Advertisement

KFC: ಅಯೋಧ್ಯೆಯಲ್ಲಿ ಕೆಎಫ್‌ಸಿ? ಮಾಂಸಾಹಾರ ಮಾರಾಟಕ್ಕೆ ಅವಕಾಶ ನೀಡಲ್ಲ ಎಂದ ಜಿಲ್ಲಾಡಳಿತ

11:40 AM Feb 08, 2024 | Team Udayavani |

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯ ಬಳಿಕ ಇಲ್ಲಿಗೆ ಬರುವ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಾಗಿದೆ ಅಲ್ಲದೆ ಇಲ್ಲಿ ವ್ಯವಹಾರಗಳು ಗರಿಗೆದರಿವೆ ಈ ನಡುವೆ ದೊಡ್ಡ ದೊಡ್ಡ ಕಂಪೆನಿಗಳು ಇಲ್ಲಿ ತಮ್ಮ ಶಾಖೆಗಳನ್ನು ತೆರೆಯಲು ಮುಂದಾಗಿದೆ.

Advertisement

ಇದರ ನಡುವೆ ಅಯೋಧ್ಯೆ ನಗರಿಯಲ್ಲಿ ಕೆಂಟುಕಿ ಫ್ರೈಡ್ ಚಿಕನ್ (ಕೆಎಫ್‌ಸಿ) ತನ್ನ ಶಾಖೆಯನ್ನು ತೆರೆಯಲು ಹೆಚ್ಚಿನ ಉತ್ಸಾಹ ತೋರಿದ್ದು ಇದಕ್ಕೆ ಇಲ್ಲಿನ ಜಿಲ್ಲಾಡಳಿತ ಕೆಲವೊಂದು ಷರತ್ತನ್ನು ವಿಧಿಸಿದ್ದು ಇದನ್ನು ಒಪ್ಪುವುದಾದರೆ ಮಾತ್ರ ಶಾಖೆ ತೆರೆಯಲು ಅನುಮತಿ ನೀಡುವುದಾಗಿ ಜಿಲ್ಲಾಡಳಿತ ಹೇಳಿದೆ.

ಅದರಂತೆ ಅಯೋಧ್ಯೆ ಪವಿತ್ರ ಕ್ಷೇತ್ರದಲ್ಲಿ ಮಾಂಸಾಹಾರ ಮಳಿಗೆಗಳಿಗೆ ಜಿಲ್ಲಾಡಳಿತದಿಂದ ಅವಕಾಶ ಇಲ್ಲ ಹಾಗಾಗಿ ಕೆಎಫ್‌ಸಿ ಕೂಡ ಇಲ್ಲಿ ಸಸ್ಯಾಹಾರಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದಾದರೆ ಅವಕಾಶ ಕಲ್ಪಿಸುವುದಾಗಿ ಹೇಳಿದೆ ಇದಕ್ಕೆ ತನ್ನ ಒಪ್ಪಿಗೆಯನ್ನು ಸೂಚಿಸಿದ ಕೆಎಫ್‌ಸಿ ಅಯೋಧ್ಯೆಯಲ್ಲಿ ತನ್ನ ನೂತನ ಶಾಖೆಯನ್ನು ತೆರೆಯಲು ತಯಾರಿ ನಡೆಸುತ್ತಿದೆ.

ದಿನನಿತ್ಯ ಅಯೋಧ್ಯೆಗೆ ಲಕ್ಷಾಂತರ ಮಂದಿ ಭೇಟಿ ನೀಡುತ್ತಿದ್ದು ವ್ಯವಹಾರದ ದೃಷ್ಟಿಯಿಂದಲೂ ಅಯೋಧ್ಯೆ ಉತ್ತಮ ಸ್ಥಳವಾಗಿದೆ ಇಲ್ಲಿನ ಹೋಟೆಲ್, ವಸತಿ ಗೃಹದಲ್ಲಿ ಯಾವಾಗಲು ಜನಜಂಗುಳಿಯಿಂದ ತುಂಬಿರುವುದು ಇಲ್ಲಿ ಕಾಣಬಹುದಾಗಿದೆ.

ಅಯೋಧ್ಯೆಯಲ್ಲಿ ಮಾಂಸಾಹಾರಿ ಆಹಾರ ಪದಾರ್ಥಗಳನ್ನು ಸರ್ಕಾರ ಅನುಮತಿಸದ ಕಾರಣ ಕೇವಲ ಸಸ್ಯಾಹಾರಿ ಆಹಾರ ಪದಾರ್ಥಗಳನ್ನು ಮಾತ್ರ ಮಾರಾಟ ಮಾಡಲು ಕೆಎಫ್‌ಸಿ ಅಯೋಧ್ಯೆ – ಲಖನೌ ಹೆದ್ದಾರಿಯಲ್ಲಿ ತನ್ನ ಘಟಕವನ್ನು ಸ್ಥಾಪಿಸಿದೆ. ಈ ಕುರಿತಂತೆ ಮಾತನಾಡಿರುವ ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತೀಶ್ ಕುಮಾರ್, ಅಮೆರಿಕದ ಫಾಸ್ಟ್ ಫುಡ್ ದೈತ್ಯವು ಪಟ್ಟಣದಲ್ಲಿ ತನ್ನ ಮಳಿಗೆಗಳನ್ನು ತೆರೆದಿರುವುದು ಸ್ವಾಗತಾರ್ಹ ಎಂದು ಹೇಳಿದೆ.

Advertisement

ಇದನ್ನೂ ಓದಿ: Whatsappನಲ್ಲಿ ಪರಿಚಯವಾದ ವ್ಯಕ್ತಿಯನ್ನು ವರಿಸಲು ಭಾರತದಿಂದ ಪಾಕ್‌ಗೆ ತೆರಳಿದ 2 ಮಕ್ಕಳ ತಾಯಿ

Advertisement

Udayavani is now on Telegram. Click here to join our channel and stay updated with the latest news.

Next