Advertisement

New criminal law ಅಡಿಯಲ್ಲಿ ಕನ್ನಡಿಗನ ವಿರುದ್ಧ ಮೊದಲ ಕೇಸ್ ದಾಖಲಿಸಿದ ಕೇರಳ ಪೊಲೀಸ್

07:29 PM Jul 01, 2024 | Team Udayavani |

ಮಲಪ್ಪುರಂ: ಹೊಸದಾಗಿ ಜಾರಿಗೆ ತಂದಿರುವ ಭಾರತೀಯ ನ್ಯಾಯ ಸಂಹಿತೆ(Bharatiya Nyaya Sanhita) ಅಡಿಯಲ್ಲಿ ಕೇರಳ ಪೊಲೀಸರು ಕರ್ನಾಟಕದ 24 ವರ್ಷದ ಯುವಕನ ವಿರುದ್ಧ ಮೊದಲ ಎಫ್‌ಐಆರ್ ದಾಖಲಿಸಿದ್ದಾರೆ.

Advertisement

ಕೊಂಡೊಟ್ಟಿ ಪೊಲೀಸ್ ಠಾಣೆ ಬಳಿ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ಮಡಿಕೇರಿ ಮೂಲದ ಯುವಕನನ್ನು ವಶಕ್ಕೆ ಪಡೆಯಲಾಗಿದೆ.

ಯುವಕ, ಹೆಲ್ಮೆಟ್ ಧರಿಸದಿದ್ದಕ್ಕಾಗಿ BNS ನ ಸೆಕ್ಷನ್ 281 ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 194D ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಕೊಳತ್ತೂರು ಜಂಕ್ಷನ್‌ನಲ್ಲಿ ಯುವಕ ಮಧ್ಯರಾತ್ರಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಮಧ್ಯರಾತ್ರಿ 12:20 ಕ್ಕೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಯ ದ್ವಿಚಕ್ರ ವಾಹನವನ್ನು ವಶಕ್ಕೆ ತೆಗೆದುಕೊಂಡು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಎಸ್‌ಎಚ್‌ಒ ದೀಪಕುಮಾರ್ ಖಚಿತಪಡಿಸಿದ್ದಾರೆ.

ವಸಾಹತುಶಾಹಿ ಯುಗದ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಗಳ ಬದಲಿಗೆ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನವನ್ನು ಅನುಸರಿಸುವ ಅಡಿಯಲ್ಲಿ ಈ ಎಫ್‌ಐಆರ್ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next