Advertisement

T20 ವಿಶ್ವಕಪ್‌; ಆಯೋಜನೆಯ ಕುರಿತು ಪರಿಶೀಲಿಸಲು ತ್ರಿಸದಸ್ಯರ ಸಮಿತಿ ರಚಿಸಿದ ಐಸಿಸಿ

09:08 PM Jul 22, 2024 | Team Udayavani |

ದುಬೈ: ಕಳೆದ ತಿಂಗಳು ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಸಹ-ಆತಿಥ್ಯ ವಹಿಸಿದ್ದ T20 ವಿಶ್ವಕಪ್‌ನಲ್ಲಿ ಅನಗತ್ಯ ನಷ್ಟ, ಪಿಚ್‌ಗಳ ಕಳಪೆ ಗುಣಮಟ್ಟ ಸೇರಿ ಹಲವು ಆರೋಪಗಳು ಕೇಳಿ ಬಂದಿವೆ. ಈ ಕುರಿತು ಪರಿಶೀಲಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಸೋಮವಾರ ತ್ರಿಸದಸ್ಯರ ಸಮಿತಿಯನ್ನು ರಚಿಸಿದೆ.

Advertisement

ಸಮಿತಿಯು ನ್ಯೂಜಿಲ್ಯಾಂಡ್ ನ ಮಾಜಿ ಬ್ಯಾಟ್ಸ್ ಮ್ಯಾನ್ ರೋಜರ್ ಟ್ವೆಸ್ ಮತ್ತು ಇತರ ಇಬ್ಬರು ನಿರ್ದೇಶಕರಾದ ಲಾಸನ್ ನೈಡೂ ಮತ್ತು ಐಸಿಸಿಯ ಉಪ ಅಧ್ಯಕ್ಷರಾಗಿರುವ ಇಮ್ರಾನ್ ಖ್ವಾಜಾ ಅವರನ್ನು ಒಳಗೊಂಡಿದೆ.

“ಐಸಿಸಿ ಟಿ 20 ವಿಶ್ವಕಪ್ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದು ಐಸಿಸಿ ಮಂಡಳಿಯು ದೃಢಪಡಿಸಿದೆ. ಇದನ್ನು ಮೂವರು ನಿರ್ದೇಶಕರಾದ ರೋಜರ್ ಟೂಸೆ, ಲಾಸನ್ ನೈಡೂ ಮತ್ತು ಇಮ್ರಾನ್ ಖ್ವಾಜಾ ಅವರು ಮೇಲ್ವಿಚಾರಣೆ ಮಾಡುತ್ತಾರೆ, ಅವರು ವರ್ಷದ ನಂತರ ಮಂಡಳಿಗೆ ವರದಿ ನೀಡುತ್ತಾರೆ”ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.

ನ್ಯೂಯಾರ್ಕ್, ಫ್ಲೋರಿಡಾ ಮತ್ತು ಡಲ್ಲಾಸ್‌ನಲ್ಲಿ ಪಂದ್ಯಗಳನ್ನು ನಡೆಸುವುದಕ್ಕಾಗಿ ಐಸಿಸಿಯು USD 20 ಮಿಲಿಯನ್‌ಗಿಂತಲೂ ಹೆಚ್ಚಿನ ನಷ್ಟವನ್ನು ಅನುಭವಿಸಿದೆ ಎಂದು ತಿಳಿದು ಬಂದಿದೆ.

ಟೂರ್ನಮೆಂಟ್‌ನಲ್ಲಿ ಅಮೆರಿಕದಲ್ಲಿನ ಪಂದ್ಯಗಳಿಗೆ ನಿಗದಿಪಡಿಸಿದ ಬಜೆಟ್ ಸುಮಾರು 150 ಮಿಲಿಯನ್ ಡಾಲರ್ ಆಗಿತ್ತು. ಕೆಲವು ಪ್ರಭಾವಿ ಮಂಡಳಿಯ ಸದಸ್ಯರ ಕಾರಣದಿಂದ ಬಜೆಟ್ ಮೀರಿದೆ ಎಂದು ತಿಳಿದುಬಂದಿದೆ. ಡ್ರಾಪ್-ಇನ್ ಪಿಚ್‌ಗಳ ಕಳಪೆ ಗುಣಮಟ್ಟ, ಟಿಕೆಟಿಂಗ್ ವ್ಯವಸ್ಥೆ ಮತ್ತು ವ್ಯವಸ್ಥಾಪನಾ ಸಮಸ್ಯೆಗಳು ICC ಯ ಸಂಕಟಗಳಿಗೆ ಕಾರಣವಾಗಿದೆ. ವಿವಿಧ ಟೆಂಡರ್‌ಗಳನ್ನು ಹೇಗೆ ಹಸ್ತಾಂತರಿಸಲಾಗಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸದೇ ಇರುವುದು ಕಳವಳವನ್ನು ಹೆಚ್ಚಿಸಿದೆ. ಕೆಲವು ಐಸಿಸಿ ಉನ್ನತ ಅಧಿಕಾರಿಗಳ ಪಾತ್ರವನ್ನು ಸಹ ಸಮಿತಿಯು ಕೂಲಂಕಷವಾಗಿ ಪರಿಶೀಲಿಸುತ್ತದೆ ಎಂದು ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next