Advertisement

ಕೇಂದ್ರ, ಕೇರಳದಲ್ಲಿ ಜನದ್ರೋಹಿ ಆಡಳಿತ: ಚಾಂಡಿ

07:55 AM Jul 30, 2017 | |

ಕುಂಬಳೆ: ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ಕೇರಳದಲ್ಲಿ ಪಿಣರಾಯಿ ವಿಜಯನ್‌ ಜನಸಾಮಾನ್ಯರಿಗೆ ಭರವಸೆಗಳ ಆಸೆ ತೋರಿಸಿ ಜನದ್ರೋಹಿ ಆಡಳಿತ ನಡೆಸುತ್ತಿರುವುದಾಗಿ ಕೇರಳ ರಾಜ್ಯ ಮಾಜಿ ಮುಖ್ಯಮಂತ್ರಿ ಊಮ್ಮನ್‌ ಚಾಂಡಿ ಆರೋಪಿಸಿದರು. ಕುಂಬಳೆ ಬಳಿಯ ಬಂಬ್ರಾಣ ತಿಲಕನಗರದಲ್ಲಿ ಇಂದಿರಾಗಾಂಧಿ ಜನ್ಮ ಶತಾಬ್ದ ಆಚರಣೆಯಂಗವಾಗಿ ಜರಗಿದ ಕುಟುಂಬ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಜನಪರವಾದ ಯಾವುದೇ ಯೋಜನೆಗಳನ್ನು ಜಾರಿಗೊಳಿಸದೆ ಕೇಂದ್ರ ಹಾಗೂ ರಾಜ್ಯದ ಉಭಯ ಸರಕಾರಗಳು ಪಕ್ಷದ ಗುಪ್ತ ಅಜೆಂಡಾವನ್ನು ಹೇರುವುದರಲ್ಲಿ ತಲ್ಲೀನವಾಗಿವೆ. ರಾಜ್ಯದಲ್ಲಿ ಈ ಹಿಂದಿನ ಯುಡಿಎಫ್‌ ಆಡಳಿತ ಕಾಲದಲ್ಲಿ ಸರಕಾರ ಜಾರಿಗೊಳಿಸಿದ ಜನಸಂಪರ್ಕ ಕಾರ್ಯಕ್ರಮವನ್ನು ಎಡರಂಗ ಸರಕಾರ ಪೂರ್ಣವಾಗಿ ಅವಗಣಿಸಿದೆ. ಪಡಿತರ ಸಹಿತ ಅಗತ್ಯ ಸೇವೆಗಳನ್ನು ಅವ್ಯವಸ್ಥೆಗೊಳಿಸಿ ವಂಚನೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. 

ಉಜಾರು ಬೂತ್‌ ಕಾಂಗ್ರೆಸ್‌ ಅಧ್ಯಕ್ಷ ರಾಮ್‌ಮೋಹನ್‌ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕದ ಮಾಜಿ ಶಾಸಕ ಐವನ್‌ ನಿಗ್ಲಿ ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹಕೀಂ ಕುನ್ನಿಲ್‌, ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿ ಕಾರ್ಯದರ್ಶಿ ನೀಲಕಂಠನ್‌, ಸದಸ್ಯ ನ್ಯಾಯವಾದಿ ಸುಬ್ಬಯ್ಯ ರೈ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಾರ್ಯದರ್ಶಿಗಳಾದ ಸೋಮಶೇಖರ ಜೆ.ಎಸ್‌., ಗೋವಿಂದನ್‌ ನಾಯರ್‌, ಕುಂಞಂಬು ನಂಬಿಯಾರ್‌, ಸದಸ್ಯ ಮಂಜುನಾಥ ಆಳ್ವ ಮಡ್ವ, ಕುಂಬಳೆ ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಗೀತಾ ಎಲ್‌ ಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಾಮಿಕುಟ್ಟಿ, ಮಂಡಲ ಕಾಂಗ್ರೆಸ್‌Õ ಅಧ್ಯಕ್ಷ ಗಣೇಶ್‌ ಭಂಡಾರಿ ಕುತ್ತಿಕಾರ್‌, ಎಂ. ಅಬ್ಟಾಸ್‌ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಸುಂದರ ಆರಿಕ್ಕಾಡಿ ಸ್ವಾಗತಿಸಿ, ಲೋಕನಾಥ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next