಳನ್ನು ನೀಡಲಾಗಿತ್ತು. ಅವರು ಆಸ್ಪತ್ರೆಗೆ ಬರುವ ಮೊದಲೇ ಮಗು ಚಲನವಲನ ಇರಲಿಲ್ಲ. ಅದು ತನಿಖೆಯಲ್ಲಿ ದೃಢಪಟ್ಟಿತ್ತು. ಮತ್ತಷ್ಟು ದಾಖಲೆಗಾಗಿ ಅವರಿಗೆ ಸ್ಕಾನ್ ಮಾಡಿಸುವಂತೆ ತಿಳಿಸಲಾಯಿತು. ಆದರೆ, ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನ್ ಮಾಡಿಸದೆ, ಖಾಸಗಿ ಯಲ್ಲಿ ಮಾಡಿಸಿಕೊಂಡು ಬಂದರು. ಆಸ್ಪತ್ರೆಗೆ ಬರುವ ಸಮಯದಲ್ಲಿ ನಾನು ಶಸ್ತ್ರಚಿಕಿತ್ಸೆಯಲ್ಲಿ ತೊಡಗಿದ್ದೆ. ಅವರು ಸ್ಕ್ಯಾನ್ ಪ್ರತಿಯನ್ನು ಸಿಬ್ಬಂದಿಗೂ ತೋರಿಸಲಿಲ್ಲ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ವರದಿಗಾರ ಪ್ರೇಂಕುಮಾರ್ ಹೇಳಿದಂತೆ ನಟನೆ ಮಾಡಿ, ವಿಡಿಯೋ ಮಾಡಲಾಯಿತು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಮುಂದೆ ಆಸ್ಪತ್ರೆಯ ಸಿಬ್ಬಂದಿ ವಿವರಿಸಿ ದರು.ಈ ಘಟನೆ ಆಸ್ಪತ್ರೆಯ ಸಿಸಿ ಕ್ಯಾಮರಾ ದಲ್ಲಿ ದಾಖಲಾಗಿದೆ. ಅದನ್ನು ಪರಿಶೀಲಿಸಿದರೆ ಎಲ್ಲವೂ ತಿಳಿಯುತ್ತದೆ. ಸಮೀನಾ ಜೊತೆ ಅವರು ಕುಟುಂಬದವರು ಪಕ್ಕದಲ್ಲಿಯೇ ಇದ್ದರೂ, ಅವರನ್ನು ತೋರಿಸದೆ, ಆಕೆಯೊಬ್ಬ ರನ್ನೇ ನೆಲದ ಮೇಲೆ ಕುಳ್ಳಿರಿಸಿ ಹೊರಳಾಡು ವಂತೆ ಮಾಡಿದ್ದು, ವೈದ್ಯಕೀಯ ಸಿಬ್ಬಂದಿಯನ್ನು ಬಲಿಪಶು ಮಾಡುವ ಹುನ್ನಾರ ಎಂದು ಸಿಬ್ಬಂದಿ ಅಳಲು ತೋಡಿಕೊಂಡರು.
Related Articles
ಕೆಜಿಎಫ್: ನಗರದ ಮಸ್ಕಂನ ಬಾಲಮಂದಿರಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಭೇಟಿ ನೀಡಿದರು. ಬಾಲಮಂದಿರದ ಅಧೀಕ್ಷಕರು ಮಕ್ಕಳಿಗೆ ಹೊಡೆದರು ಎಂಬ ಆರೋ ಪದ ಹಿನ್ನೆಲೆಯಲ್ಲಿ 27 ಮಕ್ಕಳನ್ನು ವಿಚಾರಣೆ ನಡೆಸಿ ದರು. ಆದರೆ, ಮಕ್ಕಳು ಅಧೀಕ್ಷಕರ ಮೇಲೆ ಸಕಾರಾ ತ್ಮಕವಾಗಿ ಹೇಳಿದರು. ಬಾಲಮಂದಿರದ ಸಿಬ್ಬಂದಿ ಸಚಿನ್ ಎಂಬಾತ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗ ಳಿಗೆ ಹರಿಯಬಿಟ್ಟಿದ್ದಾರೆ ಎಂದು ಸಿಬ್ಬಂದಿ ತಿಳಿಸಿದರು. ಆತನಿಗೆ ನೋಟಿಸ್ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸೌಮ್ಯ ಹೇಳಿದರು. ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣನಾದ ಸಚಿನ್ ಎಂಬ ಸಿಬ್ಬಂದಿಯ ವಿವರ ನನಗೆ ಕಳಿಸಿಕೊಡಬೇಕು. ಆತನ ಮೇಲೆ ಕ್ರಮ ಕೈಗೊಂಡು ವರ್ಗಾವಣೆಗೆ ಶಿಫಾರಸುಮಾಡಲಾಗುವುದೆಂದು ಅಧ್ಯಕ್ಷೆ ನಾಗಲಕ್ಷ್ಮೀ ಹೇಳಿದರು.
Advertisement