Advertisement
ನಗರದ ನೆಮ್ಮದಿಯ ಸದ್ಗತಿಯಲ್ಲಿ ಗುರುವಾರ ಅವರು ವಿಶ್ವ ಹಿಂದೂ ಪರಿಷತ್ ದಕ್ಷಿಣ ಕ್ಷೇತ್ರ ಕಾರ್ಯದರ್ಶಿ ಕೇಶವ ಹೆಗಡೆ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾತನಾಡಿದರು.
Related Articles
Advertisement
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ವ್ಯವಸ್ಥಾ ಪ್ರಮುಖ್ ಮಂಗೇಶ ಭೇಂಡೆ, ಕೇಶವ ಅವರು ಯಾರ ಜೊತೆಗೂ ಬೇಸರ ಮಾಡಿಕೊಳ್ಳಲಿಲ್ಲ. ಎಲ್ಲರನ್ನೂ ಸಂಘಟನೆಗೆ ಬಳಸಿಕೊಂಡು ಮುನ್ನಡೆದವರು. ಎಂಥ ವೇಳೆಯಲ್ಲೂ ವಿಚಲಿತರಾಗದೇ, ಸಮಚಿತ್ತ ದೃಷ್ಟಿಯಲ್ಲಿ ವಿಎಚ್ಪಿಗೆ ಸಾಕಷ್ಟು ಕೊಡುಗೆ ನೀಡಿದವರು ಎಂದ ಅವರು, ರಾಮ ಜನ್ಮ ಭೂಮಿ ಹೋರಾಟ ಸಂದರ್ಭದಲ್ಲಿ ತೊಡಗಿಸಿಕೊಂಡವರು. ಈಗ ಜನವರಿಗೆ ಅಲ್ಲಿ ದೇವರ ಪ್ರತಿಷ್ಠಾಪನೆ ಆಗಲಿದೆ. ಆದರೆ, ಅದನ್ನು ನೋಡುವ ಭಾಗ್ಯ ಅವರಿಗಿಲ್ಲವಾಯಿತು. ಆದರೆ ಅವರು ನೇತ್ರ ದಾನ ಮಾಡಿ ಆ ಕಣ್ಣು ರಾಮನ ಪ್ರತಿಷ್ಠಾಪನೆ ನೋಡಲಿದೆ ಎಂಬ ಸಮಾಧಾನವಿದೆ ಎಂದರು.
ದಕ್ಷಿಣ ಪ್ರಾಂತ ಅಧ್ಯಕ್ಷ ಎಂ.ಬಿ. ಪುರಾಣಿಕ, ಕೊನೇ ನಿಮಿಷದ ತನಕ ಕರ್ತವ್ಯ ನಿರ್ವಹಿಸಿದ ಕೇಶವ ಹೆಗಡೆ ಅವರು ಕಾರ್ಯಕರ್ತರಿಗೆಲ್ಲ ಮಾದರಿ.
ಅವರು ಎಂದೂ ದೈನ್ಯದ ಜೀವನ ಮಾಡಿಲ್ಲ. ಬದುಕಿದ್ದಾಗ ಏನು ಮಾಡಿದ ಎಂಬುದು ಮುಖ್ಯ. ಸಮಾಜಕ್ಕೆ, ರಾಷ್ಟ್ರಕ್ಕೆ, ಧರ್ಮಕ್ಕೆ ಯುವ ಪೀಳಿಗೆಗೆ ಕೇಶವ ಹೆಗಡೆ ಮಾಡಿದವರು.
ಇನ್ನೊಬ್ಬರಿಗೋಸ್ಕರ ಬದುಕಿದವರು. ಜಟಿಲ ಸಂದರ್ಭದಲ್ಲೂ ಉದ್ವಿಘ್ನರಾಗದೇ ಸಮಾದಾನವಾಗಿ ಆಲಿಸಿದ ಕೆಲಸ ಮಾಡಿದ ಸಂತ.
ಸದಾನಂದ ಕಾಕಡೆ ಅವರ ಜೊತೆ ಪಳಗಿದವರು.ಸಮಾಜಕ್ಕೋಸಕ್ಕೋಸ್ಕರ ಬಾಳಿ ಬದುಕಿದವರು ಎಂದರು.
ವಿಎಚ್ ಪಿಯ ಉತ್ತರ ಪ್ರಾಂತ ಉಪಾಧ್ಯಕ್ಷ ಲಿಂಗರಾಜಪ್ಪ ಅಪ್ಪ, ಆರ್ ಎಸ್ ಎಸ್ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ, ವಿ ಎಚ್ ಪಿ ಉತ್ತರ ಪ್ರಾಂತ ಉಪಾಧ್ಯಕ್ಷ ಗಂಗಾಧರ ಹೆಗಡೆ, ವಿಎಚ್ ಪಿ ಅಖಿಲ ಭಾರತೀಯ ಸಂಘಟನಾ ಮಹಾ ಮಂತ್ರಿ ವಿನಾಯಕ ರಾವ್ ದೇಶಪಾಂಡೆ, ವಿಭಾಗ ಬೌದ್ದಿಕ ಪ್ರಮುಖ ಮಧು ಕಿರಗಾರ, ಭಜರಂಗ ದಳದ ಸೂರ್ಯನಾರಾಯಣ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಕಾಂಗ್ರೆಸ್ ವಕ್ತಾರ ದೀಪಕ ದೊಡ್ಡೂರು, ಬಿಜೆಪಿ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯ್ಕ, ಎನ್.ಎಸ್.ಹೆಗಡೆ ಸೇರಿದಂತೆ ಸಾವಿರಕ್ಕೂ ಅಧಿಕ ಜನರು ಅಂತಿಮ ನಮನ ಸಲ್ಲಿಸಿದರು. ಶ್ರದ್ದಾಂಜಲಿ ಸಭೆಯ ಬಳಿಕ ಪಾರ್ಥೀವ ಶರೀರಕ್ಕೆ ಸಂಘದ ಪ್ರಾರ್ಥನೆ, ಶಾಂತಿ ಮಂತ್ರದ ಮೂಲಕ ಸಾಮೂಹಿಕವಾಗಿ ಸಲ್ಲಿಸಿ ನಮಿಸಲಾಯಿತು. ಸಮಾಜದ ಋಣ ತೀರಿಸಲು ಕಂಕಣ ಬದ್ದರಾಗಿದ್ದವರು ಕೇಶವ ಹೆಗಡೆ. ತನು ಮನ ಧನ ಎಲ್ಲವನ್ನೂ ಸಾಸಿವೆ ಕಾಳಿನಷ್ಟೂ ತನಗಾಗಿ ಇಟ್ಟುಕೊಳ್ಳದೇ ರಾಷ್ಟ್ರ ಜೀವನಕ್ಕೆ ಮಾತ್ರ ಮುಡುಪಾಗಿಷ್ಟರು. ಕಷ್ಟದಲ್ಲೂ ತತ್ವದಿಂದ ಹಿಂದೆ ಹೋಗದವರು ಕೇಶವಜೀ ಅವರಾಗಿದ್ದರು.
– ಮಂಗೇಶ ಭೇಂಡೆ, ಅಖಿಲ ಭಾರತ ವ್ಯವಸ್ಥಾ ಪ್ರಮುಖ ಆರ್ ಎಸ್ಎಸ್ ಪಂಚಭೂತದಲ್ಲಿ ಲೀನ
ಬುಧವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಅಗಲಿದ ವಿಎಚ್ ಪಿ ನಾಯಕ ಕೇಶವ ಹೆಗಡೆ ಅವರ ಪ್ರಾರ್ಥೀವ ಶರೀರವನ್ನು ಗುರುವಾರ ಸ್ವಗೃಹ ಮಣ್ಣಿಮನೆಗೆ ಕರೆದೋಯ್ದು ನಂತರ ನಗರದ ನೆಮ್ಮದಿಯ ಸದ್ಗತಿಯಲ್ಲಿ ಅಂತಿಮ ವಿಧಿ ವಿಧಾನ ನಡೆಸಲಾಯಿತು. ಅವರ ಸಹೋದರನ ಮಗ ಸುದರ್ಶನ ಹೆಗಡೆ ಅಂತಿಮವಾಗಿ ಅಗ್ನಿ ಸ್ಪರ್ಶ ಮಾಡಿದರು. ವಿನಂಮ್ರ ಸ್ವಭಾವ, ಸಮರ್ಪಿತಕರ್ಮಯೋಗಿ ಆಗಿದ್ದವರು. ಅವರ ಆದರ್ಶ ಪರಿಪಾಲನೆ ಮಾಡಬೇಕು.
– ವಿನಾಯಕ ದೇಶಪಾಂಡೆ, ಅಖಿಲ ಭಾರತೀಯ ಸಂಘಟನಾ ಮಹಾಮಂತ್ರಿ, ವಿಎಚ್ಪಿ, ನವ ದೆಹಲಿ