Advertisement

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…ಕೇರಳ ಆಟೋ ಚಾಲಕನ ಅಳಲೇನು?!

11:08 AM Sep 24, 2022 | Team Udayavani |

ತಿರುವನಂತಪುರ: ಕೇರಳ ಸರ್ಕಾರದ ಈ ವರ್ಷದ ಓಣಂ ಲಕ್ಕಿ ಬಂಪರ್ ಲಾಟರಿ ಡ್ರಾನಲ್ಲಿ ಆಟೋ ಚಾಲಕ ಶ್ರೀವರಂನ ಅನೂಪ್ ಬರೋಬ್ಬರಿ 25 ಕೋಟಿ ರೂಪಾಯಿ ಬಹುಮಾನ ಗೆದ್ದು ಒಂದೇ ದಿನದಲ್ಲಿ ಮನೆಮಾತಾಗಿದ್ದು ಜಗಜ್ಜಾಹೀರಾದ ವಿಚಾರ, ಆದರೆ ಇದೀಗ ಬಹುಮಾನ ಘೋಷಣೆಯಾಗಿ ಐದು ದಿನಗಳ ಬಳಿಕ ತನಗೆ ಅನಿರೀಕ್ಷಿತವಾಗಿ ಬಂದ ಬಹುಮಾನದ ಬಗ್ಗೆ ಪಶ್ಚತ್ತಾಪ ವ್ಯಕ್ತಪಡಿಸಿದ್ದಾರೆ.

Advertisement

ಆಟೋ ಚಾಲಕನ ಅಳಲೇನು?

25 ಕೋಟಿ ಬಹುಮಾನ ನನಗೆ ಬಂದಿದೆ ಎಂಬ ವಿಚಾರ ಬಹಿರಂಗವಾದ ಮೇಲೆ ನನ್ನೆಲ್ಲಾ ಮನಶಾಂತಿ ಕಳೆದುಕೊಂಡು ಬಿಟ್ಟಿದ್ದೇನೆ. ನಾನು ನನ್ನ ಸ್ವಂತ ಮನೆಯಲ್ಲಿ ವಾಸಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಯಾಕೆಂದರೆ ನನಗೆ ಮೊದಲ ಬಹುಮಾನ ಬಂದ ಸುದ್ದಿ ತಿಳಿದು ಮನೆಗೆ ನೂರಾರು ಮಂದಿ ಆಗಮಿಸುತ್ತಿದ್ದು, ಹಣಕಾಸಿನ ನೆರವು ಕೇಳುತ್ತಿದ್ದಾರೆ. ನಾನೀಗ ಬದಲಾಗುತ್ತಿದ್ದೇನೆ, ನಾನು ಬಹುಮಾನ ಗೆಲ್ಲುವವರೆಗೆ ಇದ್ದ ಎಲ್ಲಾ ಮನಶಾಂತಿಯನ್ನು ಕಳೆದುಕೊಂಡು ಬಿಟ್ಟಿದ್ದೇನೆ” ಎಂದು ಆಟೋ ಚಾಲಕ ಅನೂಪ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಜಾರುವ ಅಂಗಳದಲ್ಲಿ ನಾವು ಆಡಿದ್ದು ಆ ಒಂದೇ ಒಂದು ಕಾರಣಕ್ಕೆ; ದಿನೇಶ್ ಕಾರ್ತಿಕ್ ಹೇಳಿದ್ದೇನು

ತಿರುವನಂತಪುರದ ಶ್ರೀವರಂನ ಅನೂಪ್(30ವರ್ಷ) ಆಟೋ ಚಾಲಕರಾಗಿದ್ದು, 25 ಕೋಟಿ ರೂಪಾಯಿ ಬಂಪರ್ ಬಹುಮಾನ ವಿಜೇತರಾಗಿದ್ದಾರೆ. ತೆರಿಗೆ ಮತ್ತು ಕಮಿಷನ್ ಕಳೆದು 15.75 ಕೋಟಿ ರೂಪಾಯಿ ಪಡೆಯಲಿದ್ದಾರೆ. ಅನೂಪ್ ಅವರು ಪತ್ನಿ, ಮಕ್ಕಳು ಮತ್ತು ತಾಯಿ ಜತೆ ವಾಸವಾಗಿದ್ದಾರೆ.

Advertisement

“ಆದರೆ ನಾನೀಗ ನಿಜವಾಗಿ ಬಯಸುತ್ತಿರುವುದೇನೆಂದರೆ ನಾನು ಆ ಬಂಪರ್ ಬಹುಮಾನ ಗೆಲ್ಲಲೇಬಾರದಿತ್ತು. ಬಹುಮಾನ ಗೆದ್ದ ಒಂದೆರಡು ದಿನ ನಾನು ಎಲ್ಲರೊಂದಿಗೆ ಬೆರೆತು ಖುಷಿಪಟ್ಟು, ಪ್ರಚಾರ ಪಡೆದಿದ್ದೇನೆ. ಈಗ ನನಗೆ ಅಪಾಯಕ್ಕೆ ಎಡೆಮಾಡಿಕೊಡತೊಡಗಿದೆ. ನನಗೆ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ನನ್ನ ನೋಡಿದ ಕೂಡಲೇ ಜನರು ನೆರವು ನೀಡಿ ಎಂದು ದುಂಬಾಲು ಬೀಳುತ್ತಿದ್ದಾರೆ” ಎಂದು ಅನೂಪ್ ಅಸಮಧಾನವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.

ಬಂಪರ್ ಬಹುಮಾನದ ಹಣ ನನಗೆ ಇನ್ನಷ್ಟೇ ಸಂದಾಯವಾಗಬೇಕಾಗಿದೆ ಎಂದು ಅನೂಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಜನರಿಗೆ ವಿಷಯ ತಿಳಿಸಿದ್ದಾರೆ. ನನಗೀಗ ಈ ಹಣ ಏನು ಮಾಡಬೇಕೆಂದು ತೋಚುತ್ತಿಲ್ಲ. ಈ ಸಂದರ್ಭದಲ್ಲಿ ನನಗೆ ಬಂದ ಎಲ್ಲಾ ಹಣವನ್ನು 2 ವರ್ಷಗಳ ಕಾಲ ಬ್ಯಾಂಕ್ ನಲ್ಲಿ ಇಡಲು ಬಯಸುತ್ತೇನೆ. ನನಗೆ ಆ ಬಹುಮಾನದ ಹಣ ಬರಬಾರದಿತ್ತು ಎಂದು ಬಯಸುತ್ತೇನೆ. ನನಗೆ ಸಣ್ಣ ಮೊತ್ತದ ಬಹುಮಾನ ಬಂದಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಅನೂಪ್ ಹೇಳಿದ್ದಾರೆ.

ನನಗೆ ಆತ್ಮೀಯರಾಗಿದ್ದ ಹಲವು ಗೆಳೆಯರು ಶತ್ರುಗಳಾಗುವ ಹಂತಕ್ಕೆ ಬಂದಿದ್ದಾರೆ. ನನ್ನನ್ನು ಹುಡುಕಿಕೊಂಡು ನೂರಾರು ಜನ ಬರುತ್ತಿರುವುದರಿಂದ ನನ್ನ ನೆರೆಹೊರೆಯವರು ಕೂಡಾ ನನ್ನ ಮೇಲೆ ಆಕ್ರೋಶಗೊಂಡಿದ್ದಾರೆ. ನಾನು ಮಾಸ್ಕ್ ಹಾಕಿಕೊಂಡು ಹೊರಗೆ ಹೋದರೂ ಕೂಡಾ, ನನ್ನ ಸುತ್ತ ಜನರ ಗುಂಪು ಸೇರುತ್ತದೆ. ಇದರಿಂದಾಗಿ ನನ್ನ ಮನಸ್ಸಿನ ಶಾಂತಿ ನಾಶವಾಗಿ ಹೋಗಿದೆ ಎಂದು ಅನೂಪ್ ಬೇಸರ ವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next