ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ “ಕೆಜಿಎಫ್-2′ ಗುರುವಾರ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಸುಮಾರು ಹತ್ತು ಸಾವಿರಕ್ಕೂ ಅಧಿಕ ಸ್ಕ್ರೀನ್ ಞಗಳಲ್ಲಿ ತೆರೆಕಂಡ “ಕೆಜಿಎಫ್-2′ ಮೊದಲ ದಿನವೇ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಇನ್ನು “ಕೆಜಿಎಫ್-2′ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ, ಚಿತ್ರರಂಗದ ಮಂದಿ ಮತ್ತು ಸಿನಿಪ್ರಿಯರ ಚಿತ್ತ “ಕೆಜಿಎಫ್-2′ ಸಿನಿಮಾದ ಮೊದಲ ದಿನದ ಗಳಿಕೆಯ ಕಡೆಗೆ ನೆಟ್ಟಿತ್ತು. ಕನ್ನಡದಲ್ಲಿ ಮೊದಲ ಬಾರಿಗೆ ದಾಖಲೆಯ ಪ್ರಮಾಣದಲ್ಲಿ “ಕೆಜಿಎಫ್-2′ ಬಿಡುಗಡೆಯಾಗಿದ್ದರಿಂ¨ ಅದರ ಮೊದಲ ಹಾಗೂ ನಂತರ ದಿನದ ಗಳಿಕೆ ಎಷ್ಟಿರಬಹುದು ಎಂಬ ಕುತೂಹಲ ಸಹಜವಾಗಿಯೇ ಚಿತ್ರರಂಗದ ಮೇಲಿತ್ತು. ಈಗ ಅದೆಲ್ಲ ಕುತೂಹಕ್ಕೂ ಚಿತ್ರ ನಿರ್ಮಾಣ ಸಂಸ್ಥೆಯ ಕಡೆಯಿಂದಲೇ ಅಧಿಕೃತ ಉತ್ತರ ಸಿಕ್ಕಿದೆ.
ಹೌದು, “ಕೆಜಿಎಫ್-2′ ನಿರ್ಮಾಣ ಸಂಸ್ಥೆ “ಹೊಂಬಾಳೆ ಫಿಲಂಸ್’ ಸೋಶಿಯಲ್ ಮೀಡಿಯಾ ಮೂಲಕ ಫಸ್ಟ್ ಡೇ ಕಲೆಕ್ಷನ್ ರಿಪೋರ್ಟ್ ಬಗ್ಗೆ ಮಾಹಿತಿ ನೀಡಿದೆ. “ಹೊಂಬಾಳೆ ಫಿಲಂಸ್’ ಹಂಚಿಕೊಂಡಿರುವ ಮಾಹಿತಿಯಂತೆ, “ಕೆಜಿಎಫ್-2′ ಸಿನಿಮಾದ ಮೊದಲೆರಡು ದಿನ ಭಾರತದಲ್ಲಿ 240 ಞಕೋಟಿ ರೂಪಾಯಿ ಆಗಿದೆ. ಇದು ಎರಡು ದಿನದ ಕಲೆಕ್ಷನ್ ಆದರೆ, ಆ ನಂತರ ಶನಿವಾರವೂ “ಕೆಜಿಎಫ್-2′ ಓಟ ಭರ್ಜರಿಯಾಗಿಯೇ ಸಾಗಿದೆ. ಪರಭಾಷೆಯ ಚಿತ್ರರಂಗಳೆಲ್ಲವೂ ಈಗ ಸ್ಯಾಂಡಲ್‌ವುಡ್‌ನತ್ತ ದೃಷ್ಟಿ ನೆಟ್ಟಿವೆ.
ಬಾಲಿವುಡ್‌ನಲ್ಲೂ “ಕೆಜಿಎಫ್-2′ ಮೇಲುಗೈ: ಇನ್ನೂ ಅಚ್ಚರಿಯ ಸಂಗತಿ ಎಂದರೆ, ಕರ್ನಾಟಕಕ್ಕಿಂತಲೂ ಬಾಲಿವುಡ್‌ನಲ್ಲೇ “ಕೆಜಿಎಫ್-2′ ಸಿನಿಮಾ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ ಎಂಬುದು ಮತ್ತೂಂದು ಅಚ್ಚರಿಯ ಸಂಗತಿ. ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಹಂಚಿಕೊಂಡಿರುವ ಮಾಹಿತಿಯಂತೆ, ಈ ಹಿಂದೆ ಬಾಲಿವುಡ್‌ನಲ್ಲಿ ರಿಲೀಸ್ ಆಗಿದ್ದ ಹೃತಿಕ್ ರೋಷನ್ ನಟನೆಯ “ವಾರ್’ ಚಿತ್ರ ಮೊದಲ ದಿನ 51.60 ಕೋಟಿ ಗಳಿಸಿ ದಾಖಲೆ ಬ್ರೇಕ್ ಮಾಡಿ ಮೊದಲ ಸ್ಥಾನದಲ್ಲಿತ್ತು.
ಅದಾದ ನಂತರ ಅಮೀರ್ ಖಾನ್ ನಟನೆಯ “ಥಗ್ಸ್ ಆಫ್ ಹಿಂದೂಸ್ತಾನ್’ ಸಿನಿಮಾ 50.75 ಕೋಟಿ ಗಳಿಕೆಯ ಮೂಲಕ 2ನೇ ಸ್ಥಾನದಲ್ಲಿತ್ತು. ಬಳಿಕ ಸಲ್ಮಾನ್ ಖಾನ್ ಅಭಿನಯದ “ಭಾರತ್’ ಸಿನಿಮಾ 49.80 ಕೋಟಿ ಗಳಿಕೆಯ ಮೂಲಕ 3 ನೇ ಸ್ಥಾನ ಪಡೆದಿತ್ತು. ಆ ನಂತರದ ಸ್ಥಾನದಲ್ಲಿ “ಬಾಹುಬಲಿ’ ಹಿಂದಿ ವರ್ಷನ್ 4ನೇ ಸ್ಥಾನದಲ್ಲಿತ್ತು. ಆದರೆ ಇದೀಗ “ಕೆಜಿಎಫ್-2′ ಮೊದಲ ದಿನವೇ 53.95 ಕೋಟಿ ಗಳಿಕೆ ಮಾಡುವ ಮೂಲಕ ಎಲ್ಲ ದಾಖಲೆಗಳನ್ನು ಬದಿಗೊತ್ತಿ ಮೊದಲ ಸ್ಥಾನ ಪಡೆದುಕೊಂಡಿದೆ. ಇನ್ನು ಎರಡನೇ ದಿನವಾದ ಶುಕ್ರವಾರವೂ “ಕೆಜಿಎಫ್-2′ ಬಾಲಿವುಡ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು, 46.79 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಬಾಲಿವುಡ್ ವೊಂದರಲ್ಲೇ ಎರಡೇ ದಿನಕ್ಕೆ ಚಿತ್ರ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.