Advertisement

ಕೆರೆಕಾಡು: ಯಕ್ಷಕಲಾ ತಂಡದ ಮಕ್ಕಳ ಮೇಳದ ದಶಸಂಭ್ರಮ

12:48 PM Apr 30, 2018 | |

ಕೆರೆಕಾಡು: ಯಕ್ಷಗಾನದಲ್ಲಿ ಬದಲಾವಣೆ ಬೇಕು ಆದರೇ ಕಲೆಯನ್ನು ಅಶ್ಲೀಲವಾಗಿ ಬಳಸಿ ಕೊಲೆಯನ್ನು ಸ್ವತಃ ಕಲೆಗಾರರೇ ಮಾಡುತ್ತಿರುವುದು ಸರಿಯಲ್ಲ. ಸಿನಿಮಾ ಗೀತೆಯನ್ನು ಅಳವಡಿಸಿ ಯಕ್ಷಗಾನದ ಮೂಲಕ್ಕೆ ಧಕ್ಕೆ ತರುವುದನ್ನು ಸಾಮೂಹಿ ಕವಾಗಿ ನಿಷೇಧಿಸಬೇಕು ಎಂದು ಬಾರ್ಕೂರು ಮಹಾಸಂಸ್ಥಾನಮ್‌ನ ಡಾ| ವಿಶ್ವ ಸಂತೋಷ್‌ ಭಾರತೀ ಸ್ವಾಮೀಜಿ ಹೇಳಿದರು. ಎಸ್‌.ಕೋಡಿಯ ಷಣ್ಮುಖ ನಗರದಲ್ಲಿ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡದ ಮಕ್ಕಳ ಮೇಳದ ದಶಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಶಿಷ್ಟ ಪರಂಪರೆಯ ನವರಸ ಭರಿತ ಕಲೆಯಾಗಿರುವ ಯಕ್ಷಗಾನಕ್ಕೆ ಮತ್ತೂಂದು ಸಮಾನತೆಯ ಕಲೆಯಿಲ್ಲ ಇಂತಹ ಯಕ್ಷಗಾನವನ್ನು ನೋಡುವ ಸಂಖ್ಯೆ ಕ್ಷೀಣವಾಗುತ್ತಿದೆ. ಪರಂಪರೆಯ ವೇಷ ಭೂಷಣಗಳು ಮರೆಯಾಗುತ್ತಿದೆ. ಅಶ್ಲೀಲತೆ, ಅಂಗ ಚಲನೆಯ ಹಾಸ್ಯ ಒಳಹೊಕ್ಕಿ ಧಕ್ಕೆ ತರುತ್ತಿದೆ ಎಂದರು.

ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಮಾತಾನಂದಮಯಿ ಆಶೀರ್ವಚನ ನೀಡಿ, ಹಿರಿಯರ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಜವಾಬ್ದಾರಿಗೆ ಯಕ್ಷಗಾನವು ವೇದಿಕೆಯಾಗಲಿ ಎಂದರು.

ಗೌರವಾರ್ಪಣೆ
ಮೇಳದ ಪ್ರಮುಖರಾದ ಉಮೇಶ್‌ ಜೆ. ಆಚಾರ್ಯ, ಅಭಿಜಿತ್‌ ಕೆರೆಕಾಡು, ತಾರಾನಾಥ ಶೆಟ್ಟಿಗಾರ್‌, ಅಶೋಕ್‌, ಗಣೇಶ್‌ ಬಂಗೇರ, ರಾಮಪ್ರಕಾಶ, ಶ್ರೀಪತಿ ನಾಯಕ್‌, ಕಾವ್ಯಶ್ರೀ ಅಜೇರು, ಪ್ರೇಮಲತಾ ಅಮೀನ್‌, ಸಂಧ್ಯಾ ಆಚಾರ್ಯ, ರೇಷ್ಮಾ ಜಿ. ಬಂಗೇರ ಅವರನ್ನು ಗೌರವಿಸಲಾಯಿತು.

ಕಿನ್ನಿಗೋಳಿ ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಮೂಡ ಬಿದಿರೆಯ ಇನ್ನರ್‌ವೀಲ್‌ ಅಧ್ಯಕ್ಷ ಜಯಶ್ರೀ ಅಮರನಾಥ ಶೆಟ್ಟಿ, ಉದ್ಯಮಿ ಪಟೇಲ್‌ ವಾಸುದೇವ ರಾವ್‌ ಪುನರೂರು, ನಿಡ್ಡೋಡಿ ಜ್ಞಾನರತ್ನ ಎಜುಕೇಶನ್‌ ಮತ್ತು ಚಾರಿಟೆಬಲ್‌ ಟ್ರಸ್ಟ್ನ ಅಧ್ಯಕ್ಷ ಭಾಸ್ಕರ್‌ ದೇವಸ್ಯ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು, ಕಿನ್ನಿಗೋಳಿ ಸ್ವಾಮೀ ವಿವೇಕಾನಂದ ಸೇವಾ ಸಂಸ್ಥೆಯ ಪ್ರವರ್ತಕ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ, ಮೇಳದ ಮುಂಬಯಿ ಸಮಿತಿಯ ಕಿಶೋರ್‌ ಕೋಟ್ಯಾನ್‌, ಕಿನ್ನಿಗೋಳಿ ಲಯನ್ಸ್‌ ಕ್ಲಬ್‌ನ ಅಧ್ಯಕ್ಷೆ ಶಾಂಭವಿ ಶೆಟ್ಟಿ ಮುಚ್ಚಾರು, ಯಕ್ಷ ಕೌಮುದಿ ಮಹಿಳಾ ಸಂಘದ ಅಧ್ಯಕ್ಷೆ ಪ್ರಜ್ಞಾ ದೀಪಕ್‌, ಮೇಳದ ಗೌರವಾಧ್ಯಕ್ಷ ಜೈಕೃಷ್ಣ ಕೋಟ್ಯಾನ್‌, ಉಪಾಧ್ಯಕ್ಷ ಉಮೇಶ್‌ ಜೆ. ಅಚಾರ್ಯ, ಕಾರ್ಯದರ್ಶಿ ರೇಷ್ಮಾ ಜಿ. ಬಂಗೇರ, ಸಹ ಕಾರ್ಯದರ್ಶಿ ಸಂಧ್ಯಾ ಆಚಾರ್ಯ, ಕೋಶಾಧಿ ಕಾರಿ ಪ್ರೇಮಲತಾ ಜೆ. ಅಮೀನ್‌ ಉಪಸ್ಥಿತರಿದ್ದರು.

Advertisement

ಮೇಳದ ಅಧ್ಯಕ್ಷ ಜಯಂತ್‌ ಅಮೀನ್‌ ಸ್ವಾಗತಿಸಿ, ಪ್ರಸ್ತಾವನೆಗೈದರು. ಯಕ್ಷಕೌಮುದಿ ಕಲಾ ಸಂಘದ ಅಧ್ಯಕ್ಷ ಡಾ| ಕಿಶೋರ್‌ ಕುಮಾರ್‌ ರೈ ಶೇಣಿ ಪರಿಚಯಿಸಿದರು. ಉಪಾಧ್ಯಕ್ಷ ಉಮೇಶ್‌ ಜೆ. ಆಚಾರ್ಯ ವಂದಿಸಿದರು.

ಸಮ್ಮಾನ
ಈ ಸಂದರ್ಭದಲ್ಲಿ ಗಣೇಶ್‌ ಕೊಲಕಾಡಿ, ಮಾಂಬಾಡಿ ಸುಬ್ರಹ್ಮಣ್ಯ ಭಟ್‌, ಪ್ರಸಾದ್‌ ಚೇರ್ಕಾಡಿ, ದಿವಾಕರ ದಾಸ್‌, ದಿನೇಶ್‌ ಶೆಟ್ಟಿ ಕಾವಳಕಟ್ಟೆ, ಮೋಹನ್‌ ಆಚಾರ್ಯ, ರವಿರಾಜ್‌ ಭಟ್‌ ಹಳೆಯಂಗಡಿ ಅವರನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next