Advertisement
ಕೇರಳದ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಾಕ್ಕಾ ಇಳಿವಯಸ್ಸಿನಲ್ಲಿ ಪರೀಕ್ಷೆ ಬರೆದ ಮಹಿಳೆ. ವಯನಾಡ್‌ನಲ್ಲಿ ಕೇರಳ ಸಾಕ್ಷರತಾ ಮಿಷನ್ ಪ್ರಾಧಿಕಾರ ನಡೆಸಿರುವ ಸಾಕ್ಷರತಾ ಯೋಜನೆಯಡಿ ಪರೀಕ್ಷೆ ಬರೆದ 4500 ಮಂದಿಯಲ್ಲಿ ಈ ಅಜ್ಜಿ ಕೂಡ ಒಬ್ಬರು. ಮಾಕ್ಕಾ ಅವರಿಗೆ ಸಾಕ್ಷರತಾ ಯೋಜನೆಯ ಮೊದಲ ಪರೀಕ್ಷೆ ಇದಾಗಿದೆ. ಮಾಕ್ಕಾ ಕೇರಳ ಬುಡಕಟ್ಟು ಸಮುದಾಯದಲ್ಲೇ ಅತಿ ಹಿರಿಯ ಮಹಿಳೆ. ಅಂತೆಯೇ 16 ವರ್ಷದ ಲಕ್ಷ್ಮೀ ಎಂಬಾಕೆ ಈ ಪರೀಕ್ಷೆ ಬರೆದ ಕಿರಿಯ ಅಭ್ಯರ್ಥಿ. ಓದು, ಬರವಣಿಗೆ ಹಾಗೂ ಗಣಿತ ವಿಷಯಗಳ ಮೇಲೆ ಪರೀಕ್ಷೆ ಇರಲಿದ್ದು, ತಲಾ 100 ಅಂಕಗಳ ಪರೀಕ್ಷೆ ಇದಾಗಿರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Advertisement
ಸಾಕ್ಷರತಾ ಪರೀಕ್ಷೆ ಬರೆದ 90ರ ಅಜ್ಜಿ!
06:00 AM Apr 28, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.