Advertisement
ಹಲವು ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಲೇರದೆ ಮುಚ್ಚಿ ಹೋದವುಗಳು ಸಾಕಷ್ಟಿದೆ. ಆ ವರದಿ ಈ ಅಂಕಿಅಂಶದಲ್ಲಿಲ್ಲ. 2010 ರಲ್ಲಿ 10,781 ಅಪರಾಧ ಕೃತ್ಯಗಳಿಗೇರಿತು. 2011 ರಲ್ಲಿ ಮಹಿಳೆಯರ ವಿರುದ್ಧ ನಡೆದ ಅಪರಾಧ ಕೃತ್ಯಗಳು ಕಡಿಮೆಯಲ್ಲ. 13,279 ಕ್ಕೇರಿತು. ಆ ಬಳಿಕ ಮುಂದಿನ ಮೂರು ವರ್ಷಗಳಲ್ಲಿ ಗಮನಾರ್ಹ ಕುಸಿತ ಕಂಡು ಬಂದಿಲ್ಲ. ಆದರೆ 2015 ರಲ್ಲಿ ಕೇಸುಗಳ ಸಂಖ್ಯೆ 12,383 ಕ್ಕೆ ಕುಸಿದರೂ, 2016 ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅಪರಾಧ ಕೃತ್ಯಗಳಲ್ಲಿ ಹೆಚ್ಚಳ ಉಂಟಾಗಿದೆ.
Related Articles
Advertisement
ತಿರುವನಂತಪುರದಲ್ಲಿ ಪ್ರತೀ ವರ್ಷ ಸರಾಸರಿ 136.5 ಮಂದಿ ಮಹಿಳೆಯರು ಅತ್ಯಾಚಾರಕ್ಕೆ ಗುರಿಯಾಗುತ್ತಿದ್ದಾರೆ. ಕೈಗಾರಿಕಾ ಕೇಂದ್ರವಾದ ಎರ್ನಾಕುಳಂನಲ್ಲಿ ಸರಾಸರಿ 91.3 ಮಂದಿ ಮಹಿಳೆಯರು ಪ್ರತೀ ವರ್ಷ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ.
ತಿರುವನಂತಪುರ ಜಿಲ್ಲೆಯಲ್ಲಿ ಕಳೆದ ವರ್ಷ 204 ಮಂದಿ ಮಹಿಳೆಯರು ಅತ್ಯಾಚಾರಕ್ಕೀಡಾಗಿದ್ದಾರೆ. ಕೊಲ್ಲಂ ಜಿಲ್ಲೆಯಲ್ಲಿ ಈ ಸಂಖ್ಯೆ 148. ಎರ್ನಾಕುಲಂ ಜಿಲ್ಲೆಯಲ್ಲಿ 148, ತೃಶ್ಶೂರು ಜಿಲ್ಲೆಯಲ್ಲಿ 174, ಕಲ್ಲಿಕೋಟೆ ಜಿಲ್ಲೆಯಲ್ಲಿ 113 ಎಂಬಂತೆ ಮಹಿಳೆಯರು ಅತ್ಯಾಚಾರಕ್ಕೆ ತುತ್ತಾಗಿದ್ದಾರೆ. ಅತ್ಯಂತ ಹೆಚ್ಚಿನ ದೌರ್ಜನ್ಯ ನಡೆದ ಜಿಲ್ಲೆ ತಿರುವನಂತಪುರ. ಈ ಜಿಲ್ಲೆಯಲ್ಲಿ 797 ದೌರ್ಜನ್ಯ ಪ್ರಕರಣ ನಡೆದಿವೆ. ಕೊಲ್ಲಂ ಜಿಲ್ಲೆಯಲ್ಲಿ 439 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ದಿನಗಳ ಹಿಂದೆಯಷ್ಟೇ ಮಲಯಾಳ ಚಿತ್ರರಂಗದ ಹಾಗು ಕನ್ನಡ ಚಿತ್ರರಂಗದ ಖ್ಯಾತ ನಟಿಯಾಗಿರುವ ಭಾವನ ಅವರನ್ನು ಅಪಹರಿಸಿ ಕಿರುಕುಳ ನೀಡಿದ ಘಟನೆ ಕೇರಳದ ಜನತೆಗೆ ಶಾಕ್ ನೀಡಿದ್ದು, ಮಾತ್ರವಲ್ಲ ಈ ಘಟನೆ ಚಾನೆಲ್‌ಗಳಲ್ಲಿ ಭಾರೀ ಚರ್ಚೆಗೆ ಆಸ್ಪದವಾಗಿದೆ. ಚಿತ್ರರಂಗ ಈ ಘಟನೆಯನ್ನು ತೀವ್ರವಾಗಿ ಖಂಡಿಸಿತು. ಇಂತಹ ಘಟನೆ ಪ್ರಥಮ ಅಲ್ಲ ಎಂಬ ಮಾತೂ ಕೇಳಿ ಬಂತು. ಆದರೆ ಹಿಂದೆ ನಡೆದ ಇಂತಹ ಹಲವು ಘಟನೆಗಳು ಪೊಲೀಸ್ ಠಾಣೆ ಮೆಟ್ಟಲೇರದೆ ಮುಚ್ಚಿ ಹೋದವು ಇವೆ. ಇಂತಹ ಘಟನೆ ಪೊಲೀಸ್ ಠಾಣೆಗೇರಿದರೆ ವ್ಯಾಪಕ ಸುದ್ದಿಯಾಗುವುದಲ್ಲದೇ ಮಾನಹಾನಿಗೂ ಕಾರಣವಾಗುತ್ತದೆ. ಈ ಕಾರಣದಿಂದ ಇಂತಹ ಘಟನೆಗಳು ಪರಸ್ಪರ ಮಾತುಕತೆಯಿಂದ ನಿವಾರಿಸಿಕೊಂಡವೂ ಇವೆ.