Advertisement
5 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್
Related Articles
Advertisement
ಸದ್ಯಕ್ಕಂತೂ ಲಾಭ ಬಂದಿಲ್ಲ; ಬಜೆಟ್ ಗುಟ್ಟು ಬಿಟ್ಟುಕೊಡುವುದಿಲ್ಲ…
“ಕೆಜಿಎಫ್-2′ ಸಿನಿಮಾಕ್ಕೆ ಡಿಮ್ಯಾಂಡ್ ಹೆಚ್ಚಾಗಿರುವುದರಿಂದ, ಬಿಝಿನೆಸ್ ಚೆನ್ನಾಗಿ ಆಗಿರಬಹುದು, ಚಿತ್ರತಂಡ ಲಾಭದಲ್ಲಿರಬಹುದು. “ಕೆಜಿಎಫ್-2′ ಬಿಗ್ ಬಜೆಟ್ ಸಿನಿಮಾ ಎಂದು ಹೇಳಲಾಗು ತ್ತಿರುವುದರಿಂದ ಅದರ ಬಜೆಟ್ ಎಷ್ಟಿರಬಹುದು ಎಂಬುದು ಸಹಜವಾಗಿಯೇ ಸಿನಿಪ್ರಿಯರ ಕುತೂಹಲ. ಇದೇ ಪ್ರಶ್ನೆಯನ್ನು ನಿರ್ಮಾಪಕ ವಿಜಯ್ ಕಿರಗಂದೂರು ಅವರ ಮುಂದಿಟ್ಟರೆ ಅವರಿಂದ ಬರುವ ಉತ್ತರ ಹೀಗಿದೆ. “ಸಿನಿಮಾ ಬಿಗ್ ಬಜೆಟ್‌ನಲ್ಲಿ ನಿರ್ಮಿಸಿರುವುದೇನೋ ನಿಜ. ಸಿನಿಮಾದ ಸಬೆjಕ್ಟ್ ಏನು ಡಿಮ್ಯಾಂಡ್ ಮಾಡಿತ್ತೋ, ಅದೆಲ್ಲವನ್ನು ಕೊಟ್ಟು ಸಿನಿಮಾ ಮಾಡಿದ್ದೇವೆ. ಇದುವರೆಗೂ ನಮ್ಮ ಯಾವುದೇ ಸಿನಿಮಾಗಳ ಬಜೆಟ್ ಬಹಿರಂಗಪಡಿಸಿಲ್ಲ. ಹಾಗಾಗಿ ಬಜೆಟ್ ಹೇಳುವುದಕ್ಕೆ ಇಷ್ಟವಿಲ್ಲ. ಇನ್ನು ರಿಲೀಸ್‌ಗೂ ಮುಂಚೆಯೇ ಸಿನಿಮಾ ಲಾಭ ಮಾಡಿಕೊಟ್ಟಿದೆ ಎಂದು ಈಗಲೇ ಹೇಳುವಂತಿಲ್ಲ. ಸಿನಿಮಾವನ್ನು ನಾವು ಮಾರಾಟ ಮಾಡಿಲ್ಲ. ಹೀಗಾಗಿ ಲಾಭದ ಬಗ್ಗೆ ಈಗಲೇ ಏನೂ ಹೇಳುವಂತಿಲ್ಲ’ ಎನ್ನುವುದು ವಿಜಯ್ ಕಿರಗಂದೂರು ಮಾತು
ಪೈರಸಿ ತಡೆಯುವುದು ಜನರ ಕೈಯಲ್ಲಿದೆ
ಈಗಾಗಲೇ ಬಿಡುಗಡೆಯಾಗಿರುವ ಬಿಗ್‌ಸ್ಟಾರ್ ಸಿನಿಮಾಗಳಿಗೆ ಎದುರಾಗಿದ್ದ ಪೈರಸಿ ಕಾಟ “ಕೆಜಿಎಫ್-2’ಗೂ ಇದೆ. ಯಾವುದೇ ದೊಡ್ಡ ಸಿನಿಮಾಕ್ಕಾದರೂ ಪೈರಸಿ ದೊಡ್ಡ ಶತ್ರು. ಅಂತೆಯೇ “ಕೆಜಿಎಫ್-2′ ಸಹ ಈ ಸಮಸ್ಯೆಯಿಂದ ಹೊರತಲ್ಲ. ಪೈರಸಿ ತಡೆಯಲು ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಯಶ್ ಉತ್ತರ ಹೀಗಿದೆ. “ನಾವು ಚಾಪೆ ಕೆಳಗೆ ತೂರಿದರೆ, ಅವರು ರಂಗೋಲಿ ಕೆಳಗೆ ತೂರುತ್ತಾರೆ. ಹಾಗಾಗಿ, ಜನ ತೀರ್ಮಾನಿಸಬೇಕು. ಚರ್ಮ ಖರೀದಿಸುವುದನ್ನು ನಿಲ್ಲಿಸಿದರೆ, ಪ್ರಾಣಿಗಳನ್ನು ಕೊಲ್ಲುವುದು ಸಹ ತಪ್ಪುತ್ತದೆ. ಹಾಗೆಯೇ, ಪೈರಸಿ ನೋಡಬಾರದು ಎಂದು ಜನ ತೀರ್ಮಾನಿಸಿದರೆ, ಪೈರಸಿ ಸಹ ನಿಲ್ಲುತ್ತದೆ. ಜನ ಪೈರಸಿ ಸಿನಿಮಾವನ್ನೇ ನೋಡಬೇಕು ಎಂದು ತೀರ್ಮಾನಿಸಿದರೆ, ಅದು ಅವರ ನಷ್ಟ. ಥಿಯೇಟರ್‌ಗಳಲ್ಲಿ ಸಿನಿಮಾ ಚೆನ್ನಾಗಿ ಕಾಣಿಸಬೇಕು, ಕೇಳಿಸಬೇಕು ಎಂದು ಬಹಳ ಕೆಲಸ ಮಾಡಿರುತ್ತೀವಿ. ಹಾಗಾಗಿ, ಜನ ಯಾವುದು ಒಳ್ಳೆಯದು ಅನ್ನೋದನ್ನ ತೀರ್ಮಾನಿಸಬೇಕು’ ಎನ್ನುತ್ತಾರೆ.
“ಕೆಜಿಎಫ್’ ಸರಣಿ ಮತ್ತೆ ಮುಂದುವರೆಯುತ್ತಾ?
ಇನ್ನು “ಕೆಜಿಎಫ್’ ಅನ್ನೋ ಹೆಸರಿಗೆ ತನ್ನದೇ ಆದ ಬ್ರ್ಯಾಂಡ್ ವ್ಯಾಲ್ಯೂ ಇರೋದ್ರಿಂದ್ರ, “ಕೆಜಿಎಫ್-2′ ಬಳಿಕ ಮತ್ತೆ ಸರಣಿ ಮುಂದುವರೆಯಲಿದೆಯಾ ಎಂಬ ಪ್ರಶ್ನೆ ಅನೇಕರಲ್ಲಿದೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಪ್ರಶಾಂತ್ ನೀಲ್, “”ಅವೆಂಜರ್’ ತರಹವೇ “ಕೆಜಿಎಫ್’ ಸರಣಿಗೂ ತನ್ನದೇ ಆದ ಬ್ರ್ಯಾಂಡ್ ವ್ಯಾಲ್ಯೂ ಇದೆ ಅನ್ನೋದೇನೋ ನಿಜ. ಆದರೆ, “ಕೆಜಿಎಫ್-2′ ನಂತರ “ಕೆಜಿಎಫ್-3′ ಮಾಡುವ ಯೋಚನೆ ಏನಾದರೂ ಇದೆಯಾ ಅನ್ನೋದನ್ನ ಏ. 14ರ ನಂತರ ನೋಡೋಣ’ ಎನ್ನುತ್ತಾರೆ ನಿರ್ದೇಶಕ ಪ್ರಶಾಂತ್ ನೀಲ…. “ಕೆಜಿಎಫ್’ ಸಿನಿಮಾವನ್ನು ಮುಂದುವರೆಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳುವುದು ಕಷ್ಟ. ಆದರೆ, ಸದ್ಯಕ್ಕೆ ಚಿತ್ರವನ್ನು ಮುಂದುವರೆಸುವ ಯೋಚನೆ ಇಲ್ಲ. “ಕೆಜಿಎಫ್-2′ ಯಶಸ್ವಿಯಾದರೆ ಮುಂದೆ ನೋಡೋಣ’ ಎನ್ನುವುದು ಪ್ರಶಾಂತ್ ನೀಲ್ ಮಾತು