Advertisement
14 ಜಿಲ್ಲೆಗಳಲ್ಲಿ ಪ್ರವಾಹ ಭೀತಿಕೇರಳ ಇತಿಹಾಸದಲ್ಲೇ ಇದೇ ಮೊದಲ ಬಾರಿ, ಕೇರಳ ವಿದ್ಯುತ್‌ಶಕ್ತಿ ಮಂಡಳಿಗೆ ಸೇರಿದ 52 ಅಣೆಕಟ್ಟು ಹಾಗೂ ಕೇರಳ ಜಲ ಆಯೋಗಕ್ಕೆ ಸೇರಿದ 22 ಅಣೆಕಟ್ಟುಗಳಲ್ಲಿ ನೀರು ಗರಿಷ್ಠ ಮಿತಿಯನ್ನೂ ಮೀರಿ ತುಂಬುತ್ತಿವೆ. ಪೆರಿಯಾರ್ ನದಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, 14 ಜಿಲ್ಲೆಗಳಿಗೆ ಪ್ರವಾಹದ ಮುನ್ನೆಚ್ಚರಿಕೆ ಕೊಡಲಾಗಿದೆ.
ಸದ್ಯಕ್ಕೆ ಜಲಾವೃತಗೊಂಡಿರುವ ಪಟ್ಟಣಂತಿಟ್ಟ, ಎರ್ನಾಕುಳಂ, ಅಲಪ್ಪುಳ ಮುಂತಾದೆಡೆ ಜನರು ಅಪಾರ್ಟ್ ಮೆಂಟ್‌ಗಳು, ಎತ್ತರ ಮನೆಗಳ ಛಾವಣಿಗಳನ್ನು ಏರಿ ನಿಂತು ನೆರವಿಗಾಗಿ ಕೂಗುತ್ತಿದ್ದಾರೆ. ಇಂಥ ನಾಗರಿಕರು ತಮ್ಮಲ್ಲಿನ ಮೊಬೈಲ್‌ಗಳಿಂದಲೇ ಸಾಮಾ ಜಿಕ ಜಾಲ ತಾಣಗಳಲ್ಲಿ ನೆರವಿಗಾಗಿ ಮೊರೆಯಿಡುತ್ತಿದ್ದಾರೆ. ನಿರ್ಗತಿಕರಿಗೆ ಆಹಾರ ಪೊಟ್ಟಣ, ಕುಡಿಯುವ ನೀರಿನ ಬಾಟಲಿಗಳನ್ನು ಸರಬರಾಜು ಮಾಡಲಾಗುತ್ತಿದೆ. ಪಟ್ಟಣಂತಿಟ್ಟ ಜಿಲ್ಲೆಯ ರಣ್ಣಿ ಎಂಬ ಪ್ರಾಂತ್ಯದಲ್ಲಿನ ಥಿಯಾಲಜಿ ಸೆಮಿನರಿ ಜಲಾವೃತವಾಗಿದ್ದ ರಿಂದಾಗಿ ಅದರೊಳಗೆ ಸಿಲುಕಿದ್ದ 20 ಮಂದಿಯನ್ನು ಏರ್ ಲಿಫ್ಟ್ ಮೂಲಕ ತಿರುವನಂತಪುರಂಗೆ ತರಲಾಗಿದೆ. ಮತ್ತೂಂದು ತುಕಡಿ
ಈಗಾಗಲೇ ಕೇರಳದಲ್ಲಿ ಪರಿಹಾರ ಕಾರ್ಯ ನಡೆಸುತ್ತಿರುವ ಭೂ ಸೇನೆ, ನೌಕಾ ಪಡೆ, ವಾಯು ಪಡೆ, ಕರಾವಳಿ ಪಡೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳ (ಎನ್‌ಡಿಆರ್‌ಎಫ್) ತುಕಡಿಗಳಿಗೆ ಸಹಾಯಕವಾಗಿ 40 ಸೈನಿಕರುಳ್ಳ ಮತ್ತೂಂದು ಸೇನಾ ತುಕಡಿಯನ್ನು ರವಾನಿಸಲು ತೀರ್ಮಾನಿಸಿದೆ.
Related Articles
ಕೇರಳದ ಕೇಂದ್ರ ಭಾಗದಲ್ಲಿ ಎಡಬಿಡದೇ ಮಳೆ ಸುರಿದು ಎಲ್ಲೆಲ್ಲೂ ನೀರು ತುಂಬಿಕೊಂಡಿರುವುದರಿಂದ ಆ ಭಾಗದ ರೈಲು ಸಂಚಾ ರಕ್ಕೆ ತೀವ್ರ ಅಡಚಣೆಯಾಗಿದೆ. ಹಾಗಾಗಿ, ತಿರುವನಂತಪುರ ದಿಂದ ಇತರೆಡೆಗೆ ಸಾಗುವ ಎಲ್ಲಾ ರೈಲುಗಳನ್ನು ರದ್ದುಗೊಳಿಸಲಾ ಗಿದೆ. ಕೊಚ್ಚಿ ಮೆಟ್ರೋ ರೈಲು ಮಾರ್ಗವೂ ಸ್ಥಗಿತವಾಗಿದೆ. ರಸ್ತೆ ಮಾರ್ಗಗಳನ್ನೂ ಬಂದ್ ಮಾಡಲಾಗಿದೆ.
Advertisement
ಸುಪ್ರೀಂ ಆತಂಕ ಕೇರಳದ ಪ್ರವಾಹ ಪರಿಸ್ಥಿತಿಯನ್ನು ವಿನಾಶಕಾರಿ ಎಂದು ಬಣ್ಣಿಸಿರುವ ಸುಪ್ರೀಂಕೋರ್ಟ್, ಮುಲ್ಲಪೆರಿಯಾರ್ ಅಣೆಕಟ್ಟಿನಲ್ಲಿರುವ ನೀರನ್ನು ಕಡಿಮೆ ಮಾಡುವ ಬಗ್ಗೆ ಕೇರಳ ಮತ್ತು ತಮಿಳುನಾಡು ನಡುವೆ ಎದ್ದಿರುವ ವಿವಾದದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲು ತಾನು ಅನುವು ಮಾಡಿಕೊಡುವುದಾಗಿ ಹೇಳಿದೆ. ಮುಲ್ಲಪೆರಿಯಾರ್ ಅಣೆಕಟ್ಟಿನ ಗರಿಷ್ಟ ಮಟ್ಟ 142 ಅಡಿ ಇದ್ದು, ಇದನ್ನು ಮೀರಿ ನೀರು ಸಂಗ್ರಹವಾಗಿರುವುದರಿಂದ ಅಣೆಕಟ್ಟಿನ ಕ್ರೆಸ್ಟ್ ಗೇಟ್ ತೆರೆಯಲು ಕೇರಳ ಕಾತುರಿಸುತ್ತಿದ್ದರೆ, ಕ್ರೆಸ್ಟ್ ಗೇಟ್ ತೆರೆಯುವುದರಿಂದ ಪ್ರವಾಹದ ಭೀತಿ ತಲೆದೋರಲಿದೆ ಎಂದು ಆಪಾದಿಸಿರುವ ತಮಿಳುನಾಡು ಗೇಟ್ ತೆರೆಯದಂತೆ ತಾಕೀತು ಮಾಡಿದೆ. ಹಾಗಾಗಿ, ಈ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.