ಕೇರಳ: ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳ ಮೇಲೆ ಅತ್ಯಾಚಾರವೆಸಗಲು ಪ್ರಿಯಕರನಿಗೆ ಅವಕಾಶ ಮಾಡಿಕೊಟ್ಟಿರುವ ಆರೋಪದ ಮೇಲೆ ನ್ಯಾಯಾಲಯ ಮಹಿಳೆಗೆ 40 ವರ್ಷಗಳ ಜೈಲು ಶಿಕ್ಷೆ ಮತ್ತು 20 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಏನಿದು ಪ್ರಕರಣ:
ಈ ಘಟನೆ ಮಾರ್ಚ್ 2018 ರಿಂದ ಸೆಪ್ಟೆಂಬರ್ 2019 ರ ನಡುವೆ ನಡೆದಿದೆ. ಆರೋಪಿ ಮಹಿಳೆ ಅಂದು ಮಾನಸಿಕ ಅಸ್ವಸ್ಥವಾಗಿರುವ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಆ ಬಳಿಕ ಈಕೆ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ತನ್ನ ಸ್ನೇಹಿತ ಶಿಶುಪಾಲನ್ ಜೊತೆ ವಾಸಿಸುತ್ತಿದ್ದಳು. ಆಕೆಯೊಂದಿಗೆ ಆಕೆಯ 7 ವರ್ಷ ಹಾಗೂ ೧೧ ವರ್ಷದ ಇಬ್ಬರು ಹೆಣ್ಣು ಮಕ್ಕಳು ಜೊತೆಗೆ ವಾಸವಾಗಿದ್ದರು. ಈ ವೇಳೆ ಶಿಶುಪಾಲ್ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರವೆಸಗಲು ಆರಂಭಿಸಿದ್ದಾನೆ ಇದಕ್ಕೆ ಬಾಲಕಿಯರ ತಾಯಿಯ ಸಹಕಾರವೂ ಇತ್ತು ಎನ್ನಲಾಗಿದೆ.
ಅತ್ಯಾಚಾರ ವೆಸಗಿದ ವಿಚಾರವನ್ನು ಯಾರಿಗೂ ಹೇಳದಂತೆ ಮಕ್ಕಳಿಬ್ಬರಿಗೂ ಬೆದರಿಕೆ ಹಾಕಿದ್ದಾರೆ. ಆದರೆ ಕೆಲ ದಿನಗಳ ಬಳಿಕ ಇಬ್ಬರೂ ಬಾಲಕಿಯರು ಹೇಗೋ ಮನೆಯಿಂದ ತಪ್ಪಿಸಿಕೊಂಡು ಓಡಿ ಹೋಗಿ ಅಜ್ಜಿಯ ಮನೆಗೆ ಬಂದಿದ್ದಾರೆ. ಇಲ್ಲಿ ಮಕ್ಕಳು ತಮಗೆ ಆದ ಹಿಂಸೆಯನ್ನು ಅಜ್ಜಿಯ ಬಳಿ ಎಳೆಎಳೆಯಾಗಿ ಹೇಳಿದ್ದಾರೆ, ಕೂಡಲೇ ಎಚ್ಚೆತ್ತ ಅಜ್ಜಿ ಮಕ್ಕಳನ್ನು ಕರೆದುಕೊಂಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾದ ವಿಚಾರ ಗೊತ್ತಾಗುತ್ತಿದ್ದಂತೆ ಶಿಶುಪಾಲನ್ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಬಳಿಕ ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿದಾಗ ತಾನು ಶಿಶುಪಾಲನ್ ನನ್ನು ಪ್ರೀತಿಸುತ್ತಿದ್ದು ತನ್ನ ಮಕ್ಕಳ ಮೇಲೆ ಅತ್ಯಾಚಾರವೆಸಗಲು ನಾನೆ ಸಹಾಯ ಮಾಡುತ್ತಿದ್ದೆ ಎಂದು ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ, ಇದೆ ವಿಚಾರವಾಗಿ ಕೋರ್ಟ್ ಹೆತ್ತ ಮಕ್ಕಳ ಮೇಲೆ ದೌರ್ಜನ್ಯ ಎಸಗಲು ಕುಮ್ಮಕ್ಕು ನೀಡಿದ ತಾಯಿ ಕ್ಷಮೆಗೆ ಅನರ್ಹಳು ಎಂದು ಹೇಳಿ 40 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ 20 ಸಾವಿರ ರೂ. ದಂಡವನ್ನು ಕಟ್ಟುವಂತೆ ಆದೇಶ ಹೊರಡಿಸಿದೆ ಒಂದು ವೇಳೆ ದಂತ ಕಟ್ಟಲು ಸಾಧ್ಯವಾಗದಿದ್ದಲ್ಲಿ ಮತ್ತೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸುವ ಆದೇಶವನ್ನು ಹೊರಡಿಸಿದೆ.
ಇದನ್ನೂ ಓದಿ: Miracle: ಬೋರ್ ವೆಲ್ ನಲ್ಲಿ ನೀರಿನ ಬದಲು ಹಾಲು… ಪಾತ್ರೆ ಜೊತೆಗೆ ಮುಗಿಬಿದ್ದ ಜನ