Advertisement

“ಕೆಜಿಎಫ್-2′ಫ‌ಸ್ಟ್‌ಲುಕ್‌, ಟೀಸರ್‌

10:23 AM Dec 23, 2019 | Lakshmi GovindaRaj |

ಯಶ್‌ ಅಭಿನಯದ “ಕೆಜಿಎಫ್-2′ ಚಿತ್ರದ ಫ‌ಸ್ಟ್‌ಲುಕ್‌, ಟೀಸರ್‌ ಬಿಡುಗಡೆಯಾಗಿದೆ. ಈ ಮೂಲಕ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳು ಖುಷಿಯಾಗಿದ್ದಾರೆ. ಬೃಹತ್‌ ಗಾತ್ರದ ಕಂಬವೊಂದನ್ನು ಯಶ್‌ ನೇತೃತ್ವದಲ್ಲಿ ಒಂದಷ್ಟು ಮಂದಿ ಕಾರ್ಮಿಕರು ಎಳೆದು ನಿಲ್ಲಿಸುವ ಪ್ರಯತ್ನದಲ್ಲಿರುವ ಫೋಟೋವೊಂದನ್ನು ಚಿತ್ರತಂಡ ಬಿಟ್ಟಿದೆ.

Advertisement

ಜೊತೆಗೆ “ರೀಬಿಲ್ಡಿಂಗ್‌ ಆನ್‌ ಎಂಪೈರ್‌’ ಎಂಬ ಕ್ಯಾಪ್ಶನ್‌ ಕೂಡಾ ನೀಡಲಾಗಿದೆ. ಅಲ್ಲಿಗೆ ನೀವು ನರಾಚಿ ಸಾಮ್ರಾಜ್ಯದ ಮರು ನಿರ್ಮಾಣದಲ್ಲಿ ಯಶ್‌ ತೊಡಗಿದ್ದಾರೆಂದು ಅರ್ಥೈಸಬಹುದು. ಟೀಸರ್‌ ಸಾಕಷ್ಟು ಕುತೂಹಲ ಕೆರಳಿಸಿದೆ. ಪ್ರಶಾಂತ್‌ ನೀಲ್‌ ನಿರ್ದೇಶನದ ಈ ಚಿತ್ರದಲ್ಲಿ ಯಶ್‌, ಸಂಜಯ್‌ ದತ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಹೊಂಬಾಳೆ ಫಿಲಂಸ್‌ನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next