Advertisement

ಲಾಕ್ ಡೌನ್ ನಡುವೆಯೂ ರೌಡಿಶೀಟರ್ ಒಬ್ಬನ ಬರ್ಬರ ಕೊಲೆ

01:07 PM May 03, 2020 | keerthan |

ಬೆಂಗಳೂರು: ಲಾಕ್ ಡೌನ್ ನಡುವೆಯೂ ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್ ಒಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಶನಿವಾರ ರಾತ್ರಿ ಕೆ.ಜಿ.ಹಳ್ಳಿಯಲ್ಲಿ ನಡೆದಿದೆ.

Advertisement

ಬುಜ್ಜು (30) ಕೊಲೆಯಾದ ರೌಡಿಶೀಟರ್. ಕೆ.ಜಿ.ಹಳ್ಳಿಯ ನ್ಯೂ ಬಾಗಲೂರು ಲೇಔಟ್ ನ ಬುಜ್ಜು ಮನೆ ಬಳಿಯೇ ಮಾರಕಾಸ್ತ್ರಗಳಿಂದ ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದಾರೆ.

ಹತ್ಯೆಯಾಗಿದ್ದ ರೌಡಿಶೀಟರ್ ಬುಜ್ಜು, ಡ್ಯಾನಿಯಲ್ ಸಂಬಂಧಿ ಸ್ಟಾಲಿನ್ ಕೊಲೆಯಲ್ಲಿ ಭಾಗಿಯಾಗಿದ್ದ. ಈ ಮಧ್ಯೆ ಸ್ಟಾಲಿನ್ ಬೆಂಬಲಿಗರು ಬುಜ್ಜು ಸಹೋದರ ವಿನೋದ್ ನನ್ನು ಕೊಲೆ ಮಾಡಿದ್ದರು. ಅನಂತರ ಇಬ್ಬರು ಸಂಧಾನ ಮಾಡಿಕೊಂಡಿದ್ದರು.‌ ಅದರ ಬೆನ್ನಲ್ಲೇ ಬುಜ್ಜು ಕೊಲೆಯಾಗಿದೆ ಎಂದು ವರದಿಯಾಗಿದೆ. ಕೆ.ಜಿ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next