Advertisement
ಸಂಪರ್ಕ ರಹಿತ ಸೇವೆಗಳನ್ನು ವಿಸ್ತರಣೆ ಮಾಡಿರುವ ಕೆಎಫ್ ಸಿ ದೇಶದಲ್ಲಿ ಇದೇ ಮೊದಲ ಬಾರಿಗೆ ಕೆಎಫ್ ಸಿ ಟು ಯುವರ್ ಕಾರ್ Or ಬೈಕ್ ಎಂಬ ಈ ವಿನೂತನವಾದ ಯೋಜನೆಯನ್ನು ಆರಂಭಿಸಿದೆ. ಇದರ ಮೂಲಕ ಗ್ರಾಹಕರ ವಾಹನದ ಬಳಿಗೆ ಹೋಗಿ ಆಹಾರ ಉತ್ಪನ್ನಗಳ ಪ್ಯಾಕೆಟ್ ಗಳನ್ನು ನೀಡಲಿದೆ. ಇದಕ್ಕಾಗಿ ಗ್ರಾಹಕರು ಕೆಎಫ್ ಸಿ ಪ್ರೀಪೇಯ್ಡ್ ಆ್ಯಪ್, ವೆಬ್ ಸೈಟ್ ಅಥವಾ ಎಂ ಸೈಟ್ ಮೂಲಕ ತಮಗಿಷ್ಟವಾದ ಆಹಾರವನ್ನು ಆರ್ಡರ್ ಮಾಡಬೇಕು ಮತ್ತು ರೆಸ್ಟೋರೆಂಟ್ ಸಮೀಪ ನಿಗದಿಪಡಿಸುವ ಸ್ಥಳಕ್ಕೆ ಬಂದು ನಿಲ್ಲಬೇಕು. ಆಗ ಗ್ರಾಹಕರಿಗೆ ಕೆಎಫ್ ಸಿ ಸಿಬ್ಬಂದಿ ಬಂದು ಆರ್ಡರ್ ಅನ್ನು ನೀಡಲಿದ್ದಾರೆ.
Related Articles
Advertisement
ಕಾರು ಅಥವಾ ಬೈಕ್ ಬಳಿಗೆ ಕೆಎಫ್ ಸಿ ಆರ್ಡರ್ ಮಾಡುವುದು ಹೇಗೆ? ಇದು ಅತ್ಯಂತ ಸುಲಭ. ನೀವು ಕೆಎಫ್ ಸಿ ಆ್ಯಪ್, ವೆಬ್ ಸೈಟ್ ಅಥವಾ ಎಂಸೈಟ್ ನಲ್ಲಿ ಟೇಕ್ ಅವೇ ಮತ್ತು `ಕೆಎಫ್ ಸಿ ಟು ಯುವರ್ ಕಾರ್/ಬೈಕ್’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಿಮಗೆ ಸೂಕ್ತವಾದ ಡೆಲಿವರಿ ಸಮಯ, ವಾಹನದ ಸಂಖ್ಯೆ ಇತ್ಯಾದಿ ಮಾಹಿತಿಯನ್ನು ನಮೂದಿಸಬೇಕು. ಆರ್ಡರ್ ಖಾತರಿಯಾದ ನಂತರ ರೆಸ್ಟೋರೆಂಟ್ ಮ್ಯಾನೇಜರ್ ಅವರಿಂದ ನಿಮಗೆ ಕರೆ ಬರುತ್ತದೆ ಮತ್ತು ಅವರು ರೆಸ್ಟೋರೆಂಟ್ ನ ವಿಳಾಸ, ಪಿಕಪ್ ಮತ್ತು ಸ್ಥಳದ ಮಾಹಿತಿಯನ್ನು ತಿಳಿಸುತ್ತಾರೆ. ನಿಮ್ಮ ಆರ್ಡರ್ ಸಿದ್ಧವಾದ ತಕ್ಷಣ ಮತ್ತೊಮ್ಮೆ ಕರೆ ಮಾಡಿ ಮ್ಯಾನೇಜರ್ ಮಾಹಿತಿ ನೀಡಲಿದ್ದಾರೆ.
ನೀವು ನಿಗದಿತ ಸ್ಥಳಕ್ಕೆ ಹೋದಾಗ ರೆಸ್ಟೋರೆಂಟ್ ಸಿಬ್ಬಂದಿ ನೀವು ಆರ್ಡರ್ ಮಾಡಿದ ಆಹಾರ ಉತ್ಪನ್ನವನ್ನು ನೀವಿದ್ದಲ್ಲಿಗೆ ಬಂದು ನೀಡಲಿದ್ದಾರೆ. ಕೆಎಫ್ ಸಿ ಟು ಯುವರ್ ಕಾರ್/ಬೈಕ್ ಸೇವೆ ಬೆಂಗಳೂರು ಮತ್ತು ದೆಹಲಿಯ ಆಯ್ದ ರೆಸ್ಟೋರೆಂಟ್ ಗಳಲ್ಲಿ ಲಭ್ಯವಿದೆ. ಇನ್ನುಳಿದಂತೆ ದೇಶದ ವಿವಿಧ ನಗರಗಳ ರೆಸ್ಟೋರೆಂಟ್ ಗಳಲ್ಲಿ ಕಾಂಟ್ಯಾಕ್ಟ್ ಲೆಸ್ ಟೇಕ್ ಅವೇ ಸೇವೆ ಲಭ್ಯವಿದೆ. ಗ್ರಾಹಕರು ಕೆಎಫ್ ಸಿ ಆ್ಯಪ್ ನೊಂದಿಗೆ ಕೆಎಫ್ ಸಿಯ ತಮ್ಮ ನೆಚ್ಚಿನ ಆಹಾರಗಳನ್ನು ಪಡೆದುಕೊಳ್ಳಬಹುದಾಗಿದೆ.