ಅಹಮ್ಮದಾಬಾದ್: ಭಾರತೀಯ ಜನತಾ ಪಕ್ಷದ ಪ್ರದೀಪ್ ಸಿನ್ನಾ ವಾಘೇಲಾ ಶನಿವಾರ (ಆ.05) ಗುಜರಾತ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದು, ಇದರ ಪರಿಣಾಮ ಲೋಕಸಭೆ ಚುನಾವಣೆಗೂ ಮುನ್ನ ಭಾರತೀಯ ಜನತಾ ಪಕ್ಷಕ್ಕೆ ಹಿನ್ನಡೆಯಾದಂತಾಗಿದೆ.
ಇದನ್ನೂ ಓದಿ:Samantha: ಚಿಕಿತ್ಸಾ ಖರ್ಚಿಗೆ 25 ಕೋಟಿ ರೂ. ಸಹಾಯ ಪಡೆದ ಸಮಂತಾ?; ಕೊನೆಗೂ ಮೌನ ಮುರಿದ ನಟಿ
ರಾಜೀನಾಮೆ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ವಾಘೇಲಾ, ಮುಂದಿನ ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. 2016ರ ಆಗಸ್ಟ್ 10ರಂದು ವಾಘೇಲಾ ಅವರನ್ನು ರಾಜ್ಯ (ಗುಜರಾತ್) ಬಿಜೆಪಿ ಜನರಲ್ ಸೆಕ್ರೆಟರಿಯನ್ನಾಗಿ ನೇಮಕ ಮಾಡಲಾಗಿತ್ತು.
ಲೋಕಸಭಾ ಚುನಾವಣೆಗೂ ಮುನ್ನ ವಾಘೇಲಾ ರಾಜೀನಾಮೆ ಘೋಷಣೆ ಹೊರಬಿದ್ದಿದೆ. ಇತ್ತೀಚೆಗಷ್ಟೇ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್ ಬಿಜೆಪಿ “ಮಹಾ ಜನ್ ಸಂಪರ್ಕ್ ಅಭಿಯಾನಕ್ಕೆ” ಚಾಲನೆ ನೀಡಿತ್ತು.
ಈ ಅಭಿಯಾನದಲ್ಲಿ ಭಾರತೀಯ ಜನತಾ ಪಕ್ಷ ಪ್ರಗತಿಪರ ನಾಗರಿಕರನ್ನು ಒಗ್ಗೂಡಿಸಿ ಹಲವಾರು ಸಭೆ ನಡೆಸಿತ್ತು. ಅಲ್ಲದೇ ರಾಜ್ಯದ 26 ಲೋಕಸಭಾ ಕ್ಷೇತ್ರಗಳಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಿರುವುದಾಗಿ ವರದಿ ತಿಳಿಸಿದೆ.