Advertisement

ಕೆಎಫ್‌ಡಿ ವಿಶೇಷ ತನಿಖೆಗೆ ಒತ್ತಾಯ

10:50 AM Jan 28, 2019 | |

ಸಾಗರ: ತಾಲೂಕಿನ ಅರಳಗೋಡು ಹಾಗೂ ಇನ್ನೂ ಹಲವು ಪ್ರದೇಶಗಳಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು, ಈ ರೋಗ ವಿಪರೀತ ಪ್ರಮಾಣದಲ್ಲಿ ಹರಡಿರುವ ಬಗ್ಗೆ ವಿಶೇಷ ಕಾರಣ ಏನು ಎಂಬ ಬಗ್ಗೆ ವಿಶೇಷ ತನಿಖೆ ನಡೆಸಬೇಕು ಎಂದು ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ. ತಮ್ಮಣ್ಣ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

Advertisement

ವಿಶ್ವ ಆರೋಗ್ಯ ಸಂಸ್ಥೆಯ ಡ್ರಗ್ಸ್‌ ಮತ್ತು ಕ್ರೈಂ ವಿಭಾಗ ಕೆಎಫ್‌ಡಿ ವೈರಾಣುವನ್ನು ಜೈವಿಕ ಅಸ್ತ್ರವಾಗಿ ಬಳಸುವ ಏಜೆಂಟ್ ಎಂದು ಅಲರ್ಟ್‌ ಎಂದು ಘೋಷಿಸಿದ್ದು 2009ರಲ್ಲಿ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಕೈಪಿಡಿಯಲ್ಲೂ ಇದರ ಎಚ್ಚರಿಕೆಯನ್ನು ನೀಡಿದೆ. ಆದರೆ ನಮ್ಮ ಸರ್ಕಾರಗಳು ಇದಕ್ಕೆ ಗಮನ ನೀಡಿದಂತೆ ಕಂಡುಬರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಕೆಎಪ್‌ಡಿ ಹಿಂದೆಂದೂ ಕಾಣದ ರೀತಿಯಲ್ಲಿ ಹರಡುತ್ತಿದ್ದು ಇದು ಪ್ರಕೃತಿ ಸಹಜವೋ, ಕೃತಕವೋ ಎಂಬುದನ್ನು ಸರ್ಕಾರ ಖಚಿತಪಡಿಸಿಕೊಳ್ಳಲು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಕೆಎಫ್‌ಡಿ ಆರೋಗ್ಯದ ವಿಷಯವಲ್ಲದೆ ದೇಶದ ರಕ್ಷಣಾ ವಿಷಯವೂ ಆಗಿರುವುದರಿಂದ ಜೈವಿಕ ಅಸ್ತ್ರ ಆಗಿರುವ ಕುರಿತು ನಿರ್ಲಕ್ಷ್ಯ ಸಲ್ಲ. ತಾಲೂಕಿನ ಭಾರಂಗಿ ಹೋಬಳಿಯ ಅರಳಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಹರಡಿರುವ ಮಂಗನ ಕಾಯಿಲೆಗೆ ಅಗತ್ಯ ಚಿಕಿತ್ಸೆ ಮತ್ತು ರೋಗ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮಂಗನ ಕಾಯಿಲೆಯಿಂದ ಮೃತಪಟ್ಟವರ ಅವಲಂಬಿತರಿಗೆ ಕೂಡಲೇ 10 ಲಕ್ಷ ರೂ. ಪರಿಹಾರ ನೀಡಬೇಕು. ಅರಣ್ಯದಲ್ಲಿ ಸತ್ತ ಮಂಗಗಳನ್ನು ಕೂಡಲೇ ಪತ್ತೆ ಹಚ್ಚಿ ರೋಗ ಹರಡದಂತೆ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಕ್ಷಿಪ್ರ ಕಾರ್ಯಾಚರಣೆಯ ಮಾದರಿ ಕೂಂಬಿಂಗ್‌ ಪಡೆ ರಚಿಸಬೇಕು. ಮಂಗನ ಕಾಯಿಲೆ ಸಂಪೂರ್ಣ ಗುಣಮುಖವಾಗುವವರೆಗೂ ಅರಲಗೋಡು ಆರೋಗ್ಯ ಕೇಂದ್ರದಲ್ಲಿ ವಿಶೇಷ ಸೇವಾ ವ್ಯವಸ್ಥೆಯನ್ನು ವಿಸ್ತರಣೆ ಮಾಡಬೇಕು ಎಂದು ಅರಳಗೋಡು ಭಾಗದ ತಾಪಂ ಮಾಜಿ ಅಧ್ಯಕ್ಷ ಬಿ.ಸಿ. ಲಕ್ಷ್ಮೀನಾರಾಯಣ ಭಟ್ ಬಣ್ಣೂಮನೆ, ಗ್ರಾಪಂ ಸದಸ್ಯ ಚಂದ್ರರಾಜು ಕೆ.ಎಸ್‌., ರವಿಕುಮಾರ್‌ ಜೈನ್‌ ಇತರರು ಮನವಿ ಸಲ್ಲಿಸಿದರು. ಶಾಸಕ ಹಾಲಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ತಾಪಂ ಅಧ್ಯಕ್ಷ ಬಿ.ಎಚ್. ಮಲ್ಲಿಕಾರ್ಜುನ ಹಕ್ರೆ, ಸದಸ್ಯೆ ಪ್ರಭಾವತಿ ಚಂದ್ರಕಾಂತ, ಗ್ರಾಪಂ ಉಪಾಧ್ಯಕ್ಷೆ ಶಿವಮ್ಮ ಮೇಘರಾಜ್‌, ಸದಸ್ಯ ಚಂದ್ರಕಾಂತ, ಚಂದ್ರರಾಜ್‌ ಕಸಗುಪ್ಪೆ, ಜಿಪಂ ಕಾರ್ಯ ನಿರ್ವಹಣಾಧಿಕಾರಿ ಶಿವರಾಮೇ ಗೌಡ, ಸಹಾಯಕ ಆಯುಕ್ತ ದರ್ಶನ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next