ಪಾಲಕ್ಕಾಡ್: 2022 ರಲ್ಲಿ ನಡೆದ ಆರ್‌ಎಸ್‌ಎಸ್ ಮುಖಂಡನ ಹತ್ಯೆಗೆ ಸಂಬಂಧಿಸಿದಂತೆ ಬೇಕಾಗಿದ್ದ, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯನನ್ನು ಕೇರಳದಲ್ಲಿ ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು ತಿಳಿಸಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ 2022 ರ ಏಪ್ರಿಲ್ 16 ರಂದು ಆರ್‌ಎಸ್‌ಎಸ್ ಮುಖಂಡ ಶ್ರೀನಿವಾಸನ್ ಹತ್ಯೆಯಾದ ನಂತರ ಪ್ರಮುಖ ಆರೋಪಿ ಸಹೀರ್ ಕೆ.ವಿ. ತಲೆಗೆ 4 ಲಕ್ಷ ರೂ ಇನಾಮು ಘೋಷಿಸಲಾಗಿತ್ತು. ಆತ ತಲೆಮರೆಸಿಕೊಂಡಿದ್ದಎಂದು ಫೆಡರಲ್ ಏಜೆನ್ಸಿಯ ವಕ್ತಾರರು ತಿಳಿಸಿದ್ದಾರೆ.
ಬಂಧನವನ್ನು ಪ್ರಮುಖ ಪ್ರಗತಿ ಎಂದು ಬಣ್ಣಿಸಿದ ಅಧಿಕಾರಿ, ಎನ್‌ಐಎ ಪ್ಯುಗಿಟಿವ್ ಟ್ರ್ಯಾಕಿಂಗ್ ತಂಡ (ಎಫ್‌ಟಿಟಿ) ಅವರನ್ನು ಪಾಲಕ್ಕಾಡ್‌ನಲ್ಲಿರುವ ಸಂಬಂಧಿಕರ ಮನೆಯಲ್ಲಿ ಪತ್ತೆಹಚ್ಚಿ ಬಂಧಿಸಿದೆ ಎಂದು ಹೇಳಿದ್ದಾರೆ.