ನ್ಯೂಯಾರ್ಕ್: ಭಾರೀ ಹೋರಾಟ ನೀಡಿ ಬೆವರಿಳಿಸಿದ ತವರಿನ ಸ್ಯಾಮ್ ಕ್ವೆರ್ರಿ ವಿರುದ್ಧ 2 ಗಂಟೆ, 13 ನಿಮಿಷಗಳ ಹೋರಾಟ ನಡೆಸಿದ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ “ನ್ಯೂಯಾರ್ಕ್ ಓಪನ್’ ಟೆನಿಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರವಿವಾರ ರಾತ್ರಿಯ ಫೈನಲ್ ಹಣಾಹಣಿಯನ್ನು ಅವರು 4-6, 6-3, 7-6 (7-1) ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾದರು.
31ರ ಹರೆಯದ ಕೆವಿನ್ ಆ್ಯಂಡರ್ಸನ್ ಕಳೆದ ವರ್ಷದ ಯುಎಸ್ ಓಪನ್ ಫೈನಲ್‌ನಲ್ಲಿ ಎಡವಿ ಪ್ರಶಸ್ತಿ ವಂಚಿತರಾಗಿದ್ದರು. ಈಗ ನ್ಯೂಯಾರ್ಕ್‌ನಲ್ಲೇ ಪ್ರಶಸ್ತಿ ಎತ್ತುವ ಮೂಲಕ ಸಮಾಧಾನಪಟ್ಟಿದ್ದಾರೆ. ಇದು 12 ಫೈನಲ್‌ಗಳಲ್ಲಿ ಆ್ಯಂಡರ್ಸನ್‌ಗೆ ಒಲಿದ 4ನೇ ಟೆನಿಸ್ ಪ್ರಶಸ್ತಿ.
“ಹಿಂದಿನ ಬಹಳಷ್ಟು ಫೈನಲ್ ಅವಕಾಶಗಳಲ್ಲಿ ನಾನು ಪ್ರಶಸ್ತಿಯಿಂದ ವಂಚಿತಬಾಗುತ್ತಲೇ ಬಂದಿದ್ದೆ. ಇದು ಕೂಡ ಅತ್ಯಂತ ಕಠಿನ ಸವಾಲಾಗಿತ್ತು. ಹೀಗಾಗಿ ಇದೊಂದು ಮಹತ್ವದ ಗೆಲುವು’ ಎಂದು ಆ್ಯಂಡರ್ಸನ್ ಪ್ರತಿಕ್ರಿಯಿಸಿದ್ದಾರೆ.
ಇನ್ನೊಂದೆಡೆ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಶಸ್ತಿ ಗೆಲ್ಲಲಾಗದಿದ್ದುದಕ್ಕೆ ಸ್ಯಾಮ್ ಕ್ವೆರ್ರಿ ತೀವ್ರ ನಿರಾಸೆ ವ್ಯಕ್ತಪಡಿಸಿದರು.